Breaking News

ಮಂಗಳೂರಿನಲ್ಲಿ ಮಗು ಮಾರಾಟ ಜಾಲ ಪತ್ತೆ; ಓರ್ವ ಆರೋಪಿ ಬಂಧನ

Spread the love

ಮಂಗಳೂರು (ಮಾ. 6): ಮಂಗಳೂರಿನಲ್ಲಿ ಹಸುಗೂಸು ಮಾರಾಟದ ಜಾಲ ಪತ್ತೆಯಾಗಿದೆ. ಮಕ್ಕಳಿಲ್ಲದವರಿಗೆ ಮಗುವನ್ನು ಮಾರಾಟ ಮಾಡುವ ಹೈಟೆಕ್ ದಂಧೆ ಇದಾಗಿದ್ದು, ಮಗುವನ್ನು ಮಾರಾಟ ಮಾಡುತ್ತಿದ್ದ ಪಾಪಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ.

ತಾಯಿಯ ಹಾಲಿಗಾಗಿ ಅಳುತ್ತಿರುವ ಹಾಲುಗೆನ್ನೆಯ ಪುಟ್ಟ ಕಂದಮ್ಮನನ್ನು ಒಮ್ಮೆ ನೋಡಿದರೆ ಕರುಳು ಕಿತ್ತು ಬಂದಂತಾಗುತ್ತದೆ. ಈ ಮುದ್ದಾದ ಮಗುವನ್ನು ಮಾರಾಟ ಮಾಡಲು ಯತ್ನಿಸಿದ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಮಂಗಳೂರಿನಲ್ಲಿ ಹಸುಗೂಸನ್ನು ಮಾರಾಟ ಮಾಡುತ್ತಿದ್ದ ಹೈಟೆಕ್ ದಂಧೆ ಬಯಲಾಗಿದೆ. ಮೈಸೂರು ಮೂಲದ ಒಡನಾಡಿ ಎಂಬ ಸಂಸ್ಥೆ ಈ ಭಯಾನಕ ಮಾಫಿಯಾದ ಬಗ್ಗೆ  ಕಾರ್ಯಾಚರಣೆ ಮಾಡಿದ್ದು, ಮಂಗಳೂರು ಪೊಲೀಸರ ನೆರವಿನಿಂದ ಮಗು ಮಾರಾಟದ ಜಾಲ ಬೆಳಕಿಗೆ ಬಂದಿದೆ. ಸದ್ಯ ಈ 5 ತಿಂಗಳ ಹೆಣ್ಣು ಮಗುವನ್ನು ಮಂಗಳೂರು ಪೊಲೀಸರು ರಕ್ಷಣೆ ಮಾಡಿದ್ದು, ಶುಶ್ರೂಕರ ಆರೈಕೆಯಲ್ಲಿದೆ.ಮೈಸೂರಿನ ಒಡನಾಡಿ ಎಂಬ ಸ್ವಯಂ ಸೇವಾ ಸಂಸ್ಥೆಗೆ ಹಸುಗೂಸು ಮಾರಾಟ ಜಾಲದ ಬಗ್ಗೆ ಸಣ್ಣ ಮಾಹಿತಿ ಸಿಕ್ಕಿತ್ತು. ಮಂಗಳೂರಿನಲ್ಲಿ ಮಗು ಮಾರಾಟ ಮಾಡುವ ಬಗ್ಗೆಯೂ ಮಾಹಿತಿ ದೊರಕಿತ್ತು. ಈ ಹಿನ್ನಲೆಯಲ್ಲಿ ಆರೋಪಿ ರಾಯನ್ ನ್ನು ಸಂಪರ್ಕಿಸಿದ ಸಂಸ್ಥೆಯ ಸಿಬ್ಬಂದಿ ಉಪಾಯದಿಂದ ರಾಯನ್ ಜೊತೆ ಮಗು ಮಾರಾಟದ ಡೀಲ್ ಬಗ್ಗೆ ಮಾತುಕತೆ ಮಾಡಿದ್ದಾರೆ. ಮಗುವಿನ ವಿವರ, ಹಣ, ಎಲ್ಲದರ ಬಗ್ಗೆಯೂ ವಿಚಾರಿಸಿದ್ದಾರೆ. ಆರೋಪಿ ರಾಯನ್ ಎಲ್ಲಾ ವಿಚಾರಗಳ ಬಗ್ಗೆ ಬಾಯಿಬಿಡುತ್ತಲೇ, ಮಂಗಳೂರು ಪೊಲೀಸರಿಗೆ ಈ ವಿಚಾರ ತಿಳಿಸಿದ್ದಾರೆ‌‌. ಪೊಲೀಸರು ಆರೋಪಿಯ ಬಗ್ಗೆ ತನಿಖೆ ಮಾಡಿ ಬಂಧನ ಮಾಡಿದ್ದಾರೆ. ಈ ವೇಳೆ ಆರೋಪಿ ತಾನು ಈ ಹಿಂದೆ ಎಸಗಿರುವ ಕೃತ್ಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.


Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ