Breaking News

ಅಕ್ಕನ ಮದುವೆ ವೇದಿಕೆ ಮೇಲೆ ಭಾವನಿಗೇ ಕಿಸ್ ಕೊಟ್ಟ ನಾದಿನಿ! ವೈರಲ್ ಆಯ್ತು ವಿಡಿಯೋ

Spread the love

ಬೆಂಗಳೂರು: ಮದುವೆಯೆಂದರೆ ಅಲ್ಲಿ ಖುಷಿ, ಸಂಭ್ರಮವೆಲ್ಲ ಮಾಮೂಲಿ. ಅದೇ ಖುಷಿಯಲ್ಲಿ ಯಾರಾದರೂ ಒಬ್ಬ ಹೆಣ್ಣು ಮಗಳು ಓಡಿ ಬಂದು ಮದುಮಗನಿಗೇ ಮುತ್ತು ಕೊಟ್ಟುಬಿಟ್ಟರೆ? ಹೌದು. ಇಂತದ್ದೊಂದು ಘಟನೆ ನಿಜವಾಗಿಯೂ ನಡೆದಿದೆ.

ಅಲ್ಲೊಂದು ಮದುವೆ ನಡೆಯುತ್ತಿತ್ತು. ನದ ದಂಪತಿಯನ್ನು ವೇದಿಕೆಯಲ್ಲಿ ಕೂರಿಸಿ ಕುಟುಂಬಸ್ಥರು ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವ ಸಂಭ್ರಮದಲ್ಲಿದ್ದರು. ಈ ವೇಳೆ ಫೋಟೋಕ್ಕೆಂದು ದಂಪತಿ ಜತೆ ಕುಳಿತಿದ್ದ ವಧುವಿನ ತಂಗಿ ಒಮ್ಮೆಲೆ ಬಗ್ಗಿ ವರನಿಗೆ ಮುತ್ತು ಕೊಟ್ಟಿದ್ದಾಳೆ. ಇದ್ದಕ್ಕಿದ್ದಂತೆ ನಾದಿನಿ ಈ ರೀತಿ ಮುತ್ತು ಕೊಡುತ್ತಿರುವುದನ್ನು ತಪ್ಪಿಸಿಕೊಳ್ಳಲು ವರ ಪ್ರಯತ್ನವನ್ನೂ ಮಾಡಿದ್ದಾನೆ. ಈ ಪ್ರಯತ್ನದಲ್ಲಿ ವರನ ಪೇಟ ಜಾರಿ ಬಿದ್ದಿದೆಯೇ ಹೊರೆತು ಮುತ್ತಿನಿಂದ ತಪ್ಪಿಸಿಕೊಳ್ಳಲು ಆಗಿಲ್ಲ.

 

ಈ ನಾದಿನಿ ಮುತ್ತಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಎಲ್ಲಿ ಯಾವಾಗ ನಡೆದ ಮದುವೆ? ನಾದನಿ ಈ ರೀತಿ ಮಾಡುವುದಕ್ಕೆ ಕಾರಣವೇನು ಎನ್ನುವುದರ ಬಗ್ಗೆ ಮಾಹಿತಿಯಿಲ್ಲ.


Spread the love

About Laxminews 24x7

Check Also

ಗೌರವಯುತವಾಗಿ ನಡೆದುಕೊಳ್ಳಬೇಕು ಎಂದರೆ ಘರ್ಷಣೆ ಬೇಡ ಎಂದರ್ಥ: ಶಿವಲಿಂಗೇಗೌಡ ಸ್ಪಷ್ಟನೆ

Spread the loveಹಾಸನ: ಗೌರವಯುತವಾಗಿ ನಡೆದುಕೊಳ್ಳಬೇಕು ಎಂದರೆ ಘರ್ಷಣೆ ಬೇಡ ಎಂದು ಅರ್ಥ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ