Breaking News

ದ್ವಾರಕೀಶ್ ಮನೆ 10 ಕೋಟಿಗೆ ಮಾರಾಟ: ಖರೀದಿಸಿದ ನಟ ಯಾರು ಗೊತ್ತಾ?

Spread the love

ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನಟ, ನಿರ್ಮಾಪಕ ದ್ವಾರಕೀಶ್ ಬೆಂಗಳೂರಿನಲ್ಲಿನ ತಮ್ಮ ಮನೆಯನ್ನು ಮಾರಾಟ ಮಾಡಿದ್ದು, ನಟ, ನಿರ್ದೇಶಕ ರಿಷಭ್ ಶೆಟ್ಟಿ ಈ ಮನೆಯನ್ನು 10 ಕೋಟಿ ರೂ.ಗೆ ಖರೀದಿಸಿದ್ದಾರೆ.

ಎಚ್ ಎಸ್ ಆರ್ ಲೇಔಟ್ ನ ತಮ್ಮ ಮನೆಯನ್ನು ದ್ವಾರಕೀಶ್ 10.5 ಕೋಟಿ ರೂ.ಗೆ ಮಾರಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ದ್ವಾರಕೀಶ್‌ ನಿರ್ಮಾಣದಲ್ಲಿ ಬಿಡುಗಡೆ ಆದ ಆಯುಷ್ಮಾನ್‌ಭವ ಚಿತ್ರ ದೊಡ್ಡ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ದ್ವಾರಕೀಶ್‌ ಪುತ್ರ ಯೋಗಿ ಸಾಲದ ಸುಳಿಗೆ ಸಿಲುಕಿದ್ದು. ಸಾಲ ಮರುಪಾವತಿಗಾಗಿ ಸಾಲ ನೀಡಿದ್ದ ಇತರೆ ನಿರ್ಮಾಪಕರು ಮನೆಗೆ ಬಂದು ದಾಂಧಲೆ ನಡೆಸಿದ್ದರು. ಸಾಲದ ಸುಳಿಯಿಂದ ಹೊರಬರಲು ಮನೆ ಮಾರಾಟ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹಾಸ್ಯನಟನಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ದ್ವಾರಕೀಶ್, ನಿರ್ಮಾಪಕ, ನಿರ್ದೇಶಕನಾಗಿ ಸಾಕಷ್ಟು ಹೆಸರು ಮಾಡಿದ್ದು, ಇದುವರೆಗೆ 52 ವರ್ಷಗಳಲ್ಲಿ 52 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಒಂದು ನಿರ್ಮಾಣ ಸಂಸ್ಥೆಯಲ್ಲಿ 50 ಚಿತ್ರ ಹೊರಬಂದಿರುವುದು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಾಧನೆ ಆಗಿದೆ.

ವಿಶೇಷ ಎಂದರೆ ದ್ವಾರಕೀಶ್ ಅವರ ಬಂಗಲೆಯನ್ನು ಸ್ಯಾಂಡಲ್ ವುಡ್ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ನಟ ಮತ್ತು ನಿರ್ದೇಶಕ ರಿಷಬ್ ಮನೆಯನ್ನು ಖರೀಸಿದ್ದಾರಂತೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ