Breaking News

ರಾಜ್ಯ ಬರಹಗಾರರ ಸಂಘದಿಂದ ಸಾವಿತ್ರಿಬಾಯಿ ಫೂಲೆ ಜಯಂತಿ

Spread the love

ರಾಜ್ಯ ಬರಹಗಾರರ ಸಂಘದಿಂದ ಸಾವಿತ್ರಿಬಾಯಿ ಫೂಲೆ ಜಯಂತಿ
ಮಹಿಳಾ ಸಾಕ್ಷರತೆಗೆ ಒತ್ತು ನೀಡಿದವರಿಗೆ ಪ್ರಶಸ್ತಿ ಪ್ರದಾನ
ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ಅಕ್ಷರದವ್ವ ಸಾವಿತ್ರಿಬಾಯಿ ಫೂಲೆ ಅವರ ಜಯಂತಿಯ ನಿಮಿತ್ಯ ಮಹಿಳಾ ಸಾಕ್ಷರತೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ ಶಿಕ್ಷಕೀಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ಅಕ್ಷರದವ್ವ ಸಾವಿತ್ರಿಬಾಯಿ ಫೂಲೆ ಅವರ ಜಯಂತಿಯ ನಿಮಿತ್ಯ ಮಹಿಳಾ ಸಾಕ್ಷರತೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ ಶಿಕ್ಷಕೀಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವೇದಿಕೆಯ ಮೇಲೆ ಸುನಂದಾ ಎಂ, ಎಂ ವೈ. ಮೆಣಸಿನಕಾಯಿ, ಎಸ್ ಎಂ ಭದ್ರಿ, ಸುಶೀಲಾ,ಆರ್ ಬಿ ಬನಶಂಕರಿ, ಡಾ ಸುನಿಲ್ ಪರಿಟ್, ಭಾರತ ಬಳ್ಳಾರಿ ಇನ್ನುಳಿದವರು ಉಪಸ್ಥಿತರಿದ್ಧರು. ಗಣ್ಯರ ಹಸ್ತದಿಂದ ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫೂಲೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ರಾಷ್ಟ್ರಮಾತೆ ಅಕ್ಷರದವ್ವ ಸಾವಿತ್ರಿಬಾಯಿ ಫೂಲೆ ಅವರ ಜಯಂತಿಯಂದು ಉತ್ತಮ ಸೇವೆ ಸಲ್ಲಿಸಿದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕಿಯರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಸಂಘದ ಜಿಲ್ಲಾಧ್ಯಕ್ಷರಾದ ಸುರೇಶ್ ಸಕ್ರೆಣ್ಣವರ ತಿಳಿಸಿದರು.
ಬೆಳಗಾವಿ ಜಿಲ್ಲಾ ಶಾಖೆಯ ಉಪಾಧ್ಯಕ್ಷರಾದ ಗಂಗಮ್ಮಾ ಪಾಟೀಲ್ ಅವರು ಪ್ರತಿ ಬಾರಿಯೂ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕಿಯರಿಗೆ ಪುರಸ್ಕಾರವನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಇನ್ನು ಸಾವಿತ್ರಿಬಾಯಿ ಫೂಲೆ ಪ್ರಶಸ್ತಿ ಪಡೆದ ಎಲಿಮುನ್ನೋಳಿ ಸರ್ಕಾರಿ ಶಾಲೆಯ ಶಿಕ್ಷಕಿ ಗೀತಾ ಶೆಟ್ಟಿ ಅವರು ಹರ್ಷ ವ್ಯಕ್ತಪಡಿಸಿದರು. ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫೂಲೆ ಅವರ ಹೆಸರಲ್ಲಿ ತಮಗೊಂದು ಪ್ರಶಸ್ತಿ ನೀಡಿದ್ದು ಸಂತಸದ ಸಂಗತಿ. ಸಾಮಾಜೀಕ ಸಮಸ್ಯೆಗಳನ್ನು ಎದುರಿಸಿ ಹೆಣ್ಣು ಮಕ್ಕಳನ್ನು ಸಾಕ್ಷರರನ್ನಾಗಿಸಲು ಸಾವಿತ್ರಿಬಾಯಿ ಫೂಲೆ ಅವರ ಆದರ್ಶಗಳು ಮಾದರಿ ಎಂದರು.
ಈ ಸಂದರ್ಭದಲ್ಲಿ ವಿವಿಧ ಶಾಲೆಯ ಶಿಕ್ಷಕೀಯರು ಮತ್ತು ಜಿಲ್ಲಾ ಬರಹಗಾರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ಧರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ