Breaking News
Home / ರಾಜ್ಯ / ಹೊಸ ವರ್ಷಾಚರಣೆ ಕಿಕ್, ಅಬಕಾರಿ ಇಲಾಖೆಗೆ ಭರ್ಜರಿ ಕಲೆಕ್ಷನ್..!

ಹೊಸ ವರ್ಷಾಚರಣೆ ಕಿಕ್, ಅಬಕಾರಿ ಇಲಾಖೆಗೆ ಭರ್ಜರಿ ಕಲೆಕ್ಷನ್..!

Spread the love

ಬೆಂಗಳೂರು,ಜ.1-ಕೋವಿಡ್-19, ಬ್ರಿಟನ್‍ನ ರೂಪಾಂತರಿ ವೈರಸ್, ಹಾಗೂ ಪೊಲೀಸರ ಕಟ್ಟುನಿಟ್ಟಿನ ಕ್ರಮದ ನಡುವೆಯೂ ನಿನ್ನೆ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅಬಕಾರಿ ಇಲಾಖೆಗೆ ಭರ್ಜರಿ ಕಿಕ್ ಹೊಡೆದಿದೆ.  ನಿನ್ನೆ ಒಂದೇ ದಿನ ಅಬಕಾರಿ ಇಲಾಖೆಗೆ ಸುಮಾರು 151 ಕೋಟಿಗೂ ಅಧಿಕ ವಹಿವಾಟು ನಡೆದಿದ್ದು, ಇತ್ತೀಚಿನ ದಿನಗಳಲ್ಲಿ ಇದು ದಾಖಲೆ ಪ್ರಮಾಣದ ವಹಿವಾಟು ಎನ್ನಲಾಗಿದೆ.

ನಿನ್ನೆ ಬೆಳಗ್ಗೆಯಿಂದ ರಾತ್ರಿಗೆ ಮುಕ್ತಾಯಗೊಂಡ ವಹಿವಾಟಿನಲ್ಲಿ ಸುಮಾರು 2.23 ಲಕ್ಷ ಕಾಟನ್‍ಬಾಕ್ಸ್ ಭಾರತೀಯ ಮದ್ಯ(120 ಕೋಟಿ 21 ಲಕ್ಷ) ಹಾಗೂ 1.73 ಲಕ್ಷ ಕಾಟನ್‍ಬಾಕ್ಸ್‍ನ ಬೀರುಗಳು ಮಾರಾಟವಾಗಿವೆ. ಇದು 31ಕೋಟಿ ಎಂದು ಅಂದಾಜಿಸಲಾಗಿದೆ. ನಿನ್ನೆ ಒಂದೇ ದಿನ ಸುಮಾರು 151 ಕೋಟಿಗೂ ಅಧಿಕ ಮದ್ಯ ವಹಿವಾಟು ನಡೆದಿದೆ.

ಎಂಎಸ್‍ಐಎಲ್, ಔಟ್‍ಲಿಟ್‍ಗಳು, ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಸುಮಾರು ರಾತ್ರಿ 11 ಗಂಟೆವರೆಗೆ ಮಾರಾಟ ಮಾಡಲು ಅನುಮತಿ ನೀಡಲಾಗಿತ್ತು. ಇದರ ಪರಿಣಾಮ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರು ಮದ್ಯವನ್ನು ಖರೀದಿಸಿದ್ದಾರೆ.

ಒಂದು ವೇಳೆ ರಾತ್ರಿ 1 ಗಂಟೆವರೆಗೂ ಮಾರಾಟ ಮಾಡಲು ಅವಕಾಶ ಕೊಟ್ಟಿದ್ದರೆ ಸುಮಾರು 200 ಕೋಟಿಯಷ್ಟು ವಹಿವಾಟು ನಡೆಯುವ ಸಾಧ್ಯತೆಯಿತ್ತು ಎಂದು ಇಲಾಖೆ ಮೂಲಗಳು ತಿಳಿಸಿವೆ. ಕಳೆದ ಮಾರ್ಚ್‍ನಲ್ಲಿ ಕೋವಿಡ್ ಕಾಣಿಸಿಕೊಂಡ ಪರಿಣಾಮ ರಾಜ್ಯಾದ್ಯಂತ ಎಲ್ಲ ಕಡೆ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಲಾಕ್‍ಡೌನ್ ತೆರವುಗೊಳಿಸದ ಬಳಿಕ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ನಿನ್ನೆ ನಡೆದ ವಹಿವಾಟು ಈ ವರ್ಷದಲ್ಲಿ ಅಧಿಕ ಪ್ರಮಾಣದ್ದು ಎಂದು ಅಂದಾಜಿಸಲಾಗಿದೆ.


Spread the love

About Laxminews 24x7

Check Also

ಬಡವರಿಗಲ್ಲ, ರೈಸ್ ಮಿಲ್‍ಗಳಿಗೆ ಸೇರುತ್ತಿದೆ ‘ಅನ್ನಭಾಗ್ಯ’ ಅಕ್ಕಿ

Spread the loveಕೋಲಾರ: ಬಡವರ ಹಸಿವು ನೀಗಿಸಲು ಸರ್ಕಾರ ಕೊಡುತ್ತಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ ಜಿಲ್ಲೆಯ ಬಂಗಾರಪೇಟೆಯ ಕಾಳಸಂತೆಯಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ