Breaking News

ನಾಯಿ ಜೊತೆ ಬಂದ ಯುವತಿ ಪೊಲೀಸರ ಜೊತೆಗೆ ಫುಲ್ ಜಗಳ..!

Spread the love

ಮೈಸೂರು: ಕೊರೊನಾ ಕಂಟ್ರೋಲ್ ಗೆ ಅಂತ ಜಾರಿಯಲ್ಲಿರುವ ಲಾಕ್ಡೌನ್ ಇನ್ನು ಜಾರಿಯಲ್ಲಿದೆ. ಆದ್ರೆ ಜನ ಕೊರೊನಾಗೂ ಹೆದರುತ್ತಿಲ್ಲ, ಲಾಕ್ಡೌನ್ ಗೂ ಕ್ಯಾರೆ ಎನ್ನುತ್ತಿಲ್ಲ. ಕಾವಲಿಗೆಂದು ಇರುವ ಪೊಲೀಸರಿಗೂ ಅವಾಸ್ ಹಾಕಿಕೊಂಡು ಓಡಾಡುತ್ತಿದ್ದಾರೆ. ಇಂಥದ್ದೇ ಘಟನೆ ಜಿಲ್ಲೆಯಲ್ಲೂ ನಡೆದಿದೆ.

ಯುವತಿಯೊಬ್ಬಳು ನಾಯಿಯನ್ನು ಕರೆದುಕೊಂಡು ಸಿಟಿ ರೌಂಡ್ಸ್ ಬಂದಿದ್ದಾಳೆ. ಅದು ಬೈಕ್ ನಲ್ಲಿ. ಅಡ್ಡಾದಿಡ್ಡಿ ಓಡಾಡುವ ಹಾಗೆ ಇಲ್ಲ ಎಂದಾಗಲೇ ಆ ಸಮಯದಲ್ಲೇ ಒಡಾಟ ನಡೆಸಿದ್ದಾಳೆ. ಪೊಲೀಸರು ಸಹಜವಾಗಿಯೇ ತಪಾಸಣೆ ಮಾಡಿದಾಗ ಸಿಕ್ಕಿಬಿದ್ದಿದ್ದಾಳೆ.

ಪೊಲೀಸರು ನಿಲ್ಲಿಸು ಎಂದಾಗ ತಪ್ಪಿಸಿಕೊಳ್ಳೋದಕ್ಕೆ ಟ್ರೈ ಮಾಡಿದ್ದಾಳೆ. ಅಷ್ಟೇ ಅಲ್ಲ ಆ ರೂಲ್ಸ್, ಈ ರೂಲ್ಸ್ ಅಂತ ಪೊಲೀಸರಿಗೆ ಅವಾಸ್ ಹಾಕಿದ್ದಾಳೆ. ಮಹಿಳಾ ಪೊಲೀಸರೇ ವಿಚಾರಣೆ ನಡೆಸಲು ಹೋದಾಗಲೂ ಕಿರುಚಾಡಿ, ರಂಪಾಟ ನಡೆಸಿದ್ದಾಳೆ. ವಿ ವಿ ಪುರಂ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ