ನವದೆಹಲಿ, ಏಪ್ರಿಲ್ 4; ಕೇಂದ್ರ ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ಅನ್ವಯ ರಾಜ್ಯಗಳಿಗೆ ಹೊಸ ಅಧಿಕಾರವನ್ನು ಕೊಡಲಾಗಿದೆ. ಪದೇ ಪದೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರ ಹೆಸರನ್ನು ರಾಜ್ಯ ಸಾರಿಗೆ ಇಲಾಖೆಯ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.
ಕುಡಿದು ವಾಹನ ಚಾಲನೆ, ಅತಿಯಾದ ವೇಗ, ರೇಸ್ ಮಾಡುವವರು, ಅಪಾಯಕಾರಿ ಚಾಲನೆ, ಹೆಲ್ಮೆಟ್ ಧರಿಸದೇ ಚಾಲನೆ ಮಾಡುವವರ ಹೆಸರನ್ನು ನೇಮ್ ಎಂಡ್ ಶೇಮ್ ಎಂಬ ಪಟ್ಟಿಯಡಿ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.
ಒಂದು ವೇಳೆ ಡಿಎಲ್ ಅಮಾನತು ಮಾಡಿದ ಒಂದು ತಿಂಗಳಿನಲ್ಲಿ ವಾಹನ ಸವಾರ ಮನವಿ ಮಾಡದಿದ್ದರೆ ಆ ಹೆಸರನ್ನು ಬಹಿರಂಗಗೊಳಿಸಲಾಗುತ್ತದೆ. ಇದಕ್ಕಾಗಿಯೇ ಸಾರಿಗೆ ಇಲಾಖೆ ವೆಬ್ ಸೈಟ್‌ನಲ್ಲಿ ಬೇರೆ ವಿಭಾಗವನ್ನೇ ಮಾಡಲಾಗುತ್ತಿದೆ.
ಇದು ಪಿಡಿಎಫ್ ಮಾದರಿಯಲ್ಲೂ ಲಭ್ಯವಿದ್ದು, ಜನರು ಡೌನ್ ಲೋಡ್ ಮಾಡಿಕೊಂಡು ಶೇರ್ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದಾಗಿ ವೆಬ್‌ಸೈಟ್‌ನಲ್ಲಿಯೂ ಅರ್ಜಿ ಸಲ್ಲಿಸಿ ಹೆಸರು ತೆಗೆಯಲು ಅವಕಾಶ ಮಾಡಿಕೊಡಲಾಗುತ್ತದೆ.
ಡಿಎಲ್ ಪಡೆಯಲು ಇರುವ ಕನಿಷ್ಠ ವ್ಯಾಸಂಗದ ಮಿತಿಯನ್ನು ಹೆಚ್ಚಿಸುವ ನಿರೀಕ್ಷೆಯೂ ಇದೆ. ವಾಹನ ಮಾರಾಟ ಮಾಡುವವರೇ ನೋಂದಣಿ ಮಾಡಿಸಿಕೊಡುವ ಅವಕಾಶವನ್ನು ಸಹ ನೀಡಲು ಚಿಂತಿಸಲಾಗಿದೆ. ಇದರಿಂದಾಗಿ ಆರ್‌ಟಿಓ ಕಚೇರಿಗೆ ಹೋಗುವುದು ತಪ್ಪಲಿದೆ.
Laxmi News 24×7