ನವದೆಹಲಿ: ಭಾರತದಲ್ಲಿ ಬ್ಯಾನ್ಗೆ ಒಳಗಾದರೂ ಚೀನಾದ ಆಯಪ್ ಟಿಕ್ಟಾಕ್ 2020ರಲ್ಲಿ ಅತೀಹೆಚ್ಚು ಆದಾಯ ಗಳಿಸಿದ ಆಯಪ್ ಎನ್ನಿಸಿಕೊಂಡಿದೆ.
ಆಯಪ್ ಟೋಪಿಯಾ ಬಿಡುಗಡೆ ಮಾಡಿರುವ ಅನಾಲಿಟಿಕ್ಸ್ನಲ್ಲಿ ಟಿಕ್ಟಾಕ್ 540 ಮಿಲಿಯನ್ ಡಾಲರ್(₹39,62,43,36,000) ಆದಾಯ ಗಳಿಸುವ ಮೂಲಕ 2020ರಲ್ಲಿ ಅತೀಹೆಚ್ಚು ಆದಾಯ ಗಳಿಸಿದ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಪಡೆದಿದೆ. ಇನ್ನು ಟಿಂಡರ್ ಆಯಪ್ 513 ಮಿಲಿಯನ್ ಡಾಲರ್(₹37,64,31,19,200) ಆದಾಯ ಗಳಿಸುವ ಮೂಲಕ ನಂಬರ್ 2 ಸ್ಥಾನ ಪಡೆದಿದೆ.
ಆಯಪ್ ಟೋಪಿಯಾದ ಡೇಟಾ ಪ್ರಕಾರ.. ಯೂಟ್ಯೂವ್ ಮೂರನೇ ಸ್ಥಾನದಲ್ಲಿದ್ದು 478 ಮಿಲಿಯನ್ ಡಾಲರ್(₹35,07,48,75,200) ಆದಾಯ ಗಳಿಸಿದೆ. ಡಿಸ್ನಿ ಪ್ಲಸ್ ನಾಲ್ಕನೇ ಸ್ಥಾನದಲ್ಲಿದ್ದು 314 ಮಿಲಿಯನ್ ಡಾಲರ್(₹23,04,08,17,600) ಆದಾಯ ಗಳಿಸಿದೆ. ನಂತರ ಸ್ಥಾನದಲ್ಲಿ ಟೆನ್ಸೆಂಟ್ ವಿಡಿಯೋ ಆಯಪ್ ಇದ್ದು 2020ರಲ್ಲಿ 300 ಮಿಲಿಯನ್ ಡಾಲರ್(₹22,01,35,20,000) ಆದಾಯ ಗಳಿಸಿದೆ. ನೆಟ್ಫ್ಲಿಕ್ಸ್ 10ನೇ ಸ್ಥಾನದಲ್ಲಿದ್ದು 209 ಮಿಲಿಯನ್ ಡಾಲರ್(₹15,33,60,85,600) ಆದಾಯ ಗಳಿಸಿದೆ.