Breaking News

ಆರ್ಗ್ಯಾನಿಕ್​​ ಬ್ಯೂಟಿ’ ಹೆಸರಿನಲ್ಲಿ ಸೆಕ್ಸ್‌ ; ಐವರು ಮಹಿಳೆಯರ ಬಂಧನ

Spread the love

ಗ್ವಾಲಿಯರ್​(ಮಧ್ಯಪ್ರದೇಶ): ಗ್ವಾಲಿಯರ್​ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸೆಕ್ಸ್​​ ರಾಕೆಟ್​​ ಅಡ್ಡೆ ಮೇಲೆ ದಾಳಿ ನಡೆಸಿರುವ ಕ್ರೈಂ ಬ್ರ್ಯಾಂಚ್​ ಪೊಲೀಸರು ಮಾಲೀಕ ಸೇರಿದಂತೆ ಐವರು ಮಹಿಳೆಯರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಐವರು ಮಹಿಳೆಯರ ಬಂಧನ’ಆರ್ಗ್ಯಾನಿಕ್​​ ಬ್ಯೂಟಿ’ ಹೆಸರಿನಲ್ಲಿ ಸೆಕ್ಸ್​ ರಾಕೆಟ್​ ದಂಧೆ ನಡೆಸಲಾಗುತ್ತಿತ್ತು. ಖಚಿತ ಮಾಹಿತಿ ಪಡೆದುಕೊಂಡು ದಾಳಿ ನಡೆಸಿರುವ ಪೊಲೀಸರು ಐವರು ಮಹಿಳೆಯರು ಹಾಗೂ ದಂಧೆ ನಡೆಸುತ್ತಿದ್ದ ಮಾಲೀಕನ ಬಂಧನ ಮಾಡಿದ್ದಾರೆ.

ಕಳೆದ ಕೆಲ ತಿಂಗಳಿಂದ ಗೋವಿಂದ್​ಪುರ ಇಲಾಖೆಯಲ್ಲಿ ಆರ್ಗ್ಯಾನಿಕ್​ ಬ್ಯೂಟಿ ಎಂಬ ಹೆಸರಿನ ಬ್ಯೂಟಿ ಪಾರ್ಲರ್​ ಹೆಸರಿನಲ್ಲಿ ಸೆಕ್ಸ್​ ರಾಕೆಟ್​ ದಂಧೆ ನಡೆಸುತ್ತಿದ್ದರು. ದಾಳಿ ನಡೆಸಿರುವ ವೇಳೆ 15 ಸಾವಿರ ರೂ. ನಗದು ಹಣ ಸಿಕ್ಕಿದೆ ಎಂದು ಎಎಸ್​​ಪಿ ಹಿತಿಕಾ ವಾಸ್ಲೆ ಮಾಹಿತಿ ನೀಡಿದ್ದಾರೆ. ಈ ಹಿಂದೆ ಏಪ್ರಿಲ್​ ತಿಂಗಳಲ್ಲಿ ಗ್ವಾಲಿಯರ್​ನ ವಿಶ್ವವಿದ್ಯಾಲಯ ಪ್ರದೇಶದಲ್ಲಿ ದಾಳಿ ನಡೆಸಿ ಐವರು ಮಹಿಳೆಯರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಬಂಧಿತ ಹುಡುಗಿಯರು ದೆಹಲಿ ಹಾಗೂ ಕೋಲ್ಕತ್ತಾ ಮೂಲದವರು ಎನ್ನಲಾಗಿದೆ.


Spread the love

About Laxminews 24x7

Check Also

ಪ್ರಧಾನಿ ಕುರ್ಚಿ ಬಳಿ ಕೈ ಮಹಿಳಾ ಸದಸ್ಯರ ಪ್ರತಿಭಟನೆಯ ವಿಡಿಯೋ ಬಿಡುಗಡೆ – ಕಿರಣ್‌ ರಿಜಿಜು ಆಕ್ರೋಶ

Spread the love ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್‌ ಮಹಿಳಾ ಸದಸ್ಯರು ಪ್ರತಿಭಟನೆ ನಡೆಸಿದ್ದ ವಿಡಿಯೋವನ್ನು ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಕಿರಣ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ