Breaking News
Home / ರಾಜಕೀಯ / BIG NEWS : ‘ಸಿಎಂ ಯಡಿಯೂರಪ್ಪ’ ಸಂಪುಟಕ್ಕೆ ಮತ್ತಷ್ಟು ಬಲ : 7 ಶಾಸಕರು ‘ನೂತನ ಸಚಿವ’ರಾಗಿ ಸಂಪುಟಕ್ಕೆ ಸೇರ್ಪಡೆ

BIG NEWS : ‘ಸಿಎಂ ಯಡಿಯೂರಪ್ಪ’ ಸಂಪುಟಕ್ಕೆ ಮತ್ತಷ್ಟು ಬಲ : 7 ಶಾಸಕರು ‘ನೂತನ ಸಚಿವ’ರಾಗಿ ಸಂಪುಟಕ್ಕೆ ಸೇರ್ಪಡೆ

Spread the love

ಬೆಂಗಳೂರು : ಅಂತೂ ಇಂತೂ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೂತನ 7 ಶಾಸಕರು ಸಚಿವರಾಗುವ ಮೂಲಕ ಸೇರ್ಪಡೆಗೊಂಡಿದ್ದಾರೆ. ಸಿಎಂ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟಕ್ಕೆ 7 ಶಾಸಕರು ರಾಜಭವನದಲ್ಲಿ ನಡೆದಂತ ಸರಳ ಸಮಾರಂಭದಲ್ಲಿ ಅರವಿಂದ ಲಿಂಬಾವಳಿ, ಆರ್.ಶಂಕರ್, ಎಂಟಿಬಿ.ನಾಗರಾಜ್, ಅಂಗಾರ, ಮುರುಗೇಶ್ ನಿರಾಣಿ, ಸಿ.ಪಿ.ಯೋಗೀಶ್ವರ್ ಹಾಗೂ ಉಮೇಶ್ ಕತ್ತಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮೊದಲು ಆಗಮಿಸಿದಂತ ಶಾಸಕ ಉಮೇಶ್ ಕತ್ತಿಯವರು ಸಂಪುಟ ದರ್ಜೆಯ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆನಂತ್ರ ಅರವಿಂದ ಲಿಂಬಾವಳಿಯವರು ದೇವರ ಹೆಸರಿನಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಎಂ.ಟಿ.ಬಿ.ನಾಗರಾಜ್ ಅವರು ಸಂಪುಟ ದರ್ಜೆಯ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಮುರುಗೇಶ್ ನಿರಾಣಿಯವರು ಸಂಪುಟ ದರ್ಜೆಯ ಸಚಿವರಾಗಿ ದೇವರ ಮತ್ತು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಬಳಿಕ ಆರ್.ಶಂಕರ್ ಅವರು ಸಂಪುಟ ದರ್ಜೆಯ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇವರಾದ ನಂತ್ರ ಸಿ.ಪಿ.ಯೋಗೀಶ್ವರ್ ಅವರು ಸಂಪುಟ ದರ್ಜೆಯ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಎಸ್ ಅಂಗಾರ ಅವರು ಸಂಪುಟ ದರ್ಜೆಯ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ