Breaking News
Home / ಜಿಲ್ಲೆ / ಬೆಳಗಾವಿ / ಜಗತ್ತಿನ ಎಲ್ಲೆಡೆ ಭಾರತದ ಅಲೆ : ಅತ್ಯುನ್ನತ ಹುದ್ದೆಗಳಲ್ಲಿ ಭಾರತೀಯರ ಮಿಂಚು

ಜಗತ್ತಿನ ಎಲ್ಲೆಡೆ ಭಾರತದ ಅಲೆ : ಅತ್ಯುನ್ನತ ಹುದ್ದೆಗಳಲ್ಲಿ ಭಾರತೀಯರ ಮಿಂಚು

Spread the love

ಹೊಸದಿಲ್ಲಿ: ಜಗದೆಲ್ಲೆಡೆ ಚದುರಿ, ನೆಲೆ ಕಂಡಿರುವ ಭಾರತೀಯರು ಆಯಾ ರಾಷ್ಟ್ರಗಳಲ್ಲಿ ನಾಯಕತ್ವದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅಮೆರಿಕದ “ಇಂಡಿಯಾನ್ಪೊರಾ’ ಪ್ರಕಟಿಸಿರುವ “ಗವರ್ನ್ಮೆಂಟ್‌ ಲೀಡರ್ಸ್‌- 2021’ರ ಪಟ್ಟಿಯ ಪ್ರಕಾರ ಬರೋಬ್ಬರಿ 15 ರಾಷ್ಟ್ರಗಳಲ್ಲಿ ಭಾರತೀಯರೇ ಚಾಲಕ ಸ್ಥಾನಗಳಲ್ಲಿ ಇದ್ದಾರೆ.

15 ದೇಶಗಳಲ್ಲಿ ನಿರ್ಣಾಯಕರು
15 ರಾಷ್ಟ್ರಗಳಲ್ಲಿ ಸಾರ್ವಜನಿಕ ಸೇವೆ, ಅತ್ಯುನ್ನತ ಹುದ್ದೆಗಳಲ್ಲಿ ಭಾರತೀಯ ಮೂಲದವರೇ ಇದ್ದಾರೆ. ಈ ಪೈಕಿ 60 ನಾಯಕರು ಕ್ಯಾಬಿನೆಟ್‌ ದರ್ಜೆಯ ಸ್ಥಾನಮಾನ ಹೊಂದಿರುವುದು ವಿಶೇಷ.

ಎಲ್ಲೆಲ್ಲೂ ಭಾರತೀಯರು
ಜನಪ್ರತಿನಿಧಿಗಳು, ರಾಜತಾಂತ್ರಿಕ ಅಧಿಕಾರಿಗಳು, ಕೇಂದ್ರ ಬ್ಯಾಂಕ್‌ ಮುಖ್ಯಸ್ಥರು, ನ್ಯಾಯಾಂಗ, ಸಾರ್ವಜನಿಕ ಸೇವೆ- ಪ್ರಮುಖ 5 ಹುದ್ದೆಗಳಲ್ಲಿ ಭಾರತೀಯರೇ ಇದ್ದಾರೆ.

ಎಲ್ಲಿ ಹೆಚ್ಚು ಪ್ರಭಾವ?
ಭಾರತೀಯರಿಗೆ ಪ್ರಮುಖ ಹುದ್ದೆ ನೀಡಿದ ದೇಶಗಳ ಪೈಕಿ ಸುರಿನಾಮ್‌, ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಸಿಂಗಾಪುರ, ದ. ಆಫ್ರಿಕ, ಯುಎಇ, ಇಂಗ್ಲೆಂಡ್‌ ಮುಂಚೂಣಿಯಲ್ಲಿವೆ.

3.2 ಕೋಟಿ ಭಾರತೀಯರು!
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಭಾರತೀಯ ಮೂಲದ 3.2 ಕೋಟಿ ಮಂದಿ ನೆಲೆಸಿದ್ದಾರೆ. ಈ ಸಂಖ್ಯೆ ವಿಶ್ವದ ಯಾವುದೇ ದೇಶಗಳಿಗಿಂತ ಅತ್ಯಧಿಕ ಅನ್ನುವುದು ಮತ್ತೂಂದು ಗರಿಮೆ!

ನ್ಯಾಯಾಧೀಶರು
ಸುಂದರೇಶ್‌ ಮೆನನ್‌- ಸಿಂಗಾಪುರ, ಅಶ್ರಫ್ ಕಾನ್ಯೆ- ಮಾರಿಷಸ್‌, ಕಮಲ್‌ ಕುಮಾರ್‌- ಫಿಜಿ, ಐವಾನ್‌ ರಸೋಲ್‌ ಬಾಕ್ಸ್‌- ಸುರಿನಾಮ್‌ ರಾಷ್ಟ್ರದ ಸುಪ್ರೀಂ ಕೋರ್ಟ್‌ಗೆ ನ್ಯಾಯಾಧೀಶರಾಗಿದ್ದಾರೆ.

ಕನ್ನಡಿಗರ ಮಿಂಚು
ಕರುನಾಡಿನ ಕೀರ್ತಿ ಪತಾಕೆ ಹಾರಿಸುತ್ತಿರುವವರ ಪೈಕಿ ಮೈಸೂರಿನ ವೈದ್ಯ ಡಾ| ವಿವೇಕ್‌ ಮೂರ್ತಿ, ಇನ್ಫಿ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್‌, ಕುಂದಾಪುರದ ಮಾಲಾ ಅಡಿಗ ಇದ್ದಾರೆ.

ರಾಷ್ಟ್ರಗಳಿಗೆ ಸಾರಥ್ಯ
- ಅಂಟೊ ನಿಯೊ ಕಾಸ್ಟಾ- ಪೋರ್ಚುಗಲ್‌ ಪ್ರಧಾನಿ
- ಮೊಹ್ಮದ್‌ ಇರ್ಫಾನ್‌ ಅಲಿ- ಗಯಾನಾ ಅಧ್ಯಕ್ಷ
- ಪ್ರವಿಂದ್‌ ಕುಮಾರ್‌- ಮಾರಿಷಸ್‌ ಪ್ರಧಾನಿ
- ಪೃಥ್ವಿರಾಜ್‌ ಸಿಂಗ್‌- ಮಾರಿಷಸ್‌ ಅಧ್ಯಕ್ಷ
- ಚಾನ್‌ ಸಂಟೋಕಿ- ಸುರಿನಾಮ್‌ ಅಧ್ಯಕ್ಷ ಆಡಳಿತದ ಉಪ ಮುಖ್ಯಸ್ಥರು
- ಕಮಲಾ ಹ್ಯಾರಿಸ್‌- ಅಮೆರಿಕ ಉಪಾಧ್ಯಕ್ಷೆ
- ಭರತ್‌ ಜಾಗೆಡೊ- ಗಯಾನಾ ಉಪಾಧ್ಯಕ್ಷ
ಲಿಯೊ ವರಾಡ್ಕರ್‌- ಐರ್ಲೆಂಡ್‌ ಉಪಪ್ರಧಾನಿ


Spread the love

About Laxminews 24x7

Check Also

ಸಂಭಾವ್ಯ ಪ್ರವಾಹ ಮತ್ತು ಅತೀವೃಷ್ಟಿ ನಿಯಂತ್ರಣ ಸಲುವಾಗಿ ಪೂರ್ವಭಾವಿ ಸಭೆ

Spread the loveಗೋಕಾಕ: ನಿರಂತರ ಮಳೆ ಹಾಗೂ ಮುಂದೆ ಬರಬಹುದಾದ ಪ್ರವಾಹ ಭೀತಿಯನ್ನು ಎದುರಿಸುವ ಸಲುವಾಗಿ ಎಲ್ಲ ರೀತಿಯ ಮುನ್ನೆಚ್ಚರಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ