Breaking News

24 ಗಂಟೆಯೊಳಗೆ ‘RTPCR’ ಪರೀಕ್ಷಾ ಫಲಿತಾಂಶ ವರದಿ ನೀಡುವಂತೆ ಸೂಚಿಸಿ ರಾಜ್ಯ ಸರ್ಕಾರದಿಂದ ಆದೇಶ

Spread the love

ಬೆಂಗಳೂರು : ಕೋವಿಡ್ 19 ಸೋಂಕು ಪತ್ತೆ ಹಚ್ಚಲು RT-PCR ಪರೀಕ್ಷೆಗಾಗಿ ಸರ್ಕಾರದಿಂದ ಕಳುಹಿಸಲಾದ ಮಾದರಿಗಳ ಪರೀಕ್ಷಾ ಫಲಿತಾಂಶವನ್ನು 24 ಗಂಟೆಯೊಳಗೆ ನೀಡುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ಕೋವಿಡ್ 19 2 ನೇ ಅಲೆಯ ಸೋಂಕು ವ್ಯಾಪಕವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆ ಸೋಂಕು ಪತ್ತೆ ಹಚ್ಚಲು RT-PCR ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಿದ ಬಳಿಕ ಪರೀಕ್ಷಾ ಫಲಿತಾಂಶವನ್ನು 24 ಗಂಟೆಯೊಳಗೆ ಪ್ರಕಟಿಸಲು ಉಚ್ಚ ನ್ಯಾಯಾಲಯ ಸರ್ಕಾರಕ್ಕೆ ಸೂಚನೆ ನೀಡಿರುತ್ತದೆ, ಆದ್ದರಿಂದ RT-PCR ಪರೀಕ್ಷೆಯ ಫಲಿತಾಂಶವನ್ನು 24 ಗಂಟೆಯೊಳಗೆ ನೀಡುವುದರ ಜೊತೆಗೆ ಸದರಿ ಮಾಹಿತಿಯನ್ನು ICMR PORTAL ನಲ್ಲಿ ನಮೂದಿಸುವಂತೆ ಸೂಚಿಸಿ ಆದೇಶ ಹೊರಡಿಸಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ