ಶಿವಮೊಗ್ಗ: ಧರ್ಮ ಯಾವುದಾದರೂ ತತ್ವ ಒಂದೇ, ದೇವನೊಬ್ಬ ನಾಮ ಹಲವು. ಇಂತಹ ಪವಿತ್ರ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗಿದ್ದೇವೆ ಎನ್ನುವುದೇ ಸಂತೋಷ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಭದ್ರಾವತಿಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ – 2026 ಕಾರ್ಯಕ್ರಮದಲ್ಲಿ ಗುರುವಾರ ಭಾಗಿಯಾಗಿ ಮಾತನಾಡಿದ ಅವರು, ನಾನು ಇಂದು ಬರುವಂತೆಯೇ ಇರಲಿಲ್ಲ. ಆದರೆ ಐತಿಹಾಸಿಕ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಕರೆದಿದ್ದರು. ಆದರೆ ಬರಲು ಆಗಿರಲಿಲ್ಲ. ಇಂದು ಸರ್ವಧರ್ಮ ಸಭೆಗೆ ಸಂತೋಷದಿಂದ ಬಂದಿದ್ದೇನೆ ಎಂದರು.
ಶ್ರಮಪಟ್ಟಾಗ ಮಾತ್ರ ಫಲ ಸಿಗಲು ಸಾಧ್ಯ: ಶಿವಮೂರ್ತಿ ಶಿವಚಾರ್ಯರು ರೈತರ ಬಗ್ಗೆ ಕಾಳಜಿ ಹೊಂದಿದ್ದು, ರೈತರಿಗೆ ನೀರು ನೀಡಬೇಕೆಂಬುದು ಅವರ ಬಯಕೆಯಾಗಿದೆ. ಶ್ರೀಗಳು ನ್ಯಾಯಾಲಯ ನಡೆಸುತ್ತಾರೆಂದು ಕೇಳಿದ್ದೇನೆ. ಇಂದಿನ ಕಲಿಯುಗದಲ್ಲಿ ನ್ಯಾಯಾಲಯ ನಡೆಸುವುದು ಸಂತೋಷಕರ. ಬೇರು ಇಲ್ಲ ಅಂದರೆ ಮರ ಉಳಿಯುವುದಿಲ್ಲ. ನಂಬಿಕೆ ಇಲ್ಲ ಅಂದರೆ ಬದುಕು ಇಲ್ಲ. ಉಳಿಪೆಟ್ಟು ಬೀಳದೆ ಕಲ್ಲು ವಿಗ್ರಹ ಆಗಲ್ಲ. ಶ್ರಮಪಟ್ಟಾಗ ಮಾತ್ರ ಫಲ ಸಿಗಲು ಸಾಧ್ಯವಾಗುತ್ತದೆ. ದೇವರು ಶಾಪ, ವರ ನೀಡಲ್ಲ, ಅವಕಾಶ ನೀಡುತ್ತಾನೆ. ಅದನ್ನು ಬಳಸಿಕೊಳ್ಳಬೇಕು. ನಾವೆಲ್ಲಾ ಹೋಗುವಾಗ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕಿದೆ. ಪೀಠದ ಕುರಿತು ನನ್ನ ಹಾಗೂ ಸರ್ಕಾರದ ಪರವಾಗಿ ಗೌರವಯುತವಾಗಿ ನಮನ ಸಲ್ಲಿಸುತ್ತೇನೆ ಎಂದು ಹೇಳಿದರು.
ರಾಮಾಯಾಣ, ಮಹಾಭಾರತ, ಗಂಗಾಜಲ, ಕೃಷ್ಣನ ಕೊಳಲು, ತತ್ವಜ್ಞಾನಿ ತೆಗೆದುಕೊಂಡು ಬಂದರೆ ಭಾರತ ತೆಗೆದುಕೊಂಡು ಬಂದಂತೆ ಎಂದು ಅರಿಸ್ಟಾಟಲ್ ತನ್ನ ಶಿಷ್ಯ ಅಲೆಗ್ಸಾಂಡರ್ ಭಾರತದ ಮೇಲೆ ದಾಳಿಗೆ ಹೋಗುವಾಗ ಹೇಳುತ್ತಾರೆ ಎಂದು ತಿಳಿಸಿದರು.
Laxmi News 24×7