Breaking News
Home / ರಾಜ್ಯ / ಎರಡನೇ ಮಗುವಿನ ಆಗಮನದ ದಿನಾಂಕ ತಿಳಿಸಿದ ಸೈಫ್-ಕರೀನಾ ದಂಪತಿ

ಎರಡನೇ ಮಗುವಿನ ಆಗಮನದ ದಿನಾಂಕ ತಿಳಿಸಿದ ಸೈಫ್-ಕರೀನಾ ದಂಪತಿ

Spread the love

ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ದಂಪತಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಮೊದಲ ಮಗ ತೈಮೂರ್‌ಗೆ ಈಗ ನಾಲ್ಕು ವರ್ಷವಾಗಿದ್ದು, ಈಗ ಎರಡನೇ ಮಗುವಿಗೆ ಗರ್ಭಿಣಿ ಆಗಿದ್ದಾರೆ ನಟಿ ಕರೀನಾ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಮಗುವಿನ ಡಿಲೆವರಿ ಡೇಟ್‌ ಅನ್ನು ಹೇಳಿದ್ದಾರೆ ಸೈಫ್ ಅಲಿ ಖಾನ್.

ಫೆಬ್ರವರಿ ಮೊದಲ ವಾರದಲ್ಲಿ ಕರೀನಾ ಮಗುವಿಗೆ ಜನ್ಮ ನೀಡಲಿದ್ದಾರಂತೆ. ಈ ವಿಷಯವನ್ನು ಸೈಫ್ ಅಲಿ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮೊದಲ ಮಗುವಿನ ಸಮಯದಲ್ಲಿ ಕರೀನಾ ಸಾಕಷ್ಟು ಆತಂಕದಲ್ಲಿದ್ದರು, ಆದರೆ ಈ ಬಾರಿ ಕೂಲ್ ಆಗಿದ್ದಾರೆ ಎಂದು ಹೇಳಿದ್ದಾರೆ ಸೈಫ್.

ಹೊಸ ಮಗುವಿನ ಆಗಮನಕ್ಕೆ ಸಾಕಷ್ಟು ತಯಾರಿಯನ್ನು ಸೈಫ್ ಹಾಗೂ ಕರೀನಾ ಮಾಡಿಕೊಂಡಿದ್ದಾರೆ. ಈಗಿರುವ ಮನೆಯನ್ನು ಬಿಟ್ಟು ಮುಂಬೈನಲ್ಲಿಯೇ ಇನ್ನೂ ದೊಡ್ಡ ಮನೆ ಖರೀದಿಸಿದ್ದು, ಹೊಸ ಮಗುವಿನ ಆರೈಕೆ ಹಾಗೂ ತೈಮೂರ್ ಆರೈಕೆಗಾಗಿ ಅನುಕೂಲವಾಗುವಂತೆ ಅದನ್ನು ವಿನ್ಯಾಸಗೊಳಿಸಲಾಗಿದೆ.

ಇನ್ನು ‘ಪಾಪಾರಾಟ್ಜಿ’ಗಳಲ್ಲಿ ಮನವಿ ಸಹ ಮಾಡಿರುವ ಸೈಫ್ ಹಾಗೂ ಕರೀನಾ. ಹೊಸ ಮಗುವಿನ ಚಿತ್ರಗಳನ್ನು ದಯವಿಟ್ಟು ತೆಗೆಯಬೇಡಿ ಎಂದು ಮನವಿ ಮಾಡಿದ್ದಾರೆ. ಮಗುವಿಗೆ ಅನಗತ್ಯ ಪ್ರಾಮುಖ್ಯತೆ ದೊರೆಯುವುದು ನಮಗೆ ಇಷ್ಟವಿಲ್ಲ ಎಂದಿದ್ದಾರೆ ಈ ತಾರಾ ದಂಪತಿ.


Spread the love

About Laxminews 24x7

Check Also

ಬೆಳಗಾವಿ: ಪುತ್ರನ ಪರ ಪ್ರಚಾರಕ್ಕೆ ಆಶಾ ಕಾರ್ಯಕರ್ತೆಯರಿಗೆ ಒತ್ತಡ – ಸಚಿವೆ ಹೆಬ್ಬಾಳ್ಕರ್ ವಿರುದ್ಧ ಕ್ರಿಮಿನಲ್ ಕೇಸ್

Spread the loveಬೆಳಗಾವಿ: ಲೋಕಸಭೆ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ