ಗೋಕಾಕ ಬಜರಂಗದಳ ತಾಲೂಕಾ ಘಟಕದಿಂದ ಆಯೋದ್ಯಾ ಬಲಿದಾನ ದಿವಸ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ನಗರದ ಶ್ರೀಚನ್ನಬಸವೇಶ್ವರ ವಿದ್ಯಾಪೀಠ ಆವರಣ ವಾಲ್ಮೀಕಿ ವೃತ್ತ ಗೋಕಾಕದಲ್ಲಿ ನಡೆದ ಬೃಹತ್ ರಕ್ತಧಾನ ಶಿಬಿರಕ್ಕೆ
ಶೂನ್ಯ ಸಂಪಾದನಮಠದ ಪರಮಪೂಜ್ಯ ಶ್ರೀ ಮುರುಘರಾಜೇಂದ್ರ ಸ್ವಾಮಿಜಿ ಗೋಕಾಕ ಇವರು ಜ್ಯೋತಿ ಬೆಳಗಿಸಿ ಹಸುಗೆ ಆಹಾರ ತಿನಿಸುವ ಮೂಲಕ ಚಾಲನೆ ನೀಡಿದರು.
ಕೃತಕವಾಗಿ ಎಷ್ಟೊ ಮುಂದುವರೆದರೂ ಸಹ ಕೃತಕವಾಗಿ ರಕ್ತವನ್ನು ತಯಾರಿಸಲು ಆಗಿಲ್ಲ,ಆಗೊದು ಇಲ್ಲ,ಸಾವಿನ ದವಡೆಯಲ್ಲಿರುವ ವ್ಯಕ್ತಿಯನ್ನ ಬದುಕಿಸಲು ಸ್ವಯಂ ರಕ್ತ ಬೇಕು, ಅದಕ್ಕಾಗಿ ಈಗಿನ ಯುವಕರು ರಕ್ತದಾನ ಮಾಡಿ ಜೀವನ ಉಳಿಸಲು ತಿಳಿಸಿದರು.
ಶ್ರೀ ಮಲ್ಲಿಕಾರ್ಜುನ ಗುಬ್ಬಲಗುಡ್ಡ ಮಠ ಘಟಪ್ರಭಾ, ಯುವ ಮುಖಂಡ ಸದಾಶಿವ ಗುದಗಗೋಳ, ನಾರಾಯಣಜಿ ಮಠಾಧಿಕಾರಿ,ಬಲದೇವ ಸಣ್ಣಕ್ಕಿ, ಕೃಷ್ಣಾ ಕುರುಬಗಟ್ಟಿ,ಲಕ್ಷ್ಮಣ ಮಿಶಾಳೆ, ಸಿದ್ದು ಬಿರಾಜಗೋಳ, ಲಕ್ಕಪ್ಪ ನಂದಿ, ಮಹೇಶ್ ಬಡೆಪ್ಪಗೋಳ ಸೇರಿದಂತೆ ಬಜರಂಗದಳದ ನೂರಾರು ಕಾರ್ಯಕರ್ತರು ಹಾಗೂ ಇನ್ನೂಳಿದ ಯುವಕರು ರಕ್ತದಾನ ಮಾಡಿ ಮಾನವಿಯತೆ ಮೆರೆದರು.
Laxmi News 24×7