ಚಿಕ್ಕೋಡಿ: ಶ್ರೀಶೈಲ್ ಜಗದ್ಗುರು ಡಾ!ಚನ್ನಸಿಧ್ದರಾಮ ಪಂಡಿತಾರಾಧ್ಯ ಮಹಾಸ್ವಾಮೀಜಿಯವರಿಂದ ಯಡೂರ ಕ್ಷೇತ್ರ ಹಾಗೂ ಶ್ರೀವೀರಭದ್ರೇಶ್ವರ ದೇವಸ್ಥಾನ,ಶ್ರೀಮಠವು ಸಾಕಷ್ಟು ಅಭಿವೃದ್ಧಿ ಹೊಂದಿದೆ.ನಾನು ಹಾಗೂ ಶಾಸಕ ಗಣೇಶ ಹುಕ್ಕೇರಿ ಸೇರಿಕೊಂಡು ಯಡೂರ ಕ್ಷೇತ್ರ ದೇವಸ್ಥಾನದ ಅಭಿವೃದ್ಧಿಗೆ ಶ್ರೀಶೈಲ್ ಜಗದ್ಗುರಗಳಿಗೆ ಕೈಜೋಡಿಸುತ್ತೇವೆ ಎಂದು ಎಂಎಲ್ಸಿ ಪ್ರಕಾಶ ಹುಕ್ಕೇರಿ ಹೇಳಿದರು.
ಅವರು ಚಿಕ್ಕೋಡಿ ತಾಲೂಕಿನ ಯಡೂರ ಶ್ರೀವೀರಭದ್ರೇಶ್ವರ ವಿಶಾಳಿ ಜಾತ್ರಾಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮಾರ್ಚ ತಿಂಗಳಲ್ಲಿ ಯಡೂರ ಕ್ಷೇತ್ರದಲ್ಲಿ ನಡೆಯುವ
ಕೃಷ್ಣಾರತಿ,ಕುಂಭಾಷೇಕ,ಲಕ್ಷದೀಪೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ನಾನು ಶಾಸಕ ಗಣೇಶ ಹುಕ್ಕೇರಿಯವರು ಸಂಪೂರ್ಣ ರೀತಿಯ ಸಹಕಾರ ನೀಡಲಾಗುವುದು ಎಂದರು.ಯಡೂರ-ಕಲ್ಲೋಳ ಬ್ರಿಜ್ ಕಮ್ ಬ್ಯಾರೇಜ್ ಪೂರ್ತಿ ಮಾಡಿಯೇ ಶ್ರೀಗಳಿಂದ ಸತ್ಕಾರ ಸ್ವೀಕರಿಸುವೆ ಎಂದು ಸಂಕಲ್ಪ ಮಾಡಿದ್ದೆ. ಆ ಬ್ರಿಜ್ ಕಮ್ ಬ್ಯಾರೇಜ್ ಪೂರ್ತಿಗೊಂಡಿದೆ.ಈಗ ಶ್ರೀಶೈಲ್ ಜಗದ್ಗುರಗಳಿಂದ ಸತ್ಕಾರ ಸ್ವೀಕರಿಸುವೆ ಎಂದರು.21 ಕೋಟಿ ರೂಪಾಯಿ ವೆಚ್ಚದಲ್ಲಿ ಸೈನಿಕ ಟಾಕಳಿ-ಚಂದೂರಟೇಕ ನಡುವಿನ ಬ್ರಿಜ್ ಪೂರ್ತಿಗೊಳಿಸಿ ಸಂಚಾರಕ್ಕೆ ಮುಕ್ತವಾಗಿದೆ.ಆದಷ್ಟು ಬೇಗ ಯಡೂರ-ಕಲ್ಲೋಳ ದೊಡ್ಡ ಬ್ರಿಜ್ ನ ಕಾಮಗಾರಿಯನ್ನು ಪೂರ್ತಿಗೊಳಿಸುವುದಾಗಿ ಎಂದರು.
ಶಾಸಕ ದುರ್ಯೋಧನ ಐಹೊಳೆ ಮಾತನಾಡಿ ಶ್ರೀಶೈಲ್ ಶ್ರೀಗಳು ಯಡೂರ ಗ್ರಾಮಕ್ಕೆ ಬಂದ ಕೂಡಲೇ ಯಡೂರ ಕ್ಷೇತ್ರ, ವೀರಭದ್ರೇಶ್ವರ ದೇವಸ್ಥಾನ,ಕಾಡಸಿದ್ದೇಶ್ವರ ಮಠವು ಸಾಕಷ್ಟು ಅಭಿವೃದ್ಧಿ ಹೊಂದಿದೆ.ಬಾಲ್ಯದಲ್ಲಿ ಈ ಕ್ಷೇತ್ರಕ್ಕೆ ಬರುತ್ತಿದ್ದೆ.ಸದ್ಯ ಈ ಕ್ಷೇತ್ರದ ಸಂಪೂರ್ಣ ಚಿತ್ರಣವೇ ಬದಲಾಗಿದೆ ಎಂದರು.
ಸಾನಿಧ್ಯವನ್ನು ವಹಿಸಿದ್ದ ಶ್ರೀಶೈಲ್ ಜಗದ್ಗುರು ಡಾ! ಚನ್ನಸಿಧ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿ ಧರ್ಮ ಅಂದರೆ ಕರ್ತವ್ಯ,ನೈತಿಕತೆ ಮತ್ತು “ಸರಿಯಾದ ಜೀವನ ವಿಧಾನ”ವನ್ನು ಸೂಚಿಸುತ್ತದೆ; ಇದು ಸಾಮಾಜಿಕ ಬಂಧಗಳನ್ನು ಕಾಪಾಡುವ, ಸಮಾಜವನ್ನು ಒಟ್ಟಿಗೆ ಹಿಡಿದಿಡುವ ಶಕ್ತಿ ಮತ್ತು ವೈಯಕ್ತಿಕ ನಡವಳಿಕೆ, ಸಾಮಾಜಿಕ ಕರ್ತವ್ಯಗಳು, ಮತ್ತು ಆಂತರಿಕ ನಂಬಿಕೆಗಳ ಸಂಗಮವಾಗಿದೆ.ಧರ್ಮ ದುಃಖದಿಂದ ಸಂತೋಷಕ್ಕೆ ಸಾಗಿಸುವ ಮಾರ್ಗವಾಗಿದೆ ಎಂದರು.ಎಂಎಲ್ಸಿ ಪ್ರಕಾಶ ಹುಕ್ಕೇರಿ,ಶಾಸಕ ಗಣೇಶ ಹುಕ್ಕೇರಿಯವರು ಯಡೂರ ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ ಎಂದರು. ಮಾಜಿ ಶಾಸಕ ಕಲ್ಲಪ್ಪಣಾ ಮಗೆನ್ನವರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಜೀ ಕನ್ನಡದ ಶಿವಾನಿ ಶಿವದಾಸ ಸ್ವಾಮಿ,ಗಾನ ಕೊಗಿಲೆ ಶೋಭಾ ಹೊನವಾಡ ಅಕ್ಕಮಹಾದೇವಿ ಭಜನಾ ಮಂಡಳಿಯಿಂದ ವಿಶೇಷ ಸಂಗೀತ,ಶಿವಭಜನೆ ಕಾರ್ಯಕ್ರಮ ವು ಮನಸೂರಗೊಂಡಿತ್ತು. ಹಾಗೂ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿದವು.ಶ್ರೀಮತಿ ಡಾ! ಕವಿತಾ ಶಿವಬಸಯ್ಯ ಸಾಲಿಮಠ ಸೇರಿದಂತೆ ವಿವಿಧ ಗಣ್ಯರನ್ನು ಸತ್ಕರಿಸಲಾಯಿತು.
Laxmi News 24×7