Breaking News

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು*
ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!
ರೈತರ ಸಮಸ್ಯೆ ಮುಂದಿಟ್ಟುಕೊಂಡು ಟ್ರ್ಯಾಕ್ಟರ್ ರ್ಯಾಲಿ
ಸುವರ್ಣಸೌಧ ಮುತ್ತಿಗೆಗೆ ನಡಹಳ್ಳಿ ಎಚ್ಚರಿಕೆ!
ಮೆಕ್ಕೆಜೋಳ, ತೊಗರಿ ಬೆಲೆ ಸಿಗದೆ ರೈತ ಕಂಗಾಲು
ಚಳಿಗಾಲದ ಅಧಿವೇಶನ ಸಮೀಪಿಸುತ್ತಿದ್ದಂತೆ ವಿಪಕ್ಷಗಳು ಬಹಳ ಆಕ್ಟಿವ್ ಆದಂತೆ ಕಾಣ್ತಿವೆ. ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಕಟ್ಟಿಹಾಕೋದಕ್ಕೆ ತಯಾರಿಯಲ್ಲಿರೋ ಬಿಜೆಪಿ ರೈತರ ಸಮಸ್ಯೆಗಳನ್ನ ಮುಂದಿಟ್ಟುಕೊಂಡು ವಿಜಯಪುರದಲ್ಲಿ ಬೃಹತ್ ಟ್ರಾಕ್ಟರ್ ರ್ಯಾಲಿ ನಡೆಸುವ ಸೆಡ್ಡು ಹೊಡೆದಿದೆ.
ಪ್ರತಿಭಟನೆಯಲ್ಲಿ ನಾಟಿ ಕೋಳಿ ಸರ್ಕಾರದ ಘೋಷಣೆಗಳು ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗುವಂತೆ ಮಾಡಿವೆ..
: ರಾಜ್ಯದಲ್ಲಿ ರೈತರು ಬೆಳೆ ವಿಮೆ ಪರಿಹಾರ, ಬೆಳೆ ಹಾನಿ ಪರಿಹಾರ ಸಿಗದೆ ಕಂಗಾಲಾಗಿದ್ದಾರೆ. ಈ ನಡುವೆ ಮೆಕ್ಕೆಜೋಳ ಖರೀದಿ ಕೇಂದ್ರ, ತೊಗರಿಗೆ ಬೆಂಬಲ ಬೆಲೆ ನೀಡುವಂತೆ ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ. ಚಳಿಗಾಲದ ಅಧಿವೇಶನ ಹೊತ್ತಲ್ಲಿ ಈ ವಿಚಾರ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.
ಈ ನಡುವೆ ವಿಜಯಪುರದಲ್ಲಿ ಬಿಜೆಪಿ ರೈತ ಮೋರ್ಚಾ ರೈತರ ಸಮಸ್ಯೆಗಳನ್ನ ಮುಂದಿಟ್ಟುಕೊಂಡು ಬೃಹತ್ ಟ್ರಾಕ್ಟರ್ ರ್ಯಾಲಿ ನಡೆಸಿದೆ. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ನೇತೃತ್ವದಲ್ಲಿ 40 ಕ್ಕು ಅಧಿಕ ಟ್ರಾಕ್ಟರ್ಗಳ ಮೂಲಕ ಬೃಹತ್ ಮೆರವಣಿಗೆ ನಡೆಸಲಾಯಿತು. ಈ ವೇಳೆ ರೈತರು ಬೆಳೆದ ಈರುಳ್ಳಿ, ತೊಗರಿ ಗಿಡ, ಮೆಕ್ಕೆಜೋಳ ಪ್ರದರ್ಶಿಸುವ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು. ಈ ವೇಳೆ ಮಾಧ್ಯಮಗಳ ಎದುರು ಮಾತನಾಡಿದ ಶಾಸಕ ಗಾಲಿ ಜನಾರ್ದನ ರೆಡ್ಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು. ಸಿಎಂ-ಡಿಸಿಎಂ ಬ್ರೇಕ್ಪಾಸ್ಟ್ ಮೀಟಿಂಗ್ನಲ್ಲಿ ಕಾಲಹರಣ ಮಾಡ್ತಿದ್ದಾರೆ. ರೈತರ ಸಮಸ್ಯೆಗಳನ್ನ ಆಲಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ರು.
_ ಜನಾರ್ದನ ರೆಡ್ಡಿ (ಗಂಗಾವತಿ ಶಾಸಕ)
 ಇನ್ನೂ ಬಿಜೆಪಿ ರೈತ ಮೋರ್ಚಾ ನಡೆಸಿದ ಟ್ರಾಕ್ಟರ್ ಹೋರಾಟದಲ್ಲಿ ನಾಟಿ ಕೋಳಿ ಘೋಷಣೆಗಳು ಮಾರ್ಧನಿಸಿದವು. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಿದ್ದ ಸರ್ಕಾರ ಸಿಎಂ ಚೇರ್ ಗುದ್ದಾಟದಲ್ಲಿ ತೊಡಗಿದೆ ಎಂದು ಹೋರಾಟಗಾರರು ಆಕ್ರೋಶ ಹೊರಹಾಕಿದ್ರು. ಇನ್ನು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ ಎಸ್ ಪಾಟೀಲ್ ನಡಹಳ್ಳಿ ಇದು ನಾಟಿ ಕೋಳಿ ಸರ್ಕಾರ, ಸಿಎಂ ರಿಂದ ನಾಟಿ ಕೋಳಿ ಮರ್ಡರ್ ಎಂದು ಘೋಷಣೆ ಕೂಗುವ ಮೂಲಕ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ರು.. ಈ ಹೋರಾಟ ಇಲ್ಲಿಗೆ ನಿಲ್ಲೋದಿಲ್ಲ, ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದೆ ಇದ್ದಲ್ಲಿ ಸಾವಿರಾರು ಟ್ರಾಕ್ಟರ್ಗಳ ಮೂಲಕ ಸುವರ್ಣ ಸೌಧ ಮುತ್ತಿಗೆ ಹಾಕೋದಾಗಿ ನಡಹಳ್ಳಿ ಎಚ್ಚರಿಕೆ ನೀಡಿದ್ರು..
..; ಒಟ್ನಲ್ಲಿ ಬೆಳೆ ಹಾನಿ ಪರಿಹಾರ, ಮೆಕ್ಕೆಜೋಳ ಖರೀದಿ ಕೇಂದ್ರ, ತೊಗರಿ ಬೆಂಬಲ ಬೆಲೆ, ದ್ರಾಕ್ಷಿ ಬೆಳೆ ವಿಮೆ ಬಾರದೆ ಇರೋದು ರೈತರನ್ನ ರೊಚ್ಚಿಗೆಬ್ಬಿಸಿದೆ. ಅಧಿವೇಶನ ಹೊತ್ತಲ್ಲೆ ಇದೆ ವಿಚಾರವನ್ನ ಮುಂದಿಟ್ಟುಕೊಂಡು ಬಿಜೆಪಿ ಆಡಳಿತ ಕಾಂಗ್ರೆಸ್ ಸರ್ಕಾರವನ್ನ ಕಟ್ಟಿಹಾಕುವ ತವಕದಲ್ಲಿದೆ…

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ