Breaking News
Home / ರಾಜ್ಯ / 2 ಲಕ್ಷ ಮತಗಳ ಅಂತರದಿಂದ ಮಂಗಳಾ ಅಂಗಡಿ ಗೆಲ್ಲಬೇಕು..ಸಿಎಂ ಬಿಎಸ್‍ವೈ

2 ಲಕ್ಷ ಮತಗಳ ಅಂತರದಿಂದ ಮಂಗಳಾ ಅಂಗಡಿ ಗೆಲ್ಲಬೇಕು..ಸಿಎಂ ಬಿಎಸ್‍ವೈ

Spread the love

ಅಂಗಡಿ ಕುಟುಂಬಸ್ಥರು ಸ್ಪರ್ಧೆ ಮಾಡಿದ್ರೆ ನಾನು ನಿಲ್ಲಲ್ಲ ಎಂದು ವಿರೋಧ ಪಕ್ಷದ ಅನೇಕರು ಹೇಳಿದ್ದಾರೆ. ಮಂಗಲಾ ಸುರೇಶ ಅಂಗಡಿ ಅವರನ್ನು ಗೆಲ್ಲಿಸಬೇಕು ಎಂದು ಪ್ರಾರ್ಥಿಸುತ್ತೇನೆ. 2 ಲಕ್ಷ ಮತಗಳ ಅಂತರದಿಂದ ಮಂಗಲಾ ಸುರೇಶ ಅಂಗಡಿ ಗೆಲ್ಲಬೇಕು ಎನ್ನುವುದು ನಮ್ಮ ಬಯಕೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ಬೆಳಗಾವಿ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ನಾಮಪತ್ರ ಸಲ್ಲಿಸಿದ ಬಳಿಕ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಮಾವೇಶದಲ್ಲಿ ಸಿಎಂ ಯಡಿಯೂರಪ್ಪ ಮಾತನಾಡಿದರು. ಸುರೇಶ ಅಂಗಡಿ ಇಷ್ಟು ಬೇಗ ಅಗಲಿ ಹೋಗ್ತಾರೆ ಅಂತ ಅಂದುಕೊಂಡಿರಲಿಲ್ಲ. ಕರ್ನಾಟಕ ರಾಜ್ಯವನ್ನು ಸುತ್ತಿ ಅನೇಕ ರೈಲ್ವೆ ಯೋಜನೆಗೆ ಅನುಮತಿ ಕೊಡಿಸಿದ್ದರು. ಸುರೇಶ ಅಂಗಡಿಯವರ ಅಕಾಲಿಕ ಮರಣದಿಂದ ಬಂದಿರುವ ಉಪ ಚುನಾವಣೆಯಲ್ಲಿ ಅವರ ಪತ್ನಿ ಮಂಗಳಾರನ್ನು 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಬೆಳಗಾವಿ ರಿಂಗ್ ರೋಡ್, ರಾಣಿ ಚನ್ನಮ್ಮ ಕೋಟೆ ಅಭಿವೃದ್ಧಿ, ಮಹದಾಯಿ ಯೋಜನೆಗೆ ಆಡಳಿತ್ಮಕ ಅನುಮೋದನೆ ನೀಡಲಾಗಿದೆ. ದೇಶದಲ್ಲಿ ಪ್ರಥಮ ಬಾರಿಗೆ ನೇಕಾರ ಸಮ್ಮಾನ್ ಯೋಜನೆ ಜಾರಿಗೆ ತರಲಾಗಿದೆ. ಹಣಕಾಸಿನ ಪರಿಸ್ಥಿತಿ ಸರಿ ಇಲ್ಲದ ಸಂದರ್ಭದಲ್ಲಿ ತೀರ್ಮಾನ ಮಾಡಿದ್ದೇನೆ. ಅತಿವೃಷ್ಠಿಯಿಂದ ಯಾರಾದ್ರು ಮನೆ ಬಿದ್ದಿದೆ ಎಂದು ಬಂದ್ರೆ ಈಗಲು ಮನೆ ಕಟ್ಟಿ ಕೊಡಲು ಸಿದ್ದ. ಚುನಾವಣೆ ಮುಗಿದ ಮನೆ ಕಟ್ಟಿಸಿಕೊಡುತ್ತೇವೆ. ಎಲ್ಲರಿಗೂ ಸೂರು ಎಂಬುದು ಪ್ರಧಾನಿ ಸಂಕಲ್ಪ. ಬೊಕ್ಕಸಕ್ಕೆ ಎμÉ್ಟೀ ಭಾರ ಬಿದ್ರು, ಮನೆ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಇದೇ ವೇಳೆ ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್, ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ಶ್ರೀಮಂತ ಪಾಟೀಲ್, ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ, ಅಭ್ಯರ್ಥಿ ಮಂಗಳಾ ಅಂಗಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ್, ಮಹಾದೇವಪ್ಪ ಯಾದವಾಡ, ಮಾಜಿ ಶಾಸಕರಾದ ಡಾ.ವಿಶ್ವನಾಥ್ ಪಾಟೀಲ್, ಸಂಜಯ್ ಪಾಟೀಲ್, ಮುಖಂಡರಾದ ಎಂ.ಬಿ.ಜೀರಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗದ ವಿಭಿನ್ನ ಪ್ರಯತ್ನ

Spread the love ಬೆಂಗಳೂರು, ಏಪ್ರಿಲ್. 20: ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧವಾಗುವುದಕ್ಕಿಂತ ಹೆಚ್ಚಾಗಿ ನಮ್ಮ ಚುನಾವಣಾ ಆಯೋಗ ಹಲವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ