ಮೈಸೂರು: ಮಹಾರಾಜರು ಅರಮನೆ ಕಟ್ಟಿಸಿದ್ದು ಕೂಡ ಜನರ ತೆರಿಗೆಯ ಹಣದಿಂದಲೇ, ಹೀಗಾಗಿ ಎಲ್ಲವೂ ಜನರಿಗೇ ಸೇರಬೇಕು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಮತ್ತೊಮ್ಮೆ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿಲ್ಲ ಎನ್ನುವ ಪ್ರಮೋದಾ ದೇವಿ ಒಡೆಯರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ನಾನು ಸಿಂಹಾಸನ ಅಂಬಾರಿ ಸರ್ಕಾರದ್ದು ಅಂತಾ ಎಲ್ಲಿಯೂ ಹೇಳಿಲ್ಲ. ನಾವು ಬಾಡಿಗೆ ಕೊಡುತ್ತೇವೆ ಎಂದು ಹೇಳಿದೆ. ಅವರು ಅದನ್ನ ಗೌರವಧನ ಅಂದಿದ್ದಾರೆ. ಇದರಲ್ಲಿ ಅಂತಹ ವ್ಯತ್ಯಾಸವೇನು ಇಲ್ಲ. ಅರಮನೆ ಕಟ್ಟಿಸಿದ್ದು ಮಹರಾಜರೇ, ಮಹಾರಾಜರು ಕಟ್ಟಿಸಿಲ್ಲ ಎಂದು ನಾನು ಹೇಳಿಲ್ಲ. ಆದರೆ ಅರಮನೆ ಕಟ್ಟಿಸಿದ್ದು ಕೂಡ ಜನರ ತೆರಿಗೆಯ ಹಣದಿಂದಲೇ. ಹೀಗಾಗಿ ಎಲ್ಲವೂ ಜನರಿಗೇ ಸೇರಬೇಕು ಎಂದರು.
ಸರ್ಕಾರವಾಗಲಿ, ರಾಜಾಡಳಿತವಾಗಲಿ ಜನರ ತರಿಗೆಯಿಂದಲೇ ನಡೆಯುವುದು. ಹೀಗಾಗಿ ಎಲ್ಲವೂ ಜನರಿಗೆ ಸೇರಿದ್ದು. ಪ್ರತಿ ವರ್ಷವೂ ರಾಜಮನೆತನದವರು ಸಹಕಾರ ಕೊಟ್ಟಿದ್ದಾರೆ. ಈ ವರ್ಷ ಒಂದಿಷ್ಟು ಗೊಂದಲ ಆಗಿದೆ. ಮುಂದಿನ ದಿನಗಳಲ್ಲಿ ಅವರು ಸಿಎಂ ಜೊತೆ ಮಾತನಾಡಿ, ಎಲ್ಲಾ ಗೊಂದಲ ಬಗೆಹರಿಸಿಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದ್ರು.
ಅರಮನೆಯಲ್ಲಿ ಜಟ್ಟಿ ಕಾಳಗ ರದ್ದು ವಿಚಾರ ಕುರಿತು ಮಾತನಾಡಿ, ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ಈಗಾಗಲೇ ಕೆಲವರ ಮೇಲೆ ಕರ್ತವ್ಯ ಲೋಪದ ದೂರುಗಳು ಬಂದಿವೆ. ಅಧಿಕಾರಿಗಳ ವರದಿ ಸಂಪೂರ್ಣವಾಗಿ ಬರಲಿ. ವರದಿ ಬಂದ ಮೇಲೆ ಯಾರೇ ತಪ್ಪು ಮಾಡಿದ್ರು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಕುಮಾರಸ್ವಾಮಿ ಮನೆಯಲ್ಲೇ ನೆಟ್‌ವರ್ಕ್ ಪತ್ತೆಯಾಗಿದೆ
ಇನ್ನೂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ತಾಳ್ಮೆಯಿಂದ ಎಲ್ಲರೂ ಕಾಯಬೇಕು. ತನಿಖೆಗೆ ಅವಸರ ಮಾಡಲು ಆಗುವುದಿಲ್ಲ. ತಾಳ್ಮೆಯಿಂದ ಕಾದರೆ ಎಲ್ಲ ಸತ್ಯ ಹೊರ ಬರುತ್ತದೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರ ದೆಹಲಿ ಮಬೆಯಲ್ಲೇ ಆರೋಪಿಯ ಮೊಬೈಲ್ ನೆಟವರ್ಕ್ ಪತ್ತೆಯಾಗಿದೆ. ಅದನ್ನೇ ಪೊಲೀಸ್ ಆಯುಕ್ತರು ಸಹ ಹೇಳಿದ್ದಾರೆ. ವಿಡಿಯೋ ಮಾಡಿದವರು ಅಪ್ಲೋಡ್ ಮಾಡಿದವರು ಎಲ್ಲರೂ ಪ್ರಕರಣದಲ್ಲಿ ಸಿಕ್ಕಿ ಬೀಳುತ್ತಾರೆ ಎಲ್ಲರ ಮೇಲೂ ಕ್ರಮ ಆಗುತ್ತದೆ. ಈ ವಿಶ್ವಾಸ ನನಗೆ ಇದೆ ಎಂದರು.
Laxmi News 24×7