ಗೋವಾ ಸೃಜನ್ ಕಾರ್ಯಾಗಾರದಲ್ಲಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಭಾಗಿ
ಗೋವಾ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ಜಿ ಅವರೊಂದಿಗೆ ಆಯೋಜಿಸಿದ್ದ ‘ನೇತ್ರತ್ವ ಸೃಜನ್ ಕಾರ್ಯಾಗಾರ’ವನ್ನು ಆಯೋಜಿಸಿದ್ದು ಈ ಕಾರ್ಯಾಗಾರವನ್ನು ಅವರೊಂದಿಗೆ ಖಾನಾಪೂರದ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಉದ್ಘಾಟಿಸಿದರು
ಕಾರ್ಯಕ್ರಮದಲ್ಲಿ ಅಮಿತ್ ಪಾಟ್ಕರ್ ಜೀ,ಗೋವಾ ವಿಧಾನಸಭೆಯ ವಿರೋಧ ಪಕ್ಷದ ನಾಯಕಿಯಾದ ಯೂರಿ ಅಲೆಮೋಜೀ ,ಮಾಣಿಕ್ರಾವ್ ಠಾಕ್ರೆ ಜೀ, ಡಾ. ಪ್ರಮೋದ ಸಲ್ಗಾಂವ್ಕರ್ ಜೀ ಬೀನಾ ನಾಯಕ್ ಜೀ , ಅಲೀನಾ ಸಲ್ಡಾನ್ಹಾ ಜಿ ಮತ್ತು ಗೋವಾ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರತೀಕ್ಷಾ ಖಲಾವ್ ಜೀ ಉಪಸ್ಥಿತರಿದ್ದರು.
ಈ ಕಾರ್ಯಾಗಾರವು ಎಲ್ಲಾ ಹಂತಗಳಲ್ಲಿ ಬಲವಾದ, ಸಬಲೀಕರಣಗೊಂಡ ಮತ್ತು ಜಾಗೃತ ಮಹಿಳಾ ನಾಯಕತ್ವವನ್ನು ನಿರ್ಮಿಸುವ ಮಹಿಳಾ ಕಾಂಗ್ರೆಸ್‌ನ ದೃಷ್ಟಿಕೋನವನ್ನು ಎತ್ತಿ ತೋರಿಸಿತು.
ಎಂದು ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಹೇಳಿ ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ನೀಡಿ ಗೌರವಿಸಿದೆ ನಮ್ಮ ಸಂಘಟನಾತ್ಮಕ ಚತುರತೆಯಿಂದ ಪಕ್ಷವನ್ನು ಬಲಪಡಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಶ್ರಮಿಸೋಣ ಎಂದರು.
Laxmi News 24×7