Breaking News
Home / ರಾಜಕೀಯ / ಸೋತು ಗೆದ್ದ ಸಾಹುಕಾರ

ಸೋತು ಗೆದ್ದ ಸಾಹುಕಾರ

Spread the love

ಗೋಕಾಕ: ಬೆಳಗಾವಿ ಇದೊಂದು ದೊಡ್ಡ ಜಿಲ್ಲೆ ಇಲ್ಲಿ 18 ವಿಧಾನಸಭಾ ಹಾಗೂ ಎರಡು ಲೋಕಸಭಾ ಕ್ಷೇತ್ರ ಗಳನ್ನ ಹೊಂದಿದ ದೊಡ್ಡ ಜಿಲ್ಲೆ .

ಇಲ್ಲಿ ಜಾರಕಿಹೊಳಿ ಅಂದ್ರೆ ಒಂದು ಶಕ್ತಿ ಬೆಳಗಾವಿಯ ಜನತೆಯ ಜನಪ್ರಿಯ ನಾಯಕರು ಯಾವದೇ ಸರ್ಕಾರ ಇರಲಿ ಎಲ್ಲಿಯಾದರೂ ಜಾರಕಿಹೊಳಿ ಸಹೋದರರು ಇದ್ದೆ ಇರತಾರೆ. ಇನ್ನು ಇವತ್ತಿನ ವಿಷಯಕ್ಕೆ ಬರೋದಾದರೆ ದಿವಂಗತ ಶ್ರೀ ಸುರೇಶ್ ಅಂಗಡಿಯವರ ನಿಧನದ ನಂತರ ಬೆಳಗಾವಿಯಲ್ಲಿ ಲೋಕಸಭಾ ಉಪ ಚುನಾವಣೆ ಮಾಡಲು ನಿರ್ಧಾರ ಮಾಡಲಾಯಿತು.

ಇನ್ನು ಬಿಜೆಪಿಯಿಂದ ಸುಮಾರು ಜನರ ಹೆಸರು ಕೇಳಿ ಬಂತು ಆದ್ರೆ ಕಾಂಗ್ರೆಸ್ ನಲ್ಲಿ ಮಾತ್ರ ಬೆಳಗಾವಿಯ ಬಿಜೆಪಿಯ ಭದ್ರ ಕೋಟೆಯನ್ನು ಚಿದ್ರ ಮಾಡುವ ಸೂಕ್ತ ವ್ಯಕ್ತಿ ಅಂದ್ರೆ ಸತೀಶ್ ಜಾರಕಿಹೊಳಿ ಎಂಬ ಹೆಸರು ಮಾತ್ರ ಕಾಂಗ್ರೆಸ್ ಹಾಯ್ ಕಮಾಂಡ್ ಬಳಿ ರಾಜ್ಯದ ನಾಯಕರು ಪ್ರಸ್ತಾಪಿಸಿದ್ದರು.

ಇನ್ನು ಸತೀಶ್ ಜಾರಕಿಹೊಳಿ ಅವರು ಲೋಕಸಭೆಯ ಅಭ್ಯರ್ಥಿ ಅಂತ ಅವರ ಗಮನಕ್ಕೆ ಬಂದ ತಕ್ಷಣ ಅವರು ಬೆಳಗಾವಿಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ತಾವು ಹಾಗೂ ತಮ್ಮ ಮಕ್ಕಳ ಜೊತೆ ಅವರ್ ಪರ ಪ್ರಚಾರ ನಡೆಸಿದ್ದಾರೆ .

ಅದಷ್ಟೇ ಅಲ್ಲದೇ ಸತೀಶ್ ಜಾರಕಿಹೊಳಿ ಅವರು ಕೂಡ ಸುಮಾರು ದಿನ ಹಳೆಯ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿದ್ದರು ತಮ್ಮ ಬೆಂಬಲಕ್ಕೆ ಅನೇಕ ಕಾಂಗ್ರೆಸ್ ನಾಯಕರು ಕೂಡ ನಿಂತಿದ್ದಾರೆ ಎಂದು ಅವರ್ ಗಮನಕ್ಕೆ ಬಂದಂತೆ ಬೆಳಗಾವಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಕೂಡ ಮಾಡಿದ್ದರು. ಅವ್ರಿಗೆ ಕಾಂಗ್ರೆಸ್ ಹಿರಿಯ ನಾಯಕರು ಅಷ್ಟೇ ಅಲ್ಲದೆ ಬೆಳಗಾವಿಯ ಶಾಸಕರು ಕೂಡ ಸಾಥ್ ನೀಡಿದರು.

ಇನ್ನು ಅವರ್ ಮಕ್ಕಳಾದ ರಾಹುಲ್ ಹಾಗೂ ಪ್ರಿಯಂಕಾ ಜಾರಕಿಹೊಳಿ ಅವರು ಕೂಡ ತಂದೆಯ ಪರ ಭರ್ಜರಿ ಪ್ರಚಾರ ನಡೆಸಿದ್ದರು.

ಇನ್ನು ಇವತ್ತಿನ ವಿಷಯಕ್ಕೆ ಬಾರೋ ದಾದ್ರೆ ಬೆಳಿಗ್ಗೆ ಚುನಾವಣೆಯ ಮತ ಎಣಿಕೆ ಆರಂಭ ಆಗುತ್ತಿದ್ದಂತೆ ಮೊದಲನೇ ಕೆಲವು ಸುತ್ತು ಗಳಲ್ಲಿ ಬಿಜೆಪಿ ಮುಂದೆ ಇತ್ತು

ಆದ್ರೆ ಸ್ವಲ್ಪ ಹೊತ್ತು ಆದ ನಂತರ ಕಾಂಗ್ರೆಸ್ ಸುಮಾರು ಚುನಾವಣೆಯ ಅಂತ್ಯದ್ ವರೆಗೂ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ಇತ್ತು ಮತಗಳ ಅಂತರದಲಿ ಏರು ಪೇರು ಇತ್ತು ಆದ್ರೂ ಮುನ್ನಡೆ ಇತ್ತು .

ನಮ್ಮ ಬೆಳಗಾವಿಯ ಲೋಕಸಭಾ ಚುನಾವಣೆ ಒಂದು ಐಪಿಎಲ್ ಮ್ಯಾಚ್ ನೋಡಿದ ಥರ ಎಲ್ಲರಲ್ಲೂ ಒಂದು ಕುತೂಹಲ ಮೂಡಿಸಿತ್ತು.

ಇನ್ನೇನು ಅಂತಿಮ ಹಂತ ಬಂದಂತೆ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಶುರುವಾಯ್ತು .

ಕೆಲವೊಂದು ಮತ ಯಂತ್ರ ಗಳು ಕೊನೆಯ ಹೊತ್ತಿಗೆ ಸ್ಥಗಿತ ಹೊಂದಿದ್ವು ಅಂತ ಕೂಡ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಣೆ ಆಗುತಿತ್ತು.

ಇನ್ನು ಕೆಲವೇ ಕ್ಷಣ ಗಳಲ್ಲಿ ನೋಡು ನೋಡು ತ್ತಿದ್ದಂತೆ ಬೆಳಿಗ್ಗೆ ಕಾಂಗ್ರೆಸ್ ಆಟ, ಸಂಜೆ ಬಿಜೆಪಿಯ ಆರ್ಭಟ , ಆದಂತೆ ಕೊನೆಯ ಹಂತದ ಮತದಾನದಲ್ಲಿ ಬಿಜೆಪಿಯ ಮಂಗಳಾ ಅಂಗಡಿ ಯವರೂ ಸುಮಾರು ಐದು ಸಾವಿರ ಅಂತರದಿಂದ ಜಯ ಗಳಿಸಿದ್ದಾರೆ ಎಂದು ಮಾಹಿತಿ ಲಭ್ಯ ವಾಯಿತು

ಗುದ್ದಾಡಿ ಗುದ್ದಾಡಿ ಗೆದ್ದ ಬಿಜೆಪಿ

ಇನ್ನು ಇದರ ಬಗ್ಗೆ ಜನರ ಅಭಿಪ್ರಾಯ ಅಂದ್ರೆ ಒಂದು ಬೆಳಗಾವಿಯ ಭದ್ರ ಕೋಟೆ ಚಿದ್ರಿಸಲು ಪ್ರಯತ್ನ ಮಾಡಿದ ಸತೀಶ್ ಜಾರಕಿಹೊಳಿ ಬೆಳಗಾವಿಯ ಜನರ ಮನ ಗೆದ್ದಿದ್ದಾರೆ.

ಇದರ ಬಗ್ಗೆ ಮಾತ ಮಾಡಿದ ಸಿದ್ದರಾಮಯ್ಯ ಈಗ ನಿಮಗೆ ಕಡಿಮೆ ಅಂತರದ ಸೋಲಾಗಿರಬಹುದು. ಆದರೆ ಬೆಳಗಾವಿ ಮತ್ತು ರಾಜ್ಯದ ಕಾಂಗ್ರೆಸ್ಸಿನ ಪಾಲಿಗೆ ಭವಿಷ್ಯದ ಸ್ಫೂರ್ತಿಯಾಗಿದ್ದೀರಿ. ಆಡಳಿತಾರೂಢ ಪಕ್ಷದ ವಿರುದ್ಧ ಹೋರಾಡಿ ಒಂದು ಲೋಕಸಭಾ ಕ್ಷೇತ್ರದ ಗೆಲುವಿನ ಅಂತರವನ್ನು ಸುಮಾರು 4 ಲಕ್ಷ ಮತಗಳಿಂದ ಕೇವಲ 3 ಸಾವಿರಕ್ಕೆ ತಂದು ನಿಲ್ಲಿಸಿ ಪಕ್ಷದ ಅಸ್ತಿತ್ವವನ್ನು ಸಾಬೀತು ಪಡಿಸಿದ್ದು ಸಾಮಾನ್ಯ ವಿಷಯವಲ್ಲ.: ಎಂದು ಸಿದ್ದರಾಮಯ್ಯ ತಮ್ಮ ಫೇಸ್ಬುಕ್ ನಲ್ಲಿ ಹೇಳಿದ್ದರು.

ಇನ್ನು ಕೊನೆಯದಾಗಿ ಹೇಳಬೇಕೆಂದರೆ ಏನೇ ಆಗಲಿ ಗೆಲುವು ಸೋಲು ಆಗಲೇ ಬೇಕು ಮಂಗಳಾ ಅಂಗಡಿ ಚುನಾವಣೆ ಗೆದ್ದು ಲೋಕಸಭೆ ಸೇರಿದ್ದಾರೆ, ಆದ್ರೆ ಲಕ್ಷಾಂತರ ಜನರ ಮನಸ್ಸಿನಲ್ಲಿ ಸತೀಶ್ ಜಾರಕಿಹೊಳಿ ಅವರು ಉಳಿದಿದ್ದಾರೆ.

ಎಲ್ಲ ಅವರ್ ಅಭಿಮಾನಿ ಗಳಲ್ಲಿ ನಮ್ಮ ಭಾರತೀಯ ಕ್ರಿಕೆಟ್ ತಂಡ ಒಂದು ವಿಶ್ವ ಕಪ್ ಸೋತಾಗ ಆದಂತ ನೋವು ಕಾಣಿಸಿತ್ತು.

ಮಂಗಳಾ ಅಂಗಡಿ ಲೋಕಸಭೆಗೆ ಎಂಟ್ರಿ ಕೊಟ್ರೆ ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಜನರ ಎಲ್ಲರ ಮನಸ್ಸಿನಲ್ಲಿ ಮೂಡಿ ದ್ದಾರೆ.

ಎಲ್ಲರ ಬಾಯಲ್ಲೂ ಒಂದೇ ಮಾತು ಸೋತು ಗೆದ್ದ ಸಾಹುಕಾರರು ಎಂಬ ಮಾತು ಅವರ್ ಅಭಿಮಾನಿ ಗಳಲ್ಲಿ ಕೇಳಿ ಬರುತ್ತಿದೆ..


Spread the love

About Laxminews 24x7

Check Also

ಸರ್ಕಾರಿ ವಾಹನದಲ್ಲಿ ಬಿಜೆಪಿ ಹಣ ಸಾಗಣೆ: ದಿನೇಶ್‌ ಗುಂಡೂರಾವ್

Spread the loveಮೈಸೂರು: ‘ಬಿಜೆಪಿ ನಾಯಕರು ಸರ್ಕಾರಿ ವಾಹನಗಳಲ್ಲಿ ಕೋಟ್ಯಂತರ ರೂಪಾಯಿ ಸಾಗಿಸಿ ಹಂಚುತ್ತಿದ್ದಾರೆ. ಐಟಿ, ಇಡಿ ರಕ್ಷಣೆಯಲ್ಲೇ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ