Breaking News

ಕಿರುತೆರೆ ನಟ ಅನಿರುದ್ಧ್ ಆರೋಗ್ಯ ಸ್ಥಿತಿ ಗಂಭೀರ: ಶೀಘ್ರ ಚೇತರಿಕೆಗೆ ಹಾರೈಸಿ ಎಂದ ಪತ್ನಿ

Spread the love

ಹಿಂದಿ ಕಿರುತೆರೆಯ ಖ್ಯಾತ ನಟ ಅನಿರುದ್ಧ್ ದೇವ್ ಗೆ ಕೊರೊನಾ ಪಾಸಿಟಿವ್ ಬಂದ ಬೆನ್ನಲ್ಲೇ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಪತಿ ಶೀಘ್ರ ಚೇತರಿಕೆ ಹಾರೈಸಿ ಎಂದು ಪತ್ನಿ ಶುಭಿ ಅಹುಜಾ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪತಿ ಅನುರುದ್ಧ್ ಭೋಪಾಲ್ ಆಸ್ಪತ್ರೆಗೆ ಅನಿರುದ್ಧ ದಾಖಲಾಗಿದ್ದು, ತುಂಬಾ ಗಂಭೀರ ಸ್ಥಿತಿಯಲ್ಲಿದ್ದಾರೆಂದು ಅಹುಜಾ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ನಾನು ನನ್ನ 2 ತಿಂಗಳ ಮಗುವನ್ನು ಮನೆಯಲ್ಲೇ ಬಿಟ್ಟು ನಾನು ನನ್ನ ಗಂಡನನ್ನು ನೋಡಲು ಹೋಗುತ್ತಿದ್ದೀನಿ. ಇದು ನನ್ನ ದೊಡ್ಡ ಸವಾಲು ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಒಂದು ಕಡೆ ಆಸ್ಪತ್ರೆಯಲ್ಲಿ ಕೊರೊನಾದಿಂದ ಬಳಲುತ್ತಿರುವ ನನ್ನ ಪತ್ನಿಯ ಪಾಲಿನೆ ಮುಖ್ಯವಾದರೆ, ಇನ್ನೊಂದೆಡೆ 2 ತಿಂಗಳ ಮಗುವಿನ ಪೋಷಣೆಯನ್ನು ಮಾಡಬೇಕಿದೆ. ಇದು ನನ್ನ ಜೀವನದ ಅತಿ ದೊಡ್ಡ ಸವಾಲಿನ ಕೆಲಸವಾಗಿದೆ. ದಯವಿಟ್ಟು ನನ್ನ ಪತಿಯ ಆರೋಗ್ಯಕ್ಕಾಗಿ ಎಲ್ಲರೂ ಪ್ರಾರ್ಥಿಸಿ. ಈ ಸಮಯದಲ್ಲಿ ನನ್ನ ಪತಿಗೆ ಇದು ಮುಖ್ಯವಾಗಿದೆ.

‘ಅನಿರುದ್ಧ ಅವರನ್ನು ಇನ್ನು ಎರಡು ದಿನಗಳು ವೀಕ್ಷಣೆಯಲ್ಲಿಟ್ಟಿದ್ದಾರೆ. ದಯವಿಟ್ಟು ಎಲ್ಲರೂ ಪ್ರಾರ್ಥಿಸುತ್ತೀರಿ’ ಎಂದು ಹೇಳಿದ್ದಾರೆ. ಅನಿರುದ್ಧ್ ಬೇಗ ಗುಣಮುಖರಾಗಲಿ ಎಂದು ಕಿರುತೆರೆ ಕಲಾವಿದರು ಮತ್ತು ಅಭಿಮಾನಿಗಳು ಹಾರೈಸುತ್ತಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ