Breaking News
Home / ರಾಜ್ಯ / ಆಸ್ಕರ್‌ನಿಂದ ಹೊರಬಿದ್ದ ಜಲ್ಲಿಕಟ್ಟು ಸಿನಿಮಾ..!

ಆಸ್ಕರ್‌ನಿಂದ ಹೊರಬಿದ್ದ ಜಲ್ಲಿಕಟ್ಟು ಸಿನಿಮಾ..!

Spread the love

ನವದೆಹಲಿ : ವಿಶ್ವ ಪ್ರಸಿದ್ಧ ಆಸ್ಕರ್ ಸ್ಪರ್ಧೆಯಿಂದ ಭಾರತೀಯ ಚಿತ್ರರಂಗದ ಪ್ರತಿಷ್ಠೆಯ ಗುರುತಾಗಿ, ಅತ್ಯುತ್ತಮ ಅಂತಾರಾಷ್ಟ್ರೀಯ ವೈಶಿಷ್ಟ್ಯ ವಿಭಾಗದಲ್ಲಿ ಪ್ರವೇಶ ಪಡೆದಿದ್ದ ಮಲೆಯಾಳಂ ಚಿತ್ರ ಜಲ್ಲಿಕಟ್ಟು ಮುಂದಿನ ಹಂತಕ್ಕೆ ತಲುಪುವಲ್ಲಿ ಸೋತು ಸ್ಪರ್ಧೆಯಿಂದ ಹೊರಬಿದ್ದಿದೆ. 93ನೇ ಅಕಾಡೆಮಿ ಪ್ರಶಸ್ತಿಯಿಂದ ಜಲ್ಲಿಕಟ್ಟು ಹೊರಬಿದ್ದರೂ, ದೇಶದ ಮತ್ತೊಂದು ಅತುತ್ತಮ ಲೈವ್ ಆಯಕ್ಷನ್ ಶಾರ್ಟ್ ಫಿಲಂ ‘ಬಿಟ್ಟು’ ಮುಂದಿನ ಹಂತಕ್ಕೆ ತಲುಪಿ ಆಶ್ಚರ್ಯ ಮೂಡಿಸಿದೆ. ಶಾರ್ಟ್ ಫಿಲಂ ವಿಭಾಗದಲ್ಲಿ ಬಿಟ್ಟು ತೀವ್ರ ಸ್ಪರ್ಧೆ ನೀಡುತ್ತಿದೆ.

ಲಿಜೊ ಜೋಶ್ ಪೆಲ್ಲಿಸ್ಸೆರ್ರಿ ನಿರ್ದೇಶನದ ಜಲ್ಲಿಕಟ್ಟು, ಆಸ್ಕರ್‍ಗೆ ಭಾಗವಹಿಸಿದ್ದ 93 ದೇಶಗಳ 15 ಫೀಚರ್ಸ್‍ಗಳಲ್ಲಿ 5 ಅತ್ಯುತ್ತಮ ಚಿತ್ರಗಳಲ್ಲಿ ಸೇರ್ಪಡೆಯಾಗಿ ಹೊರಹೊಮ್ಮಿತ್ತು. ಆದರೆ, ಮುಂದಿನ ಹಂತ ತಲುಪುವಲ್ಲಿ ಸೋತಿರುವುದು ಆಶ್ಚರ್ಯ ಮೂಡಿಸಿದೆ ಎಂದು ಬುಧವಾರ ತಿಳಿದುಬಂದಿದೆ.

ಮಾವೋವಾದಿ ಆಧಾರಿತ ಸಣ್ಣ ಕಥೆಯಾದ ಜಲ್ಲಿಕಟ್ಟು, ಆಂಟೋನಿ ವರ್ಗೀಸ್, ಚೆಂಬನ್ ವಿನೋದ್ ಜೋಶ್, ಸಾಬುಮಾನ್ ಆಬ್ದುಸಮ್ಮದ್ ಹಾಗೂ ಶಾಂತಿ ಬಾಲಚಂದ್ರನ್ ತಾರಾಗಣವಿದೆ. 2019ರ ಸೆ.6 ರಂದು ಟೊರಂಟೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಕರಿಷ್ಮಾ ದೇವ್ ದುಬೆ ನಿರ್ದೇಶನದ ಬಿಟ್ಟು ಈಗ ಆಸ್ಕರ್‍ನಲ್ಲಿ ಅತ್ಯುತ್ತಮ ಲೈವ್ ಆಯಕ್ಷನ್ ಚಿತ್ರ ಶಾರ್ಟ್ ಲಿಸ್ಟ್ ಪಟ್ಟಿಯಲ್ಲಿದೆ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ಕಾಂಗ್ರೆಸ್​ ತೊರೆದು ಶಿಂಧೆ ಬಣ ಸೇರ್ಪಡೆಯಾದ ಬಾಲಿವುಡ್​ ನಟ ಗೋವಿಂದ; ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Spread the loveಮುಂಬೈ: ಹಿರಿಯ ಬಾಲಿವುಡ್​ ನಟ, ಮಾಜಿ ಸಂಸದ ಗೋವಿಂದ ಗುರುವಾರ (ಮಾರ್ಚ್​ 28) ಕಾಂಗ್ರೆಸ್​ ತೊರೆದು ಶಿವಸೇನೆ (ಏಕನಾಥ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ