Breaking News
Home / ರಾಜಕೀಯ / ಇಂದು ಕೊರೊನಾ ಕೇಸ್​ಗಿಂತ ಗುಣಮುಖರಾದವ್ರ ಸಂಖ್ಯೆ ಹೆಚ್ಚಳ, 24 ಗಂಟೆಗಳಲ್ಲಿ 3,56,082 ಮಂದಿ ಡಿಸ್ಚಾರ್ಜ್​

ಇಂದು ಕೊರೊನಾ ಕೇಸ್​ಗಿಂತ ಗುಣಮುಖರಾದವ್ರ ಸಂಖ್ಯೆ ಹೆಚ್ಚಳ, 24 ಗಂಟೆಗಳಲ್ಲಿ 3,56,082 ಮಂದಿ ಡಿಸ್ಚಾರ್ಜ್​

Spread the love

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 3,29,942 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 3,876 ಮಂದಿ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ನಿನ್ನೆಗೆ ಹೋಲಿಸಿದ್ರೆ ಇಂದು ವರದಿಯಾಗಿರೋ ಕೇಸ್​​ಗಳ ಸಂಖ್ಯೆ ಇಳಿಕೆ ಕಂಡಿದೆ. ಹಾಗೇ ಇಂದು ವರದಿಯಾಗಿರೋ ಹೊಸ ಕೇಸ್​ಗಳಿಗಿಂತ ಗುಣಮುಖರ ಸಂಖ್ಯೆ ಹೆಚ್ಚಿದ್ದು ಸಮಾಧಾನ ಮೂಡಿಸಿದೆ. ನಿನ್ನೆ ಒಂದೇ ದಿನ 3,66,161 ಕೊರೊನಾ ಪ್ರಕರಣಗಳು ಹಾಗೂ 3,754 ಸೋಂಕಿತರ ಸಾವು ವರದಿಯಾಗಿತ್ತು.

3,56,082 ಮಂದಿ ನಿನ್ನೆ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಸದ್ಯ 37,15,221 ಸಕ್ರಿಯ ಪ್ರಕರಣಗಳಿವೆ. ಈವರೆಗೆ ದೇಶದಲ್ಲಿ ಒಟ್ಟಾರೆ ವರದಿಯಾದ ಸೋಂಕಿತರ ಸಂಖ್ಯೆ 2,29,92,517ಕ್ಕೆ ಏರಿಕೆಯಾಗಿದೆ. ಹಾಗೇ ಇಲ್ಲಿವರೆಗೆ 1,90,27,304 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 2,49,992 ಮಂದಿ ಈವರೆಗೆ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ದೇಶದಾದ್ಯಂತ ಈವರೆಗೆ ಒಟ್ಟು 17,27,10,066 ಜನರಿಗೆ ಲಸಿಕೆ ನೀಡಲಾಗಿದೆ.

ಕೊರೊನಾ ಪ್ರಕರಣಗಳ ಅಂಕಿ-ಅಂಶ

  • ಒಟ್ಟು ಪ್ರಕರಣಗಳು: 2,29,92,517
  • ಒಟ್ಟು ಗುಣಮುಖರಾದವರು:1,90,27,304
  • ಈವರೆಗೆ ಸಾವನ್ನಪ್ಪಿದವರ ಸಂಖ್ಯೆ: 2,49,992
  • ಈವರೆಗಿನ ವ್ಯಾಕ್ಸಿನೇಷನ್: 17,27,10,066
  • ಈವರೆಗಿನ ವ್ಯಾಕ್ಸಿನೇಷನ್: 17,27,10,066

ಕೊರೊನಾದಿಂದ ರಕ್ಷಿಸಿಕೊಳ್ಳಲು ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ಮಾಸ್ಕ್ ಧರಿಸಿ, ಸೋಶಿಯಲ್ ಡಿಸ್ಟನ್ಸ್ ಕಾಪಾಡಿ. ಕೈ ತೊಳೆಯುತ್ತಿರಿ. ಮತ್ತು ಮೇ 1 ರಿಂದ 18ರ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಅರ್ಹರಾಗಿದ್ದು ರೆಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ https://www.cowin.gov.in/ ಇಲ್ಲಿಗೆ ಭೇಟಿ ಕೊಟ್ಟು ನೊಂದಣಿ ಮಾಡಿಕೊಳ್ಳಿ. ಮತ್ತೊಂದು ಮುಖ್ಯ ಸಂಗತಿ ಗಮನಿಸಿ CoWin ಆಯಪ್ ಸಾರ್ವಜನಿಕರಿಗೆ ಅಲ್ಲ. ಹೀಗಾಗಿ ಕಡ್ಡಾಯವಾಗಿ ವೆಬ್​ಸೈಟ್​ನಲ್ಲಿಯೇ ನೊಂದಾಯಿಸಿಕೊಳ್ಳಬೇಕು.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ