Home / ರಾಜ್ಯ / ವಸತಿ ಶಾಲೆಯೊಂದರಿಂದ 300ಕ್ಕೂ ಹೆಚ್ಚು ಬಾಲಕಿಯರನ್ನು ಬಂದೂಕುಧಾರಿಗಳು ಶುಕ್ರವಾರಅಪಹರಿಸಿದ್ದಾರೆ.

ವಸತಿ ಶಾಲೆಯೊಂದರಿಂದ 300ಕ್ಕೂ ಹೆಚ್ಚು ಬಾಲಕಿಯರನ್ನು ಬಂದೂಕುಧಾರಿಗಳು ಶುಕ್ರವಾರಅಪಹರಿಸಿದ್ದಾರೆ.

Spread the love

ಲಾಗೋಸ್‌: ಉತ್ತರ ನೈಜೀರಿಯಾದ ವಸತಿ ಶಾಲೆಯೊಂದರಿಂದ 300ಕ್ಕೂ ಹೆಚ್ಚು ಬಾಲಕಿಯರನ್ನು ಬಂದೂಕುಧಾರಿಗಳು ಶುಕ್ರವಾರಅಪಹರಿಸಿದ್ದಾರೆ.

ಜಂಗೆಬೆ ಪಟ್ಟಣದಲ್ಲಿರುವ ಬಾಲಕಿಯರ ಸರ್ಕಾರಿ ಕಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯರ ಸಾಮೂಹಿಕ ಅಪಹರಣ ಮಾಡಲಾಗಿದ್ದು, ಪೊಲೀಸ್‌ ಮತ್ತು ಮಿಲಿಟರಿ ಪಡೆ ವಿದ್ಯಾರ್ಥಿನಿಯರ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.

ನನ್ನ 10 ಮತ್ತು 13 ವರ್ಷದ ಮಕ್ಕಳಿಬ್ಬರನ್ನೂ ಅಪಹರಿಸಲಾಗಿದೆ. ಶಾಲೆಯ ಹತ್ತಿರದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇನಾ ಪಡೆಯಿದ್ದರೂ, ಬಾಲಕಿಯರನ್ನು ರಕ್ಷಿಸಲು ಅವರಿಗೆ ಸಾಧ್ಯವಾಗಿಲ್ಲ ಎಂಬುದು ನಿರಾಶಾದಾಯಕವಾಗಿದೆ ಎಂದು ಪೋಷಕರೊಬ್ಬರು ಹೇಳಿದ್ದಾರೆ,.

ಎಲ್ಲಾ ಮಕ್ಕಳನ್ನು ಸುರಕ್ಷಿತವಾಗಿ ಅವರ ಪೋಷಕರ ಬಳಿ ತಲುಪಿಸುವುದು ನಮ್ಮ ಮೂಲ ಉದ್ದೇಶವಾಗಿದೆ. ಹಣಕ್ಕಾಗಿ ಮುಗ್ಧ ಶಾಲಾ ಮಕ್ಕಳನ್ನು ಅಪಹರಿಸಿ, ಬೆದರಿಕೆಯೊಡ್ಡುವ ಬಂಡುಕೋರರಿಗೆ ನಾವು ಹೆದರುವುದಿಲ್ಲ ಎಂದು ನೈಜೀರಿಯಾದ ಅಧ್ಯಕ್ಷ ಮೊಹಮ್ಮದ್ ಬುಹಾರಿ ಅವರು ತಿಳಿಸಿದರು.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ