Breaking News

ಎಸ್‌ಎಸ್‌ಎಲ್ ಸಿ, ಪಿಯು ಪರೀಕ್ಷೆ ಸಿದ್ದತೆ ಪರಿಶೀಲನಾ ಸಭೆ: ಸಚಿವ ಸುರೇಶ್ ಕುಮಾರ್ ಭಾಗಿ

Spread the love

ಧಾರವಾಡ: ಕೋವಿಡ್ ಹಾವಳಿ‌ ಮಧ್ಯೆಯೂ ಕಳೆದ ವರ್ಷ ಎಸ್‌ಎಸ್‌ಎಲ್ ಸಿ, ಪಿಯು ಪರೀಕ್ಷೆ ನಡೆಸಿದಂತೆ ಈ ವರ್ಷ ನಿಗದಿಯಾಗಿರುವ ಪರೀಕ್ಷೆಗಳ ಯಶಸ್ವಿಯಾಗಿ ನಡೆಸಲು ಧಾರವಾಡದ ಡಯಟ್ ಸಭಾಂಗಣದಲ್ಲಿ ಇಂದು ಸಭೆ ನಡೆಸಲಾಗುತ್ತಿದೆ.

ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು, ಬೆಳಗಾವಿ ವಿಭಾಗದ ಶೈಕ್ಷಣಿಕ ಜಿಲ್ಲೆಗಳ ಎಸ್‌ಎಸ್‌ಎಲ್ ಸಿ, ಪಿಯುಸಿ ಪರೀಕ್ಷಾ ಪೂರ್ವಸಿದ್ಧತಾ ಪರಿಶೀಲನೆ ಸಭೆ ನಡೆಸಿದರು.

ಸಂಜೆವರೆಗೂ ಎಲ್ಲಾ ಒಂಭತ್ತು ಶೈಕ್ಷಣಿಕ ಜಿಲ್ಲೆಗಳಲ್ಲಿನ ಪರೀಕ್ಷಾ ಸಿದ್ದತೆ ಕುರಿತು ಸಚಿವರು ಪರಿಶೀಲನೆ ನಡೆಸುತ್ತಿದ್ದಾರೆ.

ಬೆಳಗಾವಿ ಡಯಟ್ ಪ್ರಕಟಿಸಿರುವ ಶಿಕ್ಷಣ ಸಂಪದ ಕೃತಿ ಹಾಗೂ ಸಿಸ್ಲೆಪ್ ಲಾಂಛನ ಬಿಡುಗಡೆ ಮಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ನಿರ್ದೇಶಕಿ ಮಮತಾ ನಾಯಕ್, ಸಿಸ್ಲೆಪ್ ನಿರ್ದೇಶಕ ಬಿ.ಎಸ್.ರಘುವೀರ್,ವಿದ್ಯಾ ನಾಡಿಗೇರ ಮತ್ತಿತರರು ಇದ್ದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ