Breaking News

ಳಸ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರ, ವೈದ್ಯ ಡಾ. ಕಾರ್ತಿಕ್ ಕೆ. ಶೆಟ್ಟಿ

Spread the love

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಈಗ ಹೊಸ ಕಳೆ ಬಂದಿದೆ. ಕಳೆದ ಕೆಲವು ದಿನಗಳಿಂದ ವೈದ್ಯರಿಲ್ಲದೆ ಸೊರಗಿದ್ದ ಆಸ್ಪತ್ರೆಗೆ ಈಗ ಸ್ಥಳೀಯರೇ ಆಗಿರುವ ಡಾ. ಕಾರ್ತಿಕ್ ಕೆ. ಶೆಟ್ಟಿ ಅವರು ವೈದ್ಯರಾಗಿ ಬಂದಿದ್ದಾರೆ.DOCTOR CAME TO KALASA HOSPITAL

ಕಳಸದ ಖ್ಯಾತ ಉದ್ಯಮಿ ಕೃಷ್ಣ ಶೆಟ್ಟಿ ಅವರ ಪುತ್ರರಾದ ಕಾರ್ತಿಕ್, ಎಂಬಿಬಿಎಸ್ ಮತ್ತು ಎಂಡಿ ಪದವಿಗಳನ್ನು ಪೂರೈಸಿದ ಬಳಿಕ ದೊಡ್ಡ ನಗರಗಳಲ್ಲಿ ಕೈ ತುಂಬಾ ಸಂಬಳ ಬರುವ ಉದ್ಯೋಗ ಅವಕಾಶಗಳಿದ್ದರೂ ಅವೆಲ್ಲವನ್ನೂ ಬದಿಗೊತ್ತಿ ತಮ್ಮ ಹುಟ್ಟೂರಿನ ಜನರ ಸೇವೆ ಮಾಡಬೇಕೆಂಬ ಉದಾತ್ತ ಉದ್ದೇಶದಿಂದ ಅಧಿಕೃತವಾಗಿ ಸೇವೆಯನ್ನು ಆರಂಭಿಸಿದ್ದಾರೆ.

ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರಾಗಿ ನೇಮಕಗೊಂಡ ಮೊದಲ ದಿನವೇ ಸುತ್ತಮುತ್ತಲಿನ ಹಳ್ಳಿಗಳಿಂದ ನೂರಾರು ರೋಗಿಗಳು ಚಿಕಿತ್ಸೆಗಾಗಿ ಆಗಮಿಸಿದ್ದು, ಡಾ. ಕಾರ್ತಿಕ್ ಅವರು ಪ್ರತಿಯೊಬ್ಬರಿಗೂ ಅತ್ಯಂತ ತಾಳ್ಮೆ ಮತ್ತು ಪ್ರೀತಿಯಿಂದ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ.

ತಮ್ಮೂರಿನ ಮಣ್ಣಿನ ಮಗನೇ ವೈದ್ಯನಾಗಿ ಬಂದಿರುವುದು ಕಳಸದ ಜನರಲ್ಲಿ ಸಂತಸ ಮೂಡಿಸಿದ್ದು, ವೈದ್ಯರ ಸೇವಾ ಮನೋಭಾವಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಮ್ಮೂರಿನ ವೈದ್ಯರಿಂದ ನಮಗೆ ಅತ್ಯುತ್ತಮ ಚಿಕಿತ್ಸೆ ಸಿಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿರುವ ಸಾರ್ವಜನಿಕರು, ಡಾ. ಕಾರ್ತಿಕ್ ಶೆಟ್ಟಿ ಅವರು ಕಳಸದಲ್ಲಿ ಸುದೀರ್ಘ ಕಾಲ ಉತ್ತಮ ಸೇವೆ ಸಲ್ಲಿಸಲಿ ಎಂದು ಶುಭ ಹಾರೈಸಿದ್ದಾರೆ.


Spread the love

About Laxminews 24x7

Check Also

ಫ್ರೀ ಫೈರ್ ಗೇಮ್‌ಗೆ ಅಡಿಕ್ಟ್ ಆಗಿದ್ದ ಬಾಲಕನ ಹತ್ಯೆ – ಮನನೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

Spread the loveಬೆಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ  ವ್ಯಾಪ್ತಿಯ ಕುಂಬಾರಹಳ್ಳಿಯ ವಿನಾಯಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ