Breaking News

ಆನ್‌ಲೈನ್‌ನಲ್ಲಿ ಅಧಿಕ ಲಾಭದ ಆಸೆ ತೋರಿಸಿ ₹46.5 ಲಕ್ಷ ವಂಚನೆ; ಬ್ಯಾಂಕ್ ಮ್ಯಾನೇಜರ್​ಗಳು ಸೇರಿ ನಾಲ್ವರ ಬಂಧನ

Spread the love

ಕಾರವಾರ: ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಹಣ ಗಳಿಸಬಹುದು ಎಂದು ನಂಬಿಸಿ, ಫಾರೆಕ್ಸ್‌ (FOREX) ಟ್ರೇಡಿಂಗ್ ಆ್ಯಪ್ ಮೂಲಕ ಹೊನ್ನಾವರದ ಉದ್ಯಮಿಯೊಬ್ಬರಿಗೆ ಬರೋಬ್ಬರಿ 46.50 ಲಕ್ಷ ರೂಪಾಯಿ ವಂಚಿಸಿದ ಅಂತಾರಾಜ್ಯ ವಂಚಕರ ಜಾಲವನ್ನು ಉತ್ತರ ಕನ್ನಡದ ಸಿಇಎನ್ (CEN) ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಬ್ಯಾಂಕ್ ಉದ್ಯೋಗಿಗಳು ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.Four people including bank employees arrested for online money fraud case

ಈ ಬಗ್ಗೆ ಸಿಇಎನ್​ ಠಾಣೆ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಹೊನ್ನಾವರದ ಪ್ರಭಾತನಗರದ ನಿವಾಸಿ ಗಿರೀಶ್ (35) ಎಂಬವರು ಫೇಸ್‌ಬುಕ್‌ನಲ್ಲಿ ಟ್ರೇಡಿಂಗ್ ಜಾಹೀರಾತು ನೋಡಿ, ‘MarketAxess’ ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದರು. ಬಳಿಕ ಆರೋಪಿಗಳು ವಾಟ್ಸ್​ಆ್ಯಪ್ ಮೂಲಕ ಸಂಪರ್ಕಿಸಿ, ಮೇ 28, 2025 ರಿಂದ ಜುಲೈ 23, 2025 ರ ಅವಧಿಯಲ್ಲಿ ಹಂತ, ಹಂತವಾಗಿ ಒಟ್ಟು ರೂ. 46,50,000 ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದರು. ಹಣ 75,00,000 ರೂ.ಗಳಾದರೂ ವಿತ್‌ಡ್ರಾ ಮಾಡಲು ಬಾರದೇ ಇದ್ದಾಗ ಮೋಸ ಹೋಗಿರುವುದು ಗೊತ್ತಾಗಿದೆ ಎಂದು ದೂರುದಾರರು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬಂಧಿತರಲ್ಲಿ ಮೂವರು ಬ್ಯಾಂಕ್‌ ರಿಲೇಶನ್‌ಶಿಪ್ ಮ್ಯಾನೇಜರ್‌ಗಳು: ಅದರಂತೆ, ಪ್ರಕರಣದ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ, ಸಿಇಎನ್ ಡಿವೈಎಸ್‌ಪಿ ಬಿ. ಅಶ್ವಿನಿ ಅವರ ನೇತೃತ್ವದ ವಿಶೇಷ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ಕೈಗೊಂಡ ಪೊಲೀಸರು, ​ಎಂ.ಡಿ ಆಲಮ್ (ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ), ಹೈದರಾಬಾದ್‌ನಲ್ಲಿ ಬಂಧಿಸಲಾದ ಬಿಲ್ಲೆ ಪ್ರವೀಣಕುಮಾರ್ (35) ಮತ್ತು ವಿನಯ್ ಕುಮಾರ್ (30) ಎಂಬವರನ್ನು ಬಂಧಿಸಿದ್ದಾರೆ. ಇವರು ಆರ್​​ಬಿಎಲ್ (RBL) ಬ್ಯಾಂಕ್‌ನಲ್ಲಿ ರಿಲೇಶನ್‌ಶಿಪ್ ಮ್ಯಾನೇಜರ್‌ಗಳಾಗಿದ್ದು, ವಂಚನೆಗೆ ಅಕ್ರಮವಾಗಿ ಖಾತೆ ತೆರೆದು ಸಹಕರಿಸಿದ್ದರು. ​ಇನ್ನೋರ್ವ ಆರೋಪಿ ಶಮೀಮ್ ಅಖ್ತರ್ (55) ಎಂಬಾತ ಬಿಹಾರ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಈತ ದೂರುದಾರರನ್ನು ವಂಚಕರ ಬಲೆಗೆ ಬೀಳಿಸಲು ಸಹಕರಿಸಿದ್ದ. ​ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ