Breaking News
Home / ರಾಜ್ಯ / BREAKING : ‘K-SET’ ಫಲಿತಾಂಶ ಪ್ರಕಟ

BREAKING : ‘K-SET’ ಫಲಿತಾಂಶ ಪ್ರಕಟ

Spread the love

ಮೈಸೂರು : ಮೈಸೂರು ವಿಶ್ವವಿದ್ಯಾಲಯ ವು 2020 ರ ಸೆಪ್ಟೆಂಬರ್ ನಲ್ಲಿ ನಡೆಸಲಾಗಿದ್ದಂತ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ(ಕೆ-ಸೆಟ್) ಫಲಿತಾಂಶವನ್ನು ಇಂದು ( ಜನವರಿ 8) ರಂದು ಪ್ರಕಟ ಗೊಳಿಸಿದೆ.

ಈ ಕುರಿತಂತೆ ಮೈಸೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದ್ದು, 2020ರ ಸೆಪ್ಟೆಂಬರ್ ನಲ್ಲಿ ನಡೆದಿದ್ದ ಫಲಿತಾಂಶವನ್ನು ಜನವರಿ 8 ರಂದು www.kset.uni-mysore.ac.in ಜಾಲತಾಣದಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದೆ.

ರಾಜ್ಯದ 11 ಕೇಂದ್ರಗಳಲ್ಲಿ 41 ವಿಷಯಗಳಿಗೆ 79,717 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 5,495 ಮಂದಿಗೆ ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗುವ ಅರ್ಹತೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು 2020ರ ಸೆಪ್ಟೆಂಬರ್ ನಲ್ಲಿ ನಡೆದಿದ್ದಂತ ಕೆ-ಸೆಟ್ ಪರೀಕ್ಷೆಯಲ್ಲಿ ಅರ್ಜಿ ಸಲ್ಲಿಸಿದ್ದ 1.06 ಲಕ್ಷ ವಿದ್ಯಾರ್ಥಿಗಳಲ್ಲಿ ಸುಮಾರು 80 ಸಾವಿರ ಮಂದಿ ಪರೀಕ್ಷೆಗೆ ಹಾಜರಾಗಿದ್ದರು.

ಪರೀಕ್ಷಾ ಕೇಂದ್ರ ಅರ್ಹತೆ ಪಡೆದ ಅಭ್ಯರ್ಥಿಗಳು

ಬೆಂಗಳೂರು 1133

ಬೆಳಗಾವಿ 200

ತುಮಕೂರು 234

ಶಿವಮೊಗ್ಗ 296

ಮೈಸೂರು 1248

ಮಂಗಳೂರು 391

ಕಲಬುರಗಿ 464

ಧಾರವಾಡ 668

ದಾವಣಗೆರೆ 274

ವಿಜಯಪುರ 255

ಬಳ್ಳಾರಿ 332


Spread the love

About Laxminews 24x7

Check Also

5300 ಕೋಟಿ ಒಡೆಯ ರಾಜ್ಯಸಭೆಯ ಅಭ್ಯರ್ಥಿ!

Spread the love ಹೈದರಾಬಾದ್‌, ಮೇ 27: ಹೆಟೆರೊ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಂಡಿ ಪಾರ್ಥ ಸಾರಥಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ