Breaking News
Home / Uncategorized / ಸಲ್ಲು ಕೆರಿಯರ್​ ನಾಶ ಮಾಡುವ ಪ್ರತಿಜ್ಞೆ ಮಾಡಿದ್ದಾರೆ. ಕಮಾಲ್​ ಖಾನ್​:

ಸಲ್ಲು ಕೆರಿಯರ್​ ನಾಶ ಮಾಡುವ ಪ್ರತಿಜ್ಞೆ ಮಾಡಿದ್ದಾರೆ. ಕಮಾಲ್​ ಖಾನ್​:

Spread the love

ಸಲ್ಮಾನ್​ ಖಾನ್​ ಹಾಗೂ ಕಮಾಲ್​ ಖಾನ್​ ನಡುವೆ ಹೊತ್ತಿಕೊಂಡಿರುವ ದ್ವೇಷದ ಜ್ವಾಲೆ ಸದ್ಯಕ್ಕೆ ಆರುವ ರೀತಿ ಕಾಣುತ್ತಿಲ್ಲ. ‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್’​ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ನೀಡಿದ ಆರೋಪ ಹೊರಿಸಿ ಕಮಾಲ್​ ಖಾನ್​ ವಿರುದ್ಧ ಸಲ್ಲು ಮಾನನಷ್ಟ ಮೊಕದ್ದಮೆ ಹೂಡಿದ್ದರು ಎನ್ನಲಾಗಿತ್ತು. ಈಗ ಸಲ್ಲು ಕೆರಿಯರ್​ ನಾಶ ಮಾಡುವ ಪ್ರತಿಜ್ಞೆಯನ್ನು ಕಮಾಲ್​ ಮಾಡಿದ್ದಾರೆ.

ಇತ್ತೀಚೆಗೆ ಟ್ವೀಟ್​ ಒಂದನ್ನು ಮಾಡಿದ್ದ ಕಮಾಲ್​, ‘ಅವರು ಅನೇಕರ ಕೆರಿಯರ್​ ನಾಶ ಮಾಡಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ಯಾರಾದರೂ ಅವರ ವಿರುದ್ಧ ಮಾತನಾಡಿದರೆ ಅಂಥವರ ವೃತ್ತಿಜೀವನ ಕೊನೆಯಾದಂತೆ. ಈ ಬಾರಿ ಹಾಗಲ್ಲ. ನಾನೇ ಸಲ್ಮಾನ್​ ಖಾನ್​ ಕೆರಿಯರ್​ ನಾಶ ಮಾಡುತ್ತೇನೆ ಮತ್ತು ಅವರನ್ನು ಬೀದಿಗೆ ತರುತ್ತೇನೆ’ ಎಂದು ಹೇಳಿದ್ದಾರೆ.

 

ಇಂದು, ಕಮಾಲ್​ ಮತ್ತೊಂದು ಟ್ವೀಟ್​ ಮಾಡಿದ್ದಾರೆ. ಬಾಲಿವುಡ್​ ಗೂಂಡಾ ನಿಮಗೆ ಫೈಟ್​ ಮಾಡುವ ತಾಕತ್ತಿದ್ದರೆ ಎದುರು ಬಂದು ಮಾಡಿ. ಸಣ್ಣಪುಟ್ಟ ಸಿಂಗರ್​ ಹಾಗೂ ಕಷ್ಟಪಡುತ್ತಿರುವ ನಟಿಯರ ಹಿಂದೆ ನಿಂತು ಹೋರಾಡ ಬೇಡಿ. ನಾನು ನಿಮ್ಮ ಕೆರಿಯರ್​ ನಾಶ ಮಾಡಿ ಟಿವಿ ಆಯಕ್ಟರ್​ ಆಗಿ ಮಾಡುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

 

ಇದು ಅಸಾಧ್ಯವಾದ ಮಾತು ಎಂದು ಅನೇಕರು ಹೇಳಿಕೊಂಡಿದ್ದಾರೆ. ಸಲ್ಮಾನ್​ ಖಾನ್​ ಎಂಬುದು ಬಾಲಿವುಡ್​ನಲ್ಲಿ ಬ್ರ್ಯಾಂಡ್​ ಆಗಿದೆ. ಇನ್ನು ಹಲವು ವರ್ಷ ಕಳೆದರೂ ಸಲ್ಮಾನ್​ ಖಾನ್​ ಚಿತ್ರಕ್ಕೆ ಹಣ ಹೂಡೋಕೆ ನಿರ್ಮಾಪಕರು ಮುಂದೆ ಬರುತ್ತಾರೆ. ಹೀಗಾಗಿ, ಕಮಾಲ್​ ಹಾಕುವ ಧಮ್ಕಿಗಳು ಕೆಲಸ ಮಾಡುವುದಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಟ್ವೀಟ್​ ಮಾಡಿದ್ದ ಕಮಾಲ್, ‘ಒಂದೊಮ್ಮೆ ನಿರ್ಮಾಪಕರು ಹಾಗೂ ನಟರು ತಮ್ಮ ಸಿನಿಮಾಗಳ ವಿಮರ್ಶೆ ಮಾಡಬೇಡಿ ಎಂದು ಹೇಳಿದರೆ ಅಂಥ ಸಿನಿಮಾವನ್ನು ನಾನೆಂದೂ ವಿಮರ್ಶೆ ಮಾಡಿಲ್ಲ. ಆದರೆ, ಇಂದಿನಿಂದ ಈ ವ್ಯಕ್ತಿ ನನ್ನನ್ನು ಕೇಳಿಕೊಳ್ಳಲಿ ಅಥವಾ ಕಾಲಿಗೇ ಬೀಳಲಿ. ನಾನು ಅವರ ಸಿನಿಮಾ ವಿಮರ್ಶೆ ಮಾಡಿಯೇ ಮಾಡುತ್ತೇನೆ’ ಎಂದಿದ್ದಾರೆ. ಈ ಮೂಲಕ ಸಲ್ಲು ವಿರುದ್ಧ ಕಮಾಲ್​ ಜಿದ್ದಿಗೆ ಬಿದ್ದಿದ್ದರು.


Spread the love

About Laxminews 24x7

Check Also

ನಾಳೆಯಿಂದ ಪಿಯುಸಿ ಪೂರಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ

Spread the loveನಾಳೆಯಿಂದ ಪಿಯುಸಿ ಪೂರಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಹುಬ್ಬಳ್ಳಿ, ಏಪ್ರಿಲ್ 28: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ