Breaking News
Home / ಜಿಲ್ಲೆ / ಬೆಂಗಳೂರು / ವಾಹನ ಸವಾರ’ರೆಲ್ಲರೂ ತಿಳಿದಿರಲೇ ಬೇಕಾದ ವಿಷಯಗಳು ಇವು.!

ವಾಹನ ಸವಾರ’ರೆಲ್ಲರೂ ತಿಳಿದಿರಲೇ ಬೇಕಾದ ವಿಷಯಗಳು ಇವು.!

Spread the love

ನಾವು ವಾಹನಗಳ ಬಗ್ಗೆ ಗಮನ ಕೊಡುತ್ತೇವೆ ವಿನಹ, ಬಹುತೇಕ ಸಂದರ್ಭದಲ್ಲಿ ನಮ್ಮ ವಾಹನ ತಡೆಯುವಂತ, ತಡೆದು ವಿಚಾರಣೆ, ಮಾಹಿತಿ ಕೇಳುವಂತ ಸಂದರ್ಭದಲ್ಲಿ ನಾವು ಅವರನ್ನು ಪ್ರಶ್ನಿಸಬಹುದು. ಕೆಲ ದಾಖಲೆ, ಮಾಹಿತಿಯನ್ನು ಅವರಿಂದಲೂ ಪಡೆದ ನಂತ್ರ, ನಮ್ಮ ವಾಹನದ ಮಾಹಿತಿ ಅವರಿಗೆ ನೀಡಬಹುದು ಎನ್ನುವ ಬಗ್ಗೆ ತಿಳಿದೇ ಇರೋದಿಲ್ಲ. ಹಾಗಾದ್ರೇ.. ವಾಹನ ಸವಾರರೆಲ್ಲರೂ ತಿಳಿದಿರಲೇ ಬೇಕಾದ ವಿಷಯಗಳು ಏನ್ ಅಂತ ಮುಂದೆ ಓದಿ..

 

ಹೌದು.. ವಾಹನ ಸವಾರರಾದಂತ ನಾವು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಸಂದರ್ಭದಲ್ಲಿ, ಉಲ್ಲಂಘಿಸದೇ ನಿಯಮ ಪಾಲಿಸಿಯೂ ಕೆಲವು ಸಂದರ್ಭದಲ್ಲಿ ಪೊಲೀಸರಿಂದ ತಪಾಸಣೆಯನ್ನು ಎದುರಿಸಬೇಕಾಗಿರುತ್ತದೆ. ಈ ವೇಳೆ ಅವರು ಕೇಳುವಂತೆ ನಿಮ್ಮ ವಾಹನದ ದಾಖಲೆಗಳನ್ನು ತೋರಿಸೋ ಮೊದಲು ನೀವು ಅವರ ಬಗ್ಗೆ ಕೆಲವು ಪ್ರಶ್ನೆಗಳನ್ನು, ಅವರಿಂದ ಕೆಲ ದಾಖಲೆಗಳನ್ನು ಕೇಳಿ, ಆನಂತ್ರವೂ ನಿಮ್ಮ ವಾಹನದ ಕೇಳಿದ ದಾಖಲೆಯನ್ನು ಪರಿಶೀಲನೆಗಾಗಿ ತೋರಿಸಬಹುದಾಗಿದೆ. ಹಾಗಾದರೇ.. ನೀವು ತಿಳಿದಲೇ ಬೇಕಾದ ವಿಷಯಗಳು ಈ ಕೆಳಿಗನಂತಿವೆ..

 

‘ವಾಹನ ಸವಾರ’ರೆಲ್ಲರೂ ತಿಳಿದಿರಲೇ ಬೇಕಾದ ವಿಷಯಗಳು

  1. ಪೊಲೀಸರು ನಿಮ್ಮ ವಾಹನವನ್ನು ನಿಲ್ಲಿಸುವಂತೆ ತಡೆದಾಗ, ನಿಲ್ಲಿಸಿದ ನಂತ್ರ ಆವರ ಐಡಿ ಪ್ರೂಫ್ ಕೇಳಬಹುದಾಗಿದೆ.
  2. ಮೋಟಾರು ವಾಹನ ಕಾಯ್ದೆಯ ಅಂದ್ರೇ ವೆಹಿಕಲ್ ಆಕ್ಟ್ – 1988ರಂತೆ ಕೈಗೆ ದಾಖಲೆ ಕೊಡಬೇಕೆಂದೂ ಇಲ್ಲ.
  3. ಒಂದು ವೇಳೆ ನಿಮ್ಮ ವಾಹನದಲ್ಲಿ ಸಹ ಪ್ರಯಾಣಿಕರಾಗಲೀ, ಬೇರೆಯವರು ಯಾರಾದರೂ ಇದ್ದರೇ, ನಿಮ್ಮ ವಾಹನವನ್ನು ಎತ್ತಿಕೊಂಡು ಹೋಗುವಂತಿಲ್ಲ.
  4. ಅಲ್ಲದೇ.. ಒತ್ತಾಯಪೂರ್ವಕವಾಗಿ ವಾಹನದಲ್ಲಿ ಇರುವವರನ್ನು ಇಳಿಸುವಂತಿಲ್ಲ.
  5. ನಿಮ್ಮ ವಾಹನವನ್ನು ಪೊಲೀಸ್ ಪೇದೆಯು ತಡೆದು, ದಾಖಲೆ ಕೇಳುವಂತಿಲ್ಲ.
  6. ಎಸ್‌ಐ ಇಲ್ಲವೇ ಅದಕ್ಕಿಂತಲೂ ಮೇಲ್ದರ್ಜೆಯ ಅಧಿಕಾರಿಗಳು ಮಾತ್ರವೇ ನಿಮ್ಮ ವಾಹನದ ದಾಖಲೆಯನ್ನು ಕೇಳಬಹುದು.
  7. ಸೆಕ್ಷನ್ 132 ಅಡಿಯಲ್ಲಿ ಎಸ್‌ಐ ಮಾತ್ರವೇ ದಂಡವನ್ನು ವಿಧಿಸಬಹುದು.
  8. ದಂಡವನ್ನ ಸ್ಥಳದಲ್ಲೇ ಕಟ್ಟಬಹುದು. ಹಣ ಇಲ್ಲದಿದ್ದರೇ ಚಲನ್, ಕೋರ್ಟ್ ಚಲನ್ ಕೊಡಬಹುದು
  9. ಅಧಿಕಾರಿ ದೌರ್ಜನ್ಯ ಮಾಡಿದ್ರೇ.. ಅವರ ವಿರುದ್ಧ ದೂರು ಕೊಡಬಹುದು.

Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ