Breaking News

ಕಾರಾಗೃಹದ ಆವರಣದಲ್ಲಿ ಒಟ್ಟೂ 293 ಗ್ರಾಂ ಒಣ ಗಾಂಜಾ ಹಾಗೂ 40 ಸಿಗರೇಟ್​​ಗಳು ಪತ್ತೆ

Spread the love

 ಕಾರಾಗೃಹದ ಆವರಣದಲ್ಲಿ ಒಟ್ಟೂ 293 ಗ್ರಾಂ ಒಣ ಗಾಂಜಾ ಹಾಗೂ 40 ಸಿಗರೇಟ್​​ಗಳು ಪತ್ತೆಯಾಗಿವೆ.

ಶಿವಮೊಗ್ಗ: ಇಲ್ಲಿನ ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಗುರುವಾರ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಜೈಲಿನ ಆವರಣದಲ್ಲಿ 293 ಗ್ರಾಂ ಒಣ ಗಾಂಜಾ ಹಾಗೂ 40 ಸಿಗರೇಟ್​​ಗಳು ಪತ್ತೆಯಾಗಿವೆ. ಬಾಳೆಗೊನೆ ಹಾಗೂ ಒಳ ಉಡುಪಿನಲ್ಲಿ ಗಾಂಜಾ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಪ್ರಕರಣ – 1: ಕೇಂದ್ರ ಕಾರಾಗೃಹಕ್ಕೆ ಗುರುವಾರ ಮಧ್ಯಾಹ್ನ 2:30ರ ಸುಮಾರಿಗೆ ಆಟೋವೊಂದು ಆಗಮಿಸಿತ್ತು. ಆಟೋ ಚಾಲಕ ಕಾರಾಗೃಹದ ಮುಖ್ಯದ್ವಾರದ ಬಳಿ ಬಂದು, ಜೈಲಿನ ಕ್ಯಾಂಟೀನ್​​ನವರು ಆರ್ಡರ್ ಮಾಡಿದ್ದರು ಎಂದು ಹೇಳಿ ಮೂರು ಬಾಳೆಹಣ್ಣಿನ ಗೊನೆಗಳನ್ನು ಇಳಿಸಿ ವಾಪಸ್ ಹೋಗಿದ್ದ. ಈ ವೇಳೆ ಕಾರಾಗೃಹದ ಕಾವಲು ಉಸ್ತುವಾರಿಯಾದ ಕರ್ನಾಟಕ ರಾಜ್ಯ ಕೈಗಾರಿಕ ಭದ್ರತಾ ಪಡೆಯ ಇನ್ಸ್​ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ಪ್ರೋಫೆಸನರಿ‌ ಪಿಎಸ್​​ಐ ಪ್ರಭು ಎಸ್. ಹಾಗೂ ಸಿಬ್ಬಂದಿಯಾದ ಪ್ರವೀಣ ಹಾಗೂ ನಿರೂಬಾಯಿ ಬಾಳೆಹಣ್ಣಿನ ಗೊನೆ ಚೆಕ್ ಮಾಡಿದಾಗ, ಅದರ ದಿಂಡಿನ ಒಳಗೆ ಗಾಂಜಾ ಹಾಗೂ ಸಿಗರೇಟ್ ಅನ್ನು ಕಪ್ಪು ಬಣ್ಣದ ಟೇಪ್​​ನಲ್ಲಿ ಸುತ್ತಿ ಇಟ್ಟಿರುವುದು ಪತ್ತೆಯಾಗಿದೆ.‌

dry-marijuana-and-cigarettes-seized-in-shivamogga-central-jail
dry-marijuana-and-cigarettes-seized-in-shivamogga-central-jail

ಪ್ರಕರಣ – 2: ಕೇಂದ್ರ ಕಾರಾಗೃಹದ ಎಸ್​ಡಿಎವೋರ್ವ ಕಾರಾಗೃಹದ ಒಳಗಡೆಯೇ ಗಾಂಜಾ ಸಾಗಿಸುತ್ತಿದ್ದ ವೇಳೆ ತಪಾಸಣೆ ನಡೆಸುತ್ತಿದ್ದ KSISF ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ. ಗುರುವಾರ ಬೆಳಗ್ಗೆ ಎಸ್​ಡಿಎ ಸಾತ್ವಿಕ್ (25) ಕರ್ತವ್ಯಕ್ಕೆ ಹಾಜರಾಗುವ ವೇಳೆ ಕಾರಾಗೃಹದ ಭದ್ರತೆ ಹೊಣೆ ಹೊತ್ತಿರುವ KSISF ಸಿಬ್ಬಂದಿಯು ತಪಾಸಣೆ ನಡೆಸಿದಾಗ ಆತನ ಬಳಿ 170 ಗ್ರಾಂ ಗಾಂಜಾ ಪತ್ತೆಯಾಗಿದೆ.‌ ಸಾತ್ವಿಕ್ ತನ್ನ ಒಳ ಉಡುಪಿನಲ್ಲಿ ಗಾಂಜಾ ಸಾಗಿಸುತ್ತಿರುವುದು ಗೊತ್ತಾಗಿದೆ.

dry-marijuana-and-cigarettes-seized-in-shivamogga-central-jail

ವಶಕ್ಕೆ ಪಡೆಯಲಾದ ಎಸ್​ಡಿಎ ಸಾತ್ವಿಕ್

ಇದರಿಂದ ಜೈಲಿನ ಸಿಬ್ಬಂದಿಯೇ ಗಾಂಜಾವನ್ನು ಕೈದಿಗಳಿಗೆ ಸರಬರಾಜು ಮಾಡುತ್ತಿರುವುದು ಸಾಬೀತಾಗಿರುವ ಕುರಿತು ಕಾರಾಗೃಹದ ಮುಖ್ಯ ಅಧಿಕ್ಷಕ ಡಾ.ರಂಗನಾಥ್ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತುಂಗಾ ನಗರ ಪೊಲೀಸರು ಸಾತ್ವಿಕ್​ನನ್ನು ವಶಕ್ಕೆ ಪಡೆದು, ತನಿಖೆ ಕೈಗೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ