Breaking News

ಸಿಡಿ ಪ್ರಕರಣ : ಕಾಂಗ್ರೆಸ್‍ನ ಮಾಜಿ ಶಾಸಕರಿಬ್ಬರಿಗೆ ಎಸ್‍ಐಟಿ ನೋಟೀಸ್..!

Spread the love

ಬೆಂಗಳೂರು,ಏ.4-ದಿನಕ್ಕೊಂದು ವಿಚಿತ್ರ ತಿರುವು ಪಡೆಯುತ್ತಿರುವ ಸಿ.ಡಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಕಾಂಗ್ರೆಸ್‍ನ ಇಬ್ಬರು ಮಾಜಿ ಶಾಸಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಎಸ್‍ಐಟಿ ನಿರ್ಧರಿಸಿದೆ. ಸಿ.ಡಿ ಬಹಿರಂಗವಾದ ಬಳಿಕ ಚಿತ್ರ,ವಿಚಿತ್ರ ತಿರುವುಗಳು ಪಡೆಯುತ್ತಿದ್ದು, ಒಂದಷ್ಟು ದಿನ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ಸುತ್ತಲೇ ಆರೋಪ-ಪ್ರತ್ಯಾರೋಪಗಳು ಕೇಳಿ ಬಂದಿದ್ದವು. ಈ ಹೊಸದಾಗಿ ಕಾಂಗ್ರೆಸ್‍ನ ಇಬ್ಬರು ಮಾಜಿ ಶಾಸಕರ ಹೆಸರುಗಳು ತಳುಕು ಹಾಕಿಕೊಂಡಿವೆ. ಹೀಗಾಗಿ ಸಿ.ಡಿ ಪ್ರಕರಣ ಮತ್ತೊಂದು ರೀತಿಯ ತಿರುವು ಪಡೆಯುತ್ತಿದೆ.

ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಯಲ್ಲಿರುವ ಇಬ್ಬರು ಮಾಜಿ ಶಾಸಕರುಗಳಿಗೆ ನೋಟಿಸ್ ನೀಡಲು ಎಸ್‍ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸಿ.ಡಿಯ ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಿ ಸ್ವಯಂಪ್ರೇರಿತ ಹೇಳಿಕೆ ದಾಖಲಿಸಿದ ಬಳಿಕ ಎಸ್‍ಐಟಿ ಅಧಿಕಾರಿಗಳು ಸತತ 5 ದಿನಗಳ ಕಾಲ ಆಕೆಯನ್ನು ವಿಚಾರಣೆಗೊಳಪಡಿಸಿದ್ದಾರೆ.ಯುವತಿಯ ಮೊಬೈಲ್‍ನ್ನು ವಶಕ್ಕೆ ಪಡೆದುಕೊಂಡು ಅಳಿಸಲಾಗಿದ್ದ ದತ್ತಾಂಶಗಳನ್ನು ರಿಟ್ರೈವ್ ಮಾಡಿದ ವೇಳೆ ಇಬ್ಬರು ಮಾಜಿ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಆ ಇಬ್ಬರು ಶಾಸಕರಿಗೆ ನೋಟಿಸ್ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕಲು ಪೊಲೀಸ್ ಅಧಿಕಾರಿಗಳು ಮುಂದಾಗಿದ್ದಾರೆ.ಯುವತಿ ಜೊತೆಗಿನ ಸಂಪರ್ಕ ಯಾವ ಕಾರಣಕ್ಕಾಗಿ ಇತ್ತು. ಯಾವೆಲ್ಲ ಮಾಹಿತಿಗಳು ಹಂಚಿಕೆಯಾಗಿವೆ, ಈ ಮಾಜಿ ಶಾಸಕರುಗಳ ಜೊತೆ ಬೇರೆ ಯಾರೆಲ್ಲ ಸಂಪರ್ಕ ಹೊಂದಿದ್ದರು ಎಂಬ ವಿಷಯಗಳನ್ನು ಕಲೆ ಹಾಕಲು ಪೊಲೀಸರು ನಿರ್ಧರಿಸಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ