Breaking News

ಕಣ್ಣು ಬಿಡದ ಮಗಳ ಜೊತೆ #ಸೈನಿಕನ (ಪತಿ) ಅಂತ್ಯಸಂಸ್ಕಾರಕ್ಕೆ ಬಂದ #ಪತ್ನಿ

Spread the love

ಕಣ್ಣು ಬಿಡದ ಮಗಳ ಜೊತೆ #ಸೈನಿಕನ (ಪತಿ) ಅಂತ್ಯಸಂಸ್ಕಾರಕ್ಕೆ ಬಂದ #ಪತ್ನಿ

ಇದು ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಪಾರ್ಲಿಯಲ್ಲಿ ನಡೆದ ಘಟನೆ. ಭಾರತೀಯ ಸೇನೆಯಲ್ಲಿದ್ದ ಪ್ರಮೋದ್ ಜಾಧವ್ ಎಂಬುವವರು ರಜೆ ಮೇಲೆ ಗ್ರಾಮಕ್ಕೆ ಬಂದಿದ್ದರು.

ಇತ್ತ ತುಂಬು ಗರ್ಭಿಣಿ ಪತ್ನಿ ಆಸ್ಪತ್ರೆಗೆ ಸೇರಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಕುಟುಂಬ ಇತ್ತು. ಆದರೆ ದುರಾದೃಷ್ಟವಶಾತ್ ಸೈನಿಕ ಪ್ರಮೋದ್ ರಸ್ತೆ ಅಪಘಾತದಲ್ಲಿ ಸಾವಣಪ್ಪಿದ್ದಾರೆ.

ಪ್ರಮೋದ್ ತೀರಿಹೋದ ಕೆಲವೇ ಗಂಟೆಯಲ್ಲಿ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಕೈ ಹಿಡಿದು ನೋವು ಆಲಿಸಬೇಕಿದ್ದ ಗಂಡ ಚಿತೆಯ ಮೇಲೆ ಮಲಗಿದ್ದ.

ಕಣ್ಣು ಬಿಡದ ಹೆಣ್ಣು ಮಗಳ ಜೊತೆ ಪತ್ನಿ ಗಂಡನ ಅಂತಿಮ‌ ಸಂಸ್ಕಾರಕ್ಕೆ ಬಂದಳು. ಈ ದೃಶ್ಯ ಕರುಳು ಹಿಂಡುವಂತಿತ್ತು. ಜಗತ್ತಿನ ಅರಿವು ಇಲ್ಲದ ನವಜಾತ ಶಿಶು ಯಾವ ಪಾಪ ಮಾಡಿತ್ತು ದೇವರೇ ಬಲ್ಲ…!


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ