Breaking News
Home / ರಾಜಕೀಯ / ಮೊಬೈಲ್​ನಲ್ಲೇ ಮಾತಾಡಿ 3 ದಿನದ ಗಂಡು ಮಗುವನ್ನೇ ಮಾರಿದ ಮಹಿಳೆ

ಮೊಬೈಲ್​ನಲ್ಲೇ ಮಾತಾಡಿ 3 ದಿನದ ಗಂಡು ಮಗುವನ್ನೇ ಮಾರಿದ ಮಹಿಳೆ

Spread the love

ಮೈಸೂರು: ಇಲ್ಲೊಬ್ಬ ಮಹಿಳೆ ಮೊಬೈಲ್​ನಲ್ಲೇ ವ್ಯವಹರಿಸಿ ತನ್ನ ಮೂರು ದಿನದ ಹಸುಗೂಸನ್ನೇ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ರೋಜಾ ಎಂಬಾಕೆಗೆ 7 ತಿಂಗಳ ಹಿಂದೆ ಗಂಡು ಮಗು ಆಗಿತ್ತು. ಆದರೆ ಆಕೆ ನನಗೆ ಹೆಣ್ಣು ಮಗು ಬೇಕಿತ್ತು, ಗಂಡು ಮಗು ಬೇಡ ಎಂದು ಎಚ್‌.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್​ನ ಹಕ್ಕಿಪಿಕ್ಕಿ ಜನಾಂಗದ ದಂಪತಿಗೆ ಮಾರಾಟ ಮಾಡಿದ್ದಳು.

ಅಂಬರೀಶ್ ಮತ್ತು ಮಧುಮಾಲತಿ ದಂಪತಿಯು ರೋಜಾಗೆ 1.5 ಲಕ್ಷ ರೂ. ಕೊಟ್ಟು ಮಗುವನ್ನ ಖರೀದಿಸಿದ್ದರು. ಈ ದಂಪತಿ ತಲೆಕೂದಲು ಬೆಳೆಯುವ ತೈಲ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ತೈಲ ಮಾರಾಟದ ವೇಳೆ ರೋಜಾಳ ಪರಿಚಯವಾಗಿತ್ತು. ಹಾಗಾಗಿ ಇವರ ಬಳಿ ರೋಜಾ ಮೊಬೈಲ್ ಕರೆ ಮೂಲಕವೇ ಚೌಕಾಸಿ ನಡೆಸಿ ಅಂತಿಮವಾಗಿ 1.5 ಲಕ್ಷ ರೂ.ಗೆ ಮಗು ಮಾರಿದ್ದಳು. ಅಂದಿನಿಂದ ಆ ಮಗು ಟೈಗರ್ ಬ್ಲಾಕ್​ನಲ್ಲಿ ಅಂಬರೀಷ್​ ಮತ್ತು ಮಧುಮಾಲಾತಿ ಆಶ್ರಯದಲ್ಲೇ ಬೆಳೆಯುತ್ತಿದೆ. ಇದೀಗ ಅಂದರೆ 7 ತಿಂಗಳ ಬಳಿಕ ಬೆಂಗಳೂರಿಂದ ಟೈಗರ್​ ಬ್ಲಾಕ್​ಗೆ ಬಂದ ರೋಜಾ, ಮಗು ಕೊಡುವಂತೆ ರಂಪಾಟ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಇದೀಗ ಈ ಮಗು ಅಪಹರಣವಾಗಿತ್ತೇ? ಎಂಬ ಅನುಮಾನವೂ ಕಾಡುತ್ತಿದೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ