Home / ರಾಜ್ಯ / ತಾಯಿ ನಿಧನಕ್ಕೆ ಆಕ್ರೋಶಗೊಂಡ ಪೊಲೀಸ್​ ಅಧಿಕಾರಿಯಿಂದ ವೈದ್ಯರ ಮೇಲೆ ಹಲ್ಲೆ..!

ತಾಯಿ ನಿಧನಕ್ಕೆ ಆಕ್ರೋಶಗೊಂಡ ಪೊಲೀಸ್​ ಅಧಿಕಾರಿಯಿಂದ ವೈದ್ಯರ ಮೇಲೆ ಹಲ್ಲೆ..!

Spread the love

ಚಿಕಿತ್ಸೆ ಫಲಕಾರಿಯಾಗದೇ ತಾಯಿ ಮೃತಪಟ್ಟಿದ್ದಕ್ಕೆ ಆಕ್ರೋಶಗೊಂಡ ಪೊಲೀಸ್​ ಇನ್​ಸ್ಪೆಕ್ಟರ್​ ವೈದ್ಯರ ಮೇಲೆ ಹಲ್ಲೆ ನಡೆಸಿದ ಘಟನೆ ಪ್ರಯಾಗ್​ರಾಜ್​​ನ ಸ್ವರೂಪ್​ ರಾಣಿ ನೆಹರು ಆಸ್ಪತ್ರೆಯಲ್ಲಿ ನಡೆದಿದೆ.

ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಪೊಲೀಸ್​ ಅಧಿಕಾರಿಯ 72 ವರ್ಷದ ತಾಯಿ ಸಾವಿಗೀಡಾಗಿದ್ದದಾರೆ. ಇದರಿಂದ ಆಕ್ರೋಶಗೊಂಡ ಜುಲ್ಫೀಕರ್​ ಅಲಿ ಹಾಗೂ ಆತನ ಸಹೋದರ ವೈದ್ಯರ ನಿರ್ಲಕ್ಷ್ಯದಿಂದ ಈ ರೀತಿ ಆಗಿದೆ ಎಂದು ಆರೋಪಿಸಿದ್ದಾರೆ. ಇಬ್ಬರು ಮೊಬೈಲ್​ನಲ್ಲಿ ವಿಡಿಯೋ ಮಾಡಲು ಆರಂಭಿಸಿದ್ದಾರೆ. ಇದಕ್ಕೆ ವೈದ್ಯರು ತಡೆ ಒಡ್ಡುತ್ತಿದ್ದಂತೆಯೇ ಹಲ್ಲೆ ನಡೆಸಲಾಗಿದೆ.

ಇನ್ನು ಅಲಿ ಹಾಗೂ ಆತನ ಕುಟುಂಬಸ್ಥರು ಕೂಡ ಗಾಯಗೊಂಡಿದ್ದಾರೆ ಎಂದು ಅಲಿ ಹೇಳಿದ್ದಾರೆ. ಘಟನೆಯ ಬಳಿಕ ಕೋಪಗೊಂಡ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಸುಮಾರು 7 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ರು. ಅಲ್ಲದೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು. ಈ ಪ್ರತಿಭಟನೆ ಬಳಿಕ ಆಸ್ಪತ್ರೆ ಆಡಳಿತ ಮಂಡಳಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿ ಈ ವಿವಾದವನ್ನ ಪರಿಹರಿಸಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಸ್ಥಳೀಯ ಸ್ಟೇಷನ್ ಹೌಸ್​ ಅಧಿಕಾರಿ ನರೇಂದ್ರ ಪ್ರಸಾದ್​, ಸಿಸಿ ಫೂಟೇಜ್​​ ವಶಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಸಂಬಂಧ ಇಲ್ಲಿಯವರೆಗೆ ಯಾವುದೇ ಬಂಧನವಾಗಿಲ್ಲ.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ