Breaking News
Home / ಜಿಲ್ಲೆ / ಕೊಪ್ಪಳ / ಶಾಸಕ ರಾಘವೇಂದ್ರ ಹಿಟ್ನಾಳ್‍ಗೆ ಕೋವಿಡ್ 19 ದೃಢ

ಶಾಸಕ ರಾಘವೇಂದ್ರ ಹಿಟ್ನಾಳ್‍ಗೆ ಕೋವಿಡ್ 19 ದೃಢ

Spread the love

ಕೊಪ್ಪಳ: ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಶಾಸಕರಿಗೆ ಕೊರೊನಾ ದೃಢಪಟ್ಟ ಮಾಹಿತಿಯನ್ನು ಜಿಲ್ಲಾಧಿಕಾರಿ ಸೂರಳ್ಕರ್ ವಿಕಾಸ್ ಕಿಶೋರ್ ಬಹಿರಂಗಪಡಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಶಾಸಕ ರಾಘವೇಂದ್ರ ಹಿಟ್ನಾಳ್‍ಗೆ ಕೊರೊನಾ ಸೊಂಕು ತಗಲಿರುವ ಬಗ್ಗೆ ಕ್ಷೇತ್ರದಾದ್ಯಂತ ಹರಿದಾಡಿತ್ತು.ಈಗ ಸ್ವತಃ ಜಿಲ್ಲಾಧಿಕಾರಿಗಳೇ ಶಾಸಕರಿಗೆ ಸೋಂಕು ತಗಲಿರುವುದನ್ನು ದೃಢಪಡಿಸಿದ್ದಾರೆ. ಕೆಲದಿನಗಳ ಹಿಂದೇ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿರವರಿಗೆ ಕೊರೊನಾ ದೃಢಪಟ್ಟಿತ್ತು. ಗಂಗಾವತಿ ಶಾಸಕರ ಪಕ್ಕದಲ್ಲಿಯೇ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕುಳಿತಿದ್ದರು. ಅದಕ್ಕಾಗಿ ಹೋಮ್ ಕ್ವಾರಂಟೈನ್ ಗೆ ಒಳಗಾಗಿದ್ದರು. 

ಹೋಮ್ ಕ್ವಾರಂಟೈನ್ ಮುಗಿಸಿಕೊಂಡು ಎರಡು ದಿನಗಳ ಹಿಂದೆಯಷ್ಟೇ ಕಾಟ್ರಳ್ಳಿ ಗ್ರಾಮದ ಹಾಲು ಘಟಕವನ್ನ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಅದಾದ ಬಳಿಕ ಹಿಟ್ನಾಳ್‍ಗೆ ಕೊರೊನಾ ಧೃಡಪಟ್ಟಿದೆ. ಈಗ ಶಾಕಸರ ಒಡನಾಡಿಯಾಗಿದ್ದ ಕಾರ್ಯಕರ್ತರಿಗೂ ಹಾಗೂ ಹಿಂಬಾಲಕರಿಗೂ ಆತಂಕ ಶುರುವಾಗಿದೆ.


Spread the love

About Laxminews 24x7

Check Also

ಆಗಸ್ಟ್​ ತಿಂಗಳೊಳಗೆ ಐದೂ ಗ್ಯಾರಂಟಿ ಯೋಜನೆಗಳನ್ನು ನೂರಕ್ಕೆ ನೂರರಷ್ಟು ಜಾರಿ ಮಾಡುತ್ತೇವೆ ಎಂದು ಸಚಿವ ಶಿವರಾಜ ತಂಗಡಗಿ

Spread the love ಕೊಪ್ಪಳ: ಯುಪಿಎ ಸರ್ಕಾರದ ಅವಧಿಯಲ್ಲಿ ಆಹಾರ ಭದ್ರತೆ ಕಾನೂನು ಜಾರಿಗೆ ತರಲಾಗಿದೆ. ನಾವು ಐದೂ ಗ್ಯಾರಂಟಿಗಳನ್ನು ಯಶಸ್ವಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ