Breaking News
Home / ರಾಜ್ಯ / ಬೆಳಗಾವಿಯ ಶ್ರೀನಿವಾಸ ತಾಳೂಕರ ಕನ್ನಡ ನಿಷ್ಠೆಗೆ ಒಲಿದು ಬಂತು ನಾಡೋಜ ಜೋಶಿಯವರಿಂದ ಅಭಿಮಾನದ ಸನ್ಮಾನ

ಬೆಳಗಾವಿಯ ಶ್ರೀನಿವಾಸ ತಾಳೂಕರ ಕನ್ನಡ ನಿಷ್ಠೆಗೆ ಒಲಿದು ಬಂತು ನಾಡೋಜ ಜೋಶಿಯವರಿಂದ ಅಭಿಮಾನದ ಸನ್ಮಾನ

Spread the love

ದೂರದರ್ಶನ ಚಂದನ ಕೇಂದ್ರದ ನಿರ್ದೇಶಕರಾಗಿ ಅತ್ಯಂತ ಜವಾಬ್ದಾರಿಯುತವಾಗಿ, ಪ್ರಾಮಾಣಿಕ ನಿಷ್ಠೆಯಿಂದ ಸೇವೆ ಸಲ್ಲಿಸಿ ಪ್ರತಿಷ್ಠಿತ,ನಾಡೋಜ ಪ್ರಶಸ್ತಿಗೆ ಭಾಜನರಾಗಿ, #ಸಂತ ಶಿಶುನಾಳ ಶರೀಫರ ಗುರುಗಳಾದ #ಗುರುಗೋವಿಂದ #ಭಟ್ಟರ ವಂಶಸ್ಥರಾಗಿ ಸದಾ ಕನ್ನಡ ಮಂತ್ರವನ್ನು ಜಪಿಸುತ್ತಾ ವಿವಿಧ ರೀತಿಯಲ್ಲಿ ಕನ್ನಡಮ್ಮನ ಸೇವೆ ಸಲ್ಲಿಸುತ್ತಿರುವ ದೂರದರ್ಶನ ಕೇಂದ್ರ ಚಂದನದ ವಿಶ್ರಾಂತ ಹೆಚ್ಚುವರಿ ಮಹಾ ನಿರ್ದೇಶಕರಾದ ನಾಡೋಜ ಡಾ. ಮಹೇಶ್ ಜೋಶಿ ಅವರ ಸರಳತೆಯನ್ನು ಯಾವ ಕನ್ನಡಿಗನೂ ಸಹ ಮೆಚ್ಚದೆ ಇರಲಾರ.
ಎಲ್ಲೋ ದೂರಿನ ಬೆಂಗಳೂರಿನಲ್ಲಿದ್ದುಕೊಂಡು ಸದಾ ಕನ್ನಡ ಕಾಳಜಿವಹಿಸಿ ಬೆಳಗಾವಿಯಲ್ಲಿ ಎಲೆ ಮರೆಯ ಕಾಯಿಯಂತೆ ನಿರಂತರವಾಗಿ ಕನ್ನಡಕ್ಕಾಗಿ ಕನ್ನಡದ ಅಸ್ಮಿತೆ ಉಳಿವಿಗಾಗಿ,ಕನ್ನಡದ ಗಟ್ಟಿತನಕ್ಕಾಗಿ, ನಾಡು ನುಡಿ ನೆಲ ಜಲ ಭಾಷೆಯ ವಿಷಯ ಬಂದಾಗ ಪ್ರಾಮಾಣಿಕ ಹೋರಾಟಗಳ ತಮ್ಮದೇ ಆದ ಛಾಪು ಮೂಡಿಸಿ ಅದರಲ್ಲೂ ಬಹು ಚರ್ಚಿತ ವಿಷಯವಾಗಿರೋ ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಕನ್ನಡ ಬಾವುಟ ರಾರಾಜಿಸಲು ಕಾರಣೀಭೂತರಾದ ಬೆಳಗಾವಿಯ ಪ್ರಾಮಾಣಿಕ ಕನ್ನಡ ಹೋರಾಟಗಾರ ನಿಷ್ಠೆಯಿಂದ ಕನ್ನಡ ಉಳಿವಿಗಾಗಿ ಶ್ರಮಿಸುತ್ತಿರುವ ಹೆಮ್ಮೆಯ ಶ್ರೀನಿವಾಸ ತಾಳೂಕರ ಅವರ ಮನೆಗೆ ಬುಧವಾರ ಸ್ವತಃ ದೂರಿನ ಬೆಂಗಳೂರಿನಿಂದ ಬಂದು ಶ್ರೀನಿವಾಸ ಅವರ ಸತತ ೨೮ ವರ್ಷಗಳ ಹೋರಾಟದ ದಾರಿಯನ್ನು ನೆನೆಸಿಕೊಂಡು, ಹೋರಾಟವನ್ನು ಮೆಚ್ಚಿ ಅಪ್ಪಟ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳೂಕರ ಅವರ ಮನೆಗೆ ಹೋಗಿ ಅವರಿಗೆ ಬೆಳಗಾವಿ ಮಹಾನಗರ ಪಾಲಿಕೆ ಧ್ವಜವನ್ನು ಹಾರಾಡುವಂತೆ ಮಾಡಿದ್ದಕ್ಕಾಗಿ ಸನ್ಮಾನ ಮಾಡಿ ಗೌರವಿಸಿದ್ದಲ್ಲದೆ ಪ್ರೀತಿಯ ಶುಭಾಶಯಗಳನ್ನು ಕೋರಿ ಇನ್ನಷ್ಟು ಕನ್ನಡ ಸೇವೆಗೆ ಬೆನ್ನು ತಟ್ಟಿ ಹಾರೈಸಿದರು.

ಯಾವುದೇ ಪ್ರಚಾರದ ಗೀಳಿಗೆ ಅಂಟಿಕೊಳ್ಳದೆ, ಸ್ವಾರ್ಥ ಮನೋಭಾವ ತಾಳದೆ ಅತ್ಯಂತ ಪ್ರಾಮಾಣಿಕತೆಯಿಂದ ಯಾವ ಫಲಾಪೇಕ್ಷೆಗಳಿಲ್ಲದೆ ಕನ್ನಡಕ್ಕಾಗಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ ತಾಳೂಕರ ಮಹಾನಗರ ಪಾಲಿಕೆ ಮೇಲೆ ಕನ್ನಡ ಬಾವುಟ ರಾರಾಜಿಸಲು ಕಾರಣೀಭೂತರಾದವರು ಈ ತಾಳೂಕರ.


ಅಂತಹ‌ ಸಾಮಾನ್ಯ ಹೋರಾಟಗಾರನನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಿದ್ದಲ್ಲದೆ ಅನೇಕ ಜವಾಬ್ದಾರಿಯುತ ಸ್ಥಾನಗಳನ್ನು ನಿಭಾಯಿಸಿ ಸೈ ಎನ್ನಿಸಿಕೊಂಡ ದೂರದರ್ಶನ ಕೇಂದ್ರ ಚಂದನದ ವಿಶ್ರಾಂತ ಹೆಚ್ಚುವರಿ ಮಹಾ ನಿರ್ದೇಶಕರಾದ ನಾಡೋಜ ಡಾ. ಮಹೇಶ್ ಜೋಶಿ ಅವರ ಸರಳತೆ, ಕನ್ನಡ ನಿಷ್ಠೆ,ಸಜ್ಜನಿಕೆಯ,ಸವ್ಯಸಾಚಿಯ ವ್ಯಕ್ತಿತ್ವವನ್ನು ಎಲ್ಲರೂ ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದಾರೆ.
ಅನೇಕ ಹೋರಾಟಗಳನ್ನು ಮಾಡಿಕೊಂಡು ತಮ್ಮಷ್ಟಕ್ಕೆ ತಾವು ಕನ್ನಡ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ ತಾಳೂಕರ ಅವರ ಪ್ರಾಮಾಣಿಕ ಕನ್ನಡ ಸೇವೆಯನ್ನು ಎಲ್ಲರು ಗೌರವಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಮಹೇಶ್ ಜೋಶಿ ಅವರ ಸರಳತೆಯನ್ನು ನೋಡಿ ತಾಳೂಕರ ಕುಟುಂಬಸ್ಥರಿಗೆ ಸಂತೋಷ, ಹೆಮ್ಮೆಯಾಗದೆ ಉಳಿಲಿಲ್ಲ!


Spread the love

About Laxminews 24x7

Check Also

ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ಎಲ್ಲೆಲ್ಲೂ ಮ್ಯಾಗಿ: ಬೇಸತ್ತು ಪತ್ನಿಗೆ ವಿಚ್ಛೇದನ ನೀಡಿದ ಪತಿ!

Spread the love ಮೈಸೂರು: ಫಾಸ್ಟ್ ಹಾಗೂ ಬ್ಯೂಸಿ ಲೈಫ್ ಇಂದಿನ ಯುವ ದಂಪತಿಗಳು ರೆಡಿ ಟು ಈಟ್ ಫುಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ