Breaking News

ಅಂತಾರಾಜ್ಯ ಕಳ್ಳರಿಬ್ಬರ ಬಂಧನ

Spread the love

ಕೋಲಾರ: ಒಂಟಿ‌ ಮಹಿಳೆಯಿದ್ದ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಮಾಲೂರು ತಾಲೂಕಿನ ಪೊಲೀಸರು ಬಂಧಿಸಿದ್ದಾರೆ. 40 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ. ಪಶ್ಚಿಮ ಬಂಗಾಳ ಮೂಲದ ಹುಸ್ದರ್ ಶೇಖ್ (24) ಹಾಗೂ ತಮಿಳುನಾಡು ಮೂಲದ ಉಮಾಶಂಕರ್ (27) ಬಂಧಿತ ಆರೋಪಿಗಳು.

ಪ್ರಕರಣದ ವಿವರ: ಇದೇ ನವೆಂಬರ್ 4 ರಂದು ಮಾಲೂರು ತಾಲೂಕಿನ ಚಿಕ್ಕತಿರುಪತಿ ಗ್ರಾಮದ ದಿ ಎಂಪೈರಿಯನ್ ಅಪಾರ್ಟ್​ಮೆಂಟ್​ನಲ್ಲಿ ಪ್ರೀತ್ ಕಮಲ್ ಎಂಬ ಮಹಿಳೆ‌ಯಿದ್ದು, ಉಳಿದಂತೆ ಅವರ ಮನೆಯಲ್ಲಿ ಮತ್ತಿನ್ಯಾರು ಇಲ್ಲದಿರುವುದನ್ನು ಗಮನಿಸಿ 40 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಆರೋಪಿಗಳು ದೋಚಿದ್ದರು. 272 ಗ್ರಾಂ ಚಿನ್ನ, ವಜ್ರದ ಆಭರಣ, 640 ಗ್ರಾಂ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿ ಶೇಖ್ ಪರಾರಿಯಾಗಿದ್ದ. ಹುಸ್ದರ್ ಶೇಖ್ ಜೊತೆಗೆ ತಮಿಳುನಾಡು ಮೂಲದ ಕಳ್ಳತನ ಆರೋಪಿ ಉಮಾಶಂಕರ್​ನನ್ನೂ ಬಂಧಿಸಲಾಗಿದೆ. ಮನೆ ಕಳ್ಳತನ, ಸರಗಳ್ಳತನ ಹಾಗೂ ಬೇರೆಡೆ ಗಮನ ಸೆಳೆದು ವೃತ್ತಿಪರ ಕಳ್ಳತನ ಮಾಡ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ