Breaking News

ವಾಹನಗಳ ಎಂಜಿನ್ ಹಾಳಾಗಬಹುದು: ಹೆಚ್ಚಿನ ಪ್ರಮಾಣದ ಎಥೆನಾಲ್ ಬಳಕೆ ಎಫೆಕ್ಟ್ ಬಗ್ಗೆ ತಜ್ಞರು ಹೇಳೋದೇನು?

Spread the love

ಬೆಂಗಳೂರು: ಎಂಜಿನ್ ಸಾಮರ್ಥ್ಯಕ್ಕೆ ಅನುಗುಣವಾಗಿ ಎಥೆನಾಲ್  ಮಿಶ್ರಣ ಮಾಡುವುದು ಅಗತ್ಯ. ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣದಿಂದ ವಾಹನಗಳ ಎಂಜಿನ್ ಹಾಳಾಗಬಹುದು ಎಂದು ಬೆಂಗಳೂರು ವಿವಿಯ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಜಿ.ಕೃಷ್ಣಮೂರ್ತಿ ಹೇಳಿದರು.

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಆರ್ಥಿಕವಾಗಿ ಅನುಕೂಲಕರ. ಎಂಜಿನ್ ಸಾಮರ್ಥ್ಯಕ್ಕೆ ಅನುಗುಣವಾಗಿ ಎಥೆನಾಲ್ ಮಿಶ್ರಣ ಮಾಡುವುದು ಅಗತ್ಯ. ಸಾಮಾನ್ಯ ವಾಹನಗಳ ಎಂಜಿನ್‌ಗಳಿಗೆ ಶೇ.20ರಷ್ಟು ಎಥೆನಾಲ್ ಮಿಶ್ರಣ ಸೂಕ್ತ. ಕೆಲವು ಮಾಡಿಫೈಡ್ ಎಂಜಿನ್‌ಗಳು ಶೇ.25ರಿಂದ 30ರಷ್ಟು ಎಥೆನಾಲ್ ಮಿಶ್ರಣ ಸಹಿಸಿಕೊಳ್ಳಬಹುದು. ವಾಹನಗಳ ಎಂಜಿನ್ ವಿನ್ಯಾಸಕ್ಕೆ ಅನುಗುಣವಾಗಿ ಎಥೆನಾಲ್ ಬಳಕೆ ಮಾಡಬೇಕು. ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣದಿಂದ ಮೈಲೇಜ್ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಎಂಜಿನ್‌ಗೆ ಸೂಕ್ತವಲ್ಲದ ಎಥೆನಾಲ್ ಬಳಕೆಯಿಂದ ನಾಕಿಂಗ್ ಸಮಸ್ಯೆ ಉಂಟಾಗಬಹುದು. ಎಂಜಿನ್‌ನಲ್ಲಿ ಶಾಕ್‌ವೇವ್ ಉಂಟಾಗಿ ಸ್ಪಾರ್ಕ್ ಪ್ಲಗ್ ಮತ್ತು ಸಿಲಿಂಡರ್ ವಾಲ್ಟ್‌ಗಳ ಮೇಲೆ ಪರಿಣಾಮ ಬೀರಬಹುದು. ಎಥೆನಾಲ್ ಪ್ರಮಾಣ ಹೆಚ್ಚಾದರೆ ಎಂಜಿನ್ ಕಾರ್ಯಕ್ಷಮತೆ ಕುಸಿಯುವ ಸಾಧ್ಯತೆ ಇದೆ. ವಾಹನದ ಎಂಜಿನ್ ವಿನ್ಯಾಸಕ್ಕೆ ಹೊಂದುವ ಇಂಧನ ಬಳಕೆ ಮಾಡುವುದು ಉತ್ತಮ ಎಂದರು.

ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಿಸಿದರೆ ವಾಹನಗಳ ಎಂಜಿನ್ ಅಪ್‌ಗ್ರೇಡ್ ಅಗತ್ಯ. ಎಥೆನಾಲ್ ಬಳಕೆಗೆ ಅನುಗುಣವಾಗಿ ಭಾರತೀಯ ವಾಹನಗಳ ಎಂಜಿನ್‌ಗಳನ್ನು ಮಾರ್ಪಡಿಸಬೇಕು. ಎಂಜಿನ್‌ನ ನಾಕಿಂಗ್ ರೆಸಿಸ್ಟೆನ್ಸ್ ಸಾಮರ್ಥ್ಯ ಹೆಚ್ಚಿಸುವುದು ಮುಖ್ಯ. ಆಕ್ಟೇನ್ ರೇಟಿಂಗ್ ಹೆಚ್ಚಿದಷ್ಟು ಎಂಜಿನ್‌ನಲ್ಲಿ ನಾಕಿಂಗ್ ಸಮಸ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಎಥೆನಾಲ್ ಮತ್ತು ಪೆಟ್ರೋಲ್ ಎರಡರಲ್ಲೂ ಕಾರ್ಬನ್ ಅಂಶವಿದೆ. ಸಂಪೂರ್ಣ ದಹನ ಪ್ರಕ್ರಿಯೆ ನಡೆದರೆ ಕಾರ್ಬನ್ ಮಾನಾಕ್ಸೈಡ್‌ ಹೊರಸೂಸುವಿಕೆ ನಿಯಂತ್ರಿಸಬಹುದು. ಆದರೆ, ಕಾರ್ಬನ್ ಡೈಆಕ್ಸೈಡ್‌ ಹೊರಸೂಸುವಿಕೆ ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಿಲ್ಲ. ಕಾರ್ಬನ್ ಎಮಿಷನ್ ಸಂಪೂರ್ಣವಾಗಿ ಕಡಿಮೆ ಮಾಡಲು ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಬೇಕು ಎಂದು ವಿವರಿಸಿದರು.


Spread the love

About Laxminews 24x7

Check Also

ಮಹಾರಾಜರು ಅರಮನೆ ಕಟ್ಟಿಸಿದ್ದು ಜನರ ತೆರಿಗೆಯ ಹಣದಿಂದಲೇ, ಎಲ್ಲವೂ ಜನರಿಗೇ ಸೇರಬೇಕು: ಯತೀಂದ್ರ ಸಿದ್ದರಾಮಯ್ಯ

Spread the loveಮೈಸೂರು: ಮಹಾರಾಜರು ಅರಮನೆ ಕಟ್ಟಿಸಿದ್ದು ಕೂಡ ಜನರ ತೆರಿಗೆಯ ಹಣದಿಂದಲೇ, ಹೀಗಾಗಿ ಎಲ್ಲವೂ ಜನರಿಗೇ ಸೇರಬೇಕು ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ