Breaking News

ಸುಮಾರು 5 ಗಂಟೆಗೂ ಹೆಚ್ಚು ಸಮಯ ಕೊರೋನಾ ಸೋಂಕಿತನ ಮೃತ ದೇಹವನ್ನು ಹೊರಗಿಟ್ಟು ಗೋಕಾಕ ಸರ್ಕಾರಿ ಆಸ್ಪತ್ರೆ   ನಿರ್ಲಕ್ಷ

Spread the love

ಗೋಕಾಕ: ಸುಮಾರು 5 ಗಂಟೆಗೂ ಹೆಚ್ಚು ಸಮಯ ಕೊರೋನಾ ಸೋಂಕಿತನ ಮೃತ ದೇಹವನ್ನು ಹೊರಗಿಟ್ಟು ಗೋಕಾಕ ಸರ್ಕಾರಿ ಆಸ್ಪತ್ರೆ   ನಿರ್ಲಕ್ಷ ತೋರಿದ್ದಾರೆ.

ಗೋಕಾಕದಲ್ಲಿ ಇದು  ಮತ್ತೊಂದು ಹೃದಯ ಕಳುಕುವ ಘಟನೆಯಾಗಿದ್ದು,  ಎರಡು ದಿನಗಳ ಹಿಂದೆ ಗೋಕಾಕ ಸರಕಾರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿ ಮೂಡಲಗಿ ಪುರಸಭೆಯ ಸಿಬ್ಬಂದಿಯಾಗಿದ್ದು ಮೃತ ದೇಹವನ್ನು  ಹೊರಗಡೆ ಇಟ್ಟಿದ್ದಾರೆ.

ಮೃತ ದೇಹವನ್ನು ಬೇಗನೆ ಅಂತ್ಯ ಸಂಸ್ಕಾರ ಮಾಡದೆ ಬೇಕಾಬಿಟ್ಟಿಯಾಗಿ ಮುಂಜಾನೆ 7 ಗಂಟೆಯಿಂದ ಹೊರಗಡೆ ಇಟ್ಟು ಇಲ್ಲಿನ ಸಿಬ್ಬಂದಿಗಳು ನಿರ್ಲಕ್ಷ ತೊರಿದ್ದಾರೆ .ಮಧ್ಯಾಹ್ನದ ವರೆಗೂ ಮೂರು
ಅಂಬುಲೇನ್ಸ ಇದ್ದರೂ ಸಹ  ಮೃತ ದೇಹವನ್ನು ಅಂತ್ಯಕ್ರಿಯೆ ನಡೆಸದೆ ಇಟ್ಟಿದ್ದಾರೆ.

ಅದಲ್ಲದೆ ಗೋಕಾಕ ಕೋವಿಡ್ ಸೆಂಟರಗೆ ಸೋಂಕಿತರ ವ್ಯಕ್ತಿಯ ಸಂಬಂಧಿಕರು ಹೊರಗಿನಿಂದ ಬಂದು ಯಾವಾಗ ಬೇಕಾದಾಗ ಊಟ ನೀಡುತಿದ್ದಾರೆ, ಇತ್ತ ತಾಲೂಕಾ ಆರೋಗ್ಯ ಅಧಿಕಾರಿ ಜಗದೀಶ ಜಿಂಗಿಯವರು ಯಾರಿಗೂ ಹೊರಗಿನಿಂದ ಊಟ ನೀಡಬಾರದೆಂದು ಗೊತ್ತಿದ್ದರೂ ಸಹ ಇಲ್ಲಿನ ವೈದ್ಯರ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ