Breaking News
Home / ರಾಜ್ಯ / ಅಸ್ಸಾಂನ ಡಿಎಸ್ಪಿ ಯಾಗಿ ಹುದ್ದೆ ಸ್ವೀಕರಿಸಿದ ಹಿಮಾ ದಾಸ್

ಅಸ್ಸಾಂನ ಡಿಎಸ್ಪಿ ಯಾಗಿ ಹುದ್ದೆ ಸ್ವೀಕರಿಸಿದ ಹಿಮಾ ದಾಸ್

Spread the love

2018ರಲ್ಲಿ ನಡೆದ ವಿಶ್ವ ಕಿರಿಯರ ಚಾಂಪಿಯನ್ ಶಿಪ್ ನಲ್ಲಿ 400 ಮೀಟರ್ ಓಟದಲ್ಲಿ ಹಿಮಾ ದಾಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ರು. ಇಡೀ ಭಾರತ ಆಗ ಆಕೆಯನ್ನ ಕೊಂಡಾಡಿತ್ತು. ಇದೀಗ ಮತ್ತೆ ಆಕೆಯನ್ನ ಕಂಡು ಭಾರತದ ಮಂದಿ ಹೆಮ್ಮೆ ಪಡುತ್ತಿದ್ದಾರೆ.

ಸದ್ಯ ಅಸ್ಸಾಂನ ಡಿಎಸ್ಪಿ ಯಾಗಿ ಹುದ್ದೆ ಸ್ವೀಕರಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿದ್ದಾರೆ. ಹಿಮಾದಾಸ್ ಡಿಎಸ್ಪಿಯಾಗಿರುವುದು ಎಲ್ಲರಿಗೂ ಖುಷಿ ತಂದಿದೆ. ಎಲ್ಲರ ಪ್ರೊಫೈಲ್ ನಲ್ಲೂ ಆ ಬಗ್ಗೆ ಬರೆದು, ಹಿಮಾದಾಸ್ ಫೋಟೋ ಹಾಕಿಕೊಂಡು ಸಂತಸ ಪಡುತ್ತಿದ್ದಾರೆ.

ಅಷ್ಟೇ ಅಲ್ಲ ಇದು ಹಿಮಾದಾಸ್ ಚಿಕ್ಕವಯಸ್ಸಿನ ಕನಸಾಗಿದೆ. ಆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಿಮಾದಾಸ್ ಬರೆದುಕೊಂಡಿದ್ದಾರೆ.ನಾನು ಚಿಕ್ಕವಳಿದ್ದಾಗ ಪೊಲೀಸ್​ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದೆ. ಇಲ್ಲಿಯ ಜನರಿಗೆ ನನ್ನ ಬಗ್ಗೆ ಚೆನ್ನಾಗಿ ತಿಳಿದಿದೆ. ನನ್ನ ಶಾಲಾ ದಿನಗಳಿಂದಲೂ ಒಂದು ದಿನ ಪೊಲೀಸ್ ಅಧಿಕಾರಿಯಾಗುವ ಬಗ್ಗೆ ಕನಸು ಕಾಣುತ್ತಿದ್ದೆ. ನನ್ನ ತಾಯಿ ಸಹ ನನ್ನ ಕನಸಿಗೆ ಬೆಂಬಲ ನೀಡಿ ಪ್ರೋತ್ಸಾಹ ನೀಡುತ್ತಿದ್ದರು. ಅಸ್ಸಾಂ ಪೊಲೀಸ್​ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸಮಾಜಕ್ಕೆ ಉಪಯೋಗವಾಗುವಂಥ ಕೆಲಸಗಳನ್ನು ಮಾಡು ಎಂದು ನನ್ನ ತಾಯಿ ಸದಾ ಹುರಿದುಂಬಿಸುತ್ತಿದ್ದರು.

ಅಲ್ಲದೇ ಚಿಕ್ಕಂದಿನಲ್ಲಿ ನಾನು ದುರ್ಗಾಪೂಜೆಯ ಸಮಯದಲ್ಲಿ ಆಟಿಕೆಯ ಬಂದೂಕು ಖರೀದಿಸಿ ಸಂತಸ ಪಡುತ್ತಿದ್ದೆ. ನಾನು ಕ್ರೀಡೆಯಿಂದ ಎಲ್ಲವನ್ನೂ ಪಡೆದುಕೊಂಡಿದ್ದೇನೆ. ಹೀಗಾಗಿ ರಾಜ್ಯದ ಕ್ರೀಡಾ ಸುಧಾರಣೆಗೆ ಸಂಬಂಧಿಸಿದಂತೆ ಶ್ರಮಿಸುತ್ತೇನೆ. ಹರಿಯಾಣದಂತೆ ಅಸ್ಸಾಂ ಅನ್ನು ಅತ್ಯುತ್ತಮ ಕ್ರೀಡಾ ಪ್ರದರ್ಶನ ನೀಡುವ ರಾಜ್ಯವನ್ನಾಗಿ ಮಾಡುವುದು ನನ್ನ ಧ್ಯೇಯ ಎಂದು ಹಿಮಾದಾಸ್ .


Spread the love

About Laxminews 24x7

Check Also

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

Spread the love ಕಾಸರಗೋಡು: ಕೇರಳದ ಕಾಸರ ಗೋಡು ಲೋಕಸಭೆ ಕ್ಷೇತ್ರದಲ್ಲಿ ನಡೆದ ಅಣಕು ಮತದಾನ ವೇಳೆ ಬಿಜೆಪಿ ಪರವಾಗಿ ಹೆಚ್ಚು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ