Breaking News

ನಾನು ಸತ್ತಿಲ್ಲ, ಆರೋಗ್ಯವಾಗಿ, ಆರಾಮಾಗಿ ಇದ್ದೀನಿ; ನಟ ದೊಡ್ಡಣ್ಣ

Spread the love

ನಾನು ಆರೋಗ್ಯವಾಗಿ, ಆರಾಮಾಗಿ ಮನೆಯಲ್ಲಿ ಇದ್ದೀನಿ ಎಂದು ವಿಡಿಯೋ ಮೂಲಕ ನಟ ದೊಡ್ಡಣ್ಣ ಸ್ಪಷ್ಟನೆ ನೀಡಿದ್ದಾರೆ. ದೊಡ್ಡಣ್ಣ ಇನ್ನಿಲ್ಲ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ದೊಡ್ಡಣ್ಣ ಫೋಟೋ ಹಾಕಿ RIP ಅಂತ ಬರೆದು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ಈ ಪೋಸ್ಟ್ ನೋಡಿ ಆತಂಕಗೊಂಡ ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಗಣ್ಯರು ದೊಡ್ಡಣ್ಣ ಅವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಸಾಕಷ್ಟು ಫೋನ್ ಕರೆಗಳು ಬರುತ್ತಿದ್ದಂತೆ ನಟ ದೊಡ್ಡ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ನಾನು ಸತ್ತಿಲ್ಲ ಬದುಕಿದ್ದೀನಿ ಎಂದು ಹೇಳಿದ್ದಾರೆ.

 

‘ಯಾರೋ ಕಿಡಿಗೇಡಿಗಳು ನನ್ನ ಫೋಟೋ ಹಾಕಿ rip ಅಂತ ಹಾಕಿದ್ದಾರೆ. ದೊಡ್ಡಣ್ಣ ನಿಧನರಾಗಿದ್ದಾರೆ ಎನ್ನುವ ಹಾಗೆ ಹಾಕಿದ್ದಾರೆ. ನೂರಾರು ಫೋನ್ ಬರ್ತಿದೆ. ಎಲ್ಲರಿಗೂ ಹೇಳಲು ಇಷ್ಟಪಡುತ್ತೇನೆ. ನಾನು ಮನೆಯಲ್ಲೇ ಇದ್ದೀನಿ, ಆರೋಗ್ಯವಾಗಿ, ಆರಾಮಾಗಿ ಇದ್ದೀನಿ. ಯಾರು ಭಯ ಪಡಬೇಕಾಗಿಲ್ಲ. ಕನ್ನಡ ನಾಡಿನ ಎಲ್ಲಾ ತಂದೆ-ತಾಯಿಗಳ ಆಶೀರ್ವಾದ ನನ್ನ ಮೇಲೆ ಇರುವವರೆಗೂ ನಿಮ್ಮ ದೊಡ್ಡಣ್ಣನಿಗೆ ಏನು ಆಗಲ್ಲ. ಆಯಸ್ಸು ಜಾಸ್ತಿ. ಯಾವುದೊ ಒಂದು ಕಂಟಕ ಭಗೆಹರಿಯಿತು ಅಂತ ಅಂದುಕೊಳ್ಳುತ್ತೇನೆ. ನಾನು ಆರೋಗ್ಯವಾಗಿ ಇದ್ದೀನಿ’ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ನೋಡಿ ಆತಂಕಗೊಂಡ ದೊಡ್ಡಣ್ಣ ಗೆಳೆಯ ಹಿರಿಯ ನಟ ಡಿಂಗ್ರಿ ನಾಗರಾಜ್ ಕೂಡ ಕರೆಮಾಡಿ ವಿಚಾರಿಸಿದ್ದಾರೆ. ಬಳಿಕ ಡಿಂಗ್ರಿ ನಾಗರಾಜ್ ಮಾತನಾಡಿ, ‘ದೊಡ್ಡಣ್ಣ ಆರೋಗ್ಯವಾಗಿದ್ದಾರೆ. ಈಗ ತಾನೆ ಅವರ ಜೊೆತೆ ಮಾತನಾಡಿದ್ದೇನೆ. ನೋಡು ನಾಗು ಯಾವನೋ ಹಾಕ್ಬಿಟ್ಟಿದ್ದಾನೆ. ನಿಂದು ಸೇರಿ 21ನೇ ಫೋನ್ ಅಂತ ಹೇಳಿದ್ರು. ದೊಡ್ಡಣ್ಣ ಚೆನ್ನಾಗಿದ್ದಾರೆ.’ ಎಂದು ಸ್ಪಷ್ಟೆನೆ ನೀಡಿದ್ದರು.


Spread the love

About Laxminews 24x7

Check Also

ಕ್ಯಾಬಿನೆಟ್‌ನಲ್ಲಿ ಕನಿಷ್ಠ ಐದು ಪರಿಷತ್ ಸದಸ್ಯರಿಗೆ ಅವಕಾಶ ನೀಡಿ – ರಣದೀಪ್ ಸುರ್ಜೆವಾಲಾಗೆ MLCಗಳಿಂದ ಮನವಿ

Spread the loveನವದೆಹಲಿ: ಪಂಚರಾಜ್ಯಗಳ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಹಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ