Breaking News

ಮಾಘ ಮೇಳ 2026: ಹುಬ್ಬಳ್ಳಿ – ಪ್ರಯಾಗರಾಜ್ ನಡುವೆ ವಿಶೇಷ ರೈಲು ಸಂಚಾರ

Spread the love

ಹುಬ್ಬಳ್ಳಿ: ಮಾಘ ಮೇಳದ ವ್ಯವಸ್ಥೆಗೆ ಅನುಕೂಲ ಕಲ್ಪಿಸಲು ಮತ್ತು ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು, ನೈಋತ್ಯ ರೈಲ್ವೆಯು ಎಸ್ಎಸ್ಎಸ್​ ಹುಬ್ಬಳ್ಳಿ ಮತ್ತು ಪ್ರಯಾಗರಾಜ್​ ಜಂಕ್ಷನ್​ ನಡುವೆ ಒನ್-ವೇ ಕಾಯ್ದಿರಿಸದ ವಿಶೇಷ ಎಕ್ಸ್​ ಪ್ರೆಸ್​ ರೈಲು ಸಂಚಾರವನ್ನು ಕಾರ್ಯಾಚರಣೆ ಮಾಡಲಿದೆ.

ರೈಲು ಸಂಖ್ಯೆ 07351 ಎಸ್ಎಸ್ಎಸ್ ಹುಬ್ಬಳ್ಳಿ–ಪ್ರಯಾಗರಾಜ್ ಮೀಸಲಾತಿ ಒನ್-ವೇ ಕಾಯ್ದಿರಿಸದ ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 4, 2025 (ಗುರುವಾರ) ಮತ್ತು ಡಿಸೆಂಬರ್ 9, 2025 (ಮಂಗಳವಾರ) ರಂದು ಸಂಚರಿಸಲಿದೆ. ಈ ರೈಲು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಸಂಜೆ 06:15 ಗಂಟೆಗೆ ಹೊರಟು ಕ್ರಮವಾಗಿ ಶನಿವಾರ ಮತ್ತು ಗುರುವಾರ ಪ್ರಯಾಗ್ ರಾಜ್​ಗೆ ಬೆಳಗ್ಗೆ 08:00 ಗಂಟೆಗೆ ತಲುಪಲಿದೆ.

ಈ ರೈಲು ಗದಗ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ವಿಜಯಪುರ, ಹೊಟಗಿ, ಸೋಲಾಪುರ, ದೌಂಡ್​​, ಅಹಮದ್​​ನಗರ, ಕೋಪರ್ಗಾಂವ್​​, ಮನ್ಮಾಡ್, ಭೂಸಾವಳ, ಖಾಂಡ್ವಾ, ಇಟಾರ್ಸಿ, ಪಿಪಾರಿಯಾ, ಜಬಲ್ಪುರ, ಕಟ್ನಿ, ಸತ್ನಾ ಮತ್ತು ಮಾಣಿಕ್ಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಈ ವಿಶೇಷ ರೈಲು 20 ಬೋಗಿಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ 18 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ಎಸ್ಎಲ್ಆರ್/ಡಿ ಬೋಗಿಗಳು ಇರಲಿವೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ