Breaking News

ಭೂಮಾಪನ ಅಧಿಕಾರಿ ಎಸಿಬಿ ಬಲೆಗೆ

Spread the love

ಯಾದಗಿರಿ: ಭೂಮಾಪನ ಇಲಾಖೆಯ ಅಧಿಕಾರಿ ರಘುರಾಮ ಜಮೀನು ಅಳತೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಜೀವ ಚವ್ಹಾಣ ಅವರಿಂದ ₹2 ಸಾವಿರ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ಪಡೆಯ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ನಗರದ ಹೊಸಳ್ಳಿ ಕ್ರಾಸ್‌ ಹೋಟೆಲೊಂದರಲ್ಲಿ ₹2 ಸಾವಿರ ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

‘ಜಮೀನು ಅಳತೆ ಮಾಡುವ ವಿಚಾರದಲ್ಲಿ ₹5 ಸಾವಿರ ಬೇಡಿಕೆ ಇಟ್ಟಿದ್ದರು. ಮೊದಲಿಗೆ ₹2 ಸಾವಿರ ಪಡೆಯಲು ಒಪ್ಪಿದ್ದರು. ಆದರಂತೆ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದಿದ್ದಾರೆ’ ಎಂದು ಎಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿದರು.

ದಾಳಿ ವೇಳೆ ಎಸಿಬಿ ಜಿಲ್ಲಾ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ಡಿವೈಎಸ್ಪಿ ಉಮಾಶಂಕರ, ಇನ್‌ಸ್ಪೆಕ್ಟರ್‌ ಗುರುಪಾದ ಬಿರಾದಾರ, ಸಿಬ್ಬಂದಿ ಗುತ್ತಪ್ಪಗೌಡ, ವಿಜಯಕುಮಾರ, ಅಮರನಾಥ, ಪ್ರಕಾಶ ಮಾಳಿ, ರವಿ ಹಾಗೂ ಸಾಬಣ್ಣ ಇದ್ದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ