Breaking News

ಬೆಳಗಾವಿಯಲ್ಲಿ ನಮ್ಮೂರ ಶಾಲೆ ಉಳಿಸಿ ಪೋಷಕರ ಸಮಾವೇಶ

Spread the love

ಬೆಳಗಾವಿಯಲ್ಲಿ ನಮ್ಮೂರ ಶಾಲೆ ಉಳಿಸಿ ಪೋಷಕರ ಸಮಾವೇಶ
ಮ್ಯಾಗ್ನೆಟ್ ಶಾಲೆ ಯೋಜನೆಯನ್ನು ಸರ್ಕಾರ ಕೂಡಲೇ ಕೈ ಬಿಡಲು ಒತ್ತಾಯ
ಮ್ಯಾಗ್ನೆಟ್ ಶಾಲೆಯಿಂದ ಬಡವರು ಶಿಕ್ಷಣದ ಹಕ್ಕಿನಿಂದ ವಂಚಿತ
ಕೂಡಲೇ ಸರ್ಕಾರ ಈ ನಿರ್ಣಯ ಕೈ ಬಿಡಲಿ
ಇಲ್ಲದಿದ್ದರೇ, ಉಗ್ರ ಹೋರಾಟ
ಬೆಳಗಾವಿಯಲ್ಲಿ ನಮ್ಮೂರ ಶಾಲೆ ಉಳಿಸಿ ಪೋಷಕರ ಸಮಾವೇಶ
ಕನ್ನಡ ಶಾಲೆಗಳ ವಿಲೀನಿಕರಣಕ್ಕೆ ಮುಂದಾದ ಕರ್ನಾಟಕ ಸರ್ಕಾರ ನೀತಿಯನ್ನು ಖಂಡಿಸಿ ಇಂದು ಬೆಳಗಾವಿಯಲ್ಲಿ ನಮ್ಮೂರ ಶಾಲೆ ಉಳಿಸಿ ಪೋಷಕರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.
ಭಾನುವಾರದಂದು ಬೆಳಗಾವಿಯಲ್ಲಿ ಕನ್ನಡ ಶಾಲೆಗಳ ವಿಲೀನಿಕರಣಕ್ಕೆ ಮುಂದಾದ ಕರ್ನಾಟಕ ಸರ್ಕಾರ ನೀತಿಯನ್ನು ಖಂಡಿಸಿ ಇಂದು ಬೆಳಗಾವಿಯಲ್ಲಿ ನಮ್ಮೂರ ಶಾಲೆ ಉಳಿಸಿ ಪೋಷಕರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಉಪಸ್ಥಿತರಿದ್ಧ ಪೋಷಕರು ರಾಜ್ಯ ಸರ್ಕಾರವು ಕೈಗೊಂಡ ನೀತಿಯೂ ಬಡವರ ಶಿಕ್ಷಣಕ್ಕೆ ಅಡ್ಡಿಯಾಗಿದೆ. ಶಿಕ್ಷಣಕ್ಕಾಗಿ ಮಕ್ಕಳನ್ನು ದೂರದ ಪ್ರದೇಶಕ್ಕೆ ಕಳುಹಿಸಿ ಎಂಬುದು ಅವೈಜ್ಞಾನಿಕವಾಗಿದೆ ಎಂದು ದೂರಿದರು.
ಈ ಕುರಿತು ಮಾತನಾಡಿರುವ ಕನ್ನಡ ಸಂಘಟನೆಯಗಳ ಕ್ರೀಯಾಶೀಲ ಸಮಿತಿಯ ಅಧ್ಯಕ್ಷರಾದ ಅಶೋಕ ಚಂದರಗಿ ಅವರು, ಮ್ಯಾಗ್ನೇಟ್ ಹೆಸರಿನಲ್ಲಿ ಸಾವಿರಾರು ಕನ್ನಡ ಶಾಲೆಗಳನ್ನು ಮುಚ್ಚುವ ಹುಚ್ಚುತನವನ್ನು ಕರ್ನಾಟಕ ಸರ್ಕಾರ ಮಾಡುತ್ತಿದೆ. ಸುಮಾರು 40 ಸಾವಿರ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ.
ಇದರಿಂದಾಗಿ ಗ್ರಾಮೀಣಭಾಗದ ಮಕ್ಕಳ ಶಿಕ್ಷಣಕ್ಕೆ ಹೊಡೆತ ಬೀಳುತ್ತಿದೆ. ಈ ಕುರಿತು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರ ವಿಧಾನಸಭೆಯಲ್ಲಿಯೂ ಮತ್ತು ವಿಧಾನಸಭೆಯ ಹೊರಗೂ ಸುಳ್ಳು ಹೇಳುತ್ತಿದ್ದಾರೆ. ಇದರ ವಿರುದ್ಧ ಕನ್ನಡ ಸಂಘಟನೆಗಳು ತೀವ್ರ ಹೋರಾಟವನ್ನು ನಡೆಸಲಿವೆ. ಮುಖ್ಯಮಂತ್ರಿಗಳು ಉನ್ನತಮಟ್ಟದ ಸಭೆ ಕರೆದು ಈ ಯೋಜನೆಯನ್ನು ರದ್ಧು ಮಾಡಬೇಕು. ಶಾಲೆಗಳ ವಿಲೀನಿಕರಣ ಬಡವರ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದರು.
ಈ ಸಂದರ್ಭದಲ್ಲಿ ಪೋಷಕರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ