Breaking News

ನನ್ನ ಕಷ್ಟ-ಸುಖಕ್ಕೆ ಆಗಿರುವ ಗೆಳೆಯ ಡಿಕೆಶಿ, ಆ ಹುಡುಗಿ ಹೇಳಿದಾಕ್ಷಣ ಅಪರಾಧಿಯಲ್ಲ : ರಮೇಶ್ ಜಾರಕಿಹೊಳಿ

Spread the love

ಬೆಂಗಳೂರು: ಸಿಡಿ ಲೇಡಿಯ ಮತ್ತೊಂದು ಆಡಿಯೋ ಸಂಜೆ ವೇಳೆಗೆ ಫುಲ್ ವೈರಲ್ ಆಗಿದೆ. ಸಂಬಂಧಿಕರ ಜೊತೆ ಮಾತಾಡಿದ್ದಾಳೆ ಎನ್ನಲಾಗಿದೆ. ಆ ಆಡಿಯೋದಲ್ಲಿ ಚಿನ್ನಿ..ಡಿ ಕೆ ಶಿವಕುಮಾರ್ ಅವರನ್ನ ಮೀಟ್ ಮಾಡೋಕೆ ಬಂದಿದ್ದೀನಿ ಎಂದಿದ್ದಾಳೆ. ಈ ಆಡಿಯೋ ಸಂಬಂಧ ಪ್ರತಿಕ್ರಿಯೆ ನೀಡಿರುವ ರಮೇಶ್ ಜಾರಕಿಹೊಳಿ, ಡಿ ಕೆ ಶಿವಕುಮಾರ್ ಅವರ ಹೆಸರನ್ನು ಒಂದು ಸಲ ತೆಗೆದಾಕ್ಷಣ ಅಪರಾಧಿಯಾಗಲ್ಲ ಎಂದಿದ್ದಾರೆ.

ಇಂದು ಸದಾಶಿವನಗರ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ, ನಾನೀಗ ಯಾರ ಹೆಸರನ್ನು ಹೇಳಿಲ್ಲ. ಡಿ‌ಕೆ ಶಿವಕುಮಾರ್ ಹೆಸರನ್ನು ಎಲ್ಲಿಯೂ ಹೇಳಿಲ್ಲ. ಆ ಹುಡುಗಿ ಡಿ ಕೆ ಶಿವಕುಮಾರ್ ಅವರ ಹೆಸರನ್ನು ಒಂದು ಸಲ ಹೇಳಿದ ತಕ್ಷಣ ಅಪರಾದಿಯಾಗಲ್ಲ. ನಾನು ಆ ಆಡಿಯೋವನ್ನು ಸಂಪೂರ್ಣವಾಗಿ ಕೇಳಿಯೂ ಇಲ್ಲ. ಅವನು ನನ್ನ ಹಳೆಯ ಗೆಳೆಯ. ನನ್ನ ಕಷ್ಟ-ಸುಖಕ್ಕೆ ಆಗಿದ್ದಾನೆ. ನನಗೆ ಅನ್ಯಾಯವಾದರೂ ತಪ್ಪಿಲ್ಲ. ಅವನಿಗೆ ಅನ್ಯಾಯವಾಗಬಾರದು ಎಂದಿದ್ದಾರೆ.

ನನ್ನ ಮೇಲೆ ಬೇಕಾದ ಸೆಕ್ಷನ್ ಹಾಕಲಿ. ನನ್ನದು ತಪ್ಪಿದ್ದರೆ ಶರಣಾಗುತ್ತೇನೆ. ನನ್ನದೇನು ತಪ್ಪಿಲ್ಲ. ಇದರಿಂದ ನಾನು ಆದಷ್ಟು ಬೇಗ ಹೊರ ಬರುತ್ತೇನೆ. ನಾನು ಜಾಮೀನು ಪಡೆಯಲ್ಲ ಎಂದಿದ್ದಾರೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ