Breaking News

ಪತ್ನಿ ಮೃತಪಟ್ಟ 3 ಗಂಟೆಯ ಬಳಿಕ ಪತಿ ಸಾವು; ಒಟ್ಟಿಗೆ ಅಂತ್ಯಕ್ರಿಯೆ

Spread the love

ಬೀದರ್: ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ದಂಪತಿಗಳು ಒಂದೇ ದಿನ ಸಾವಿಗೀಡಾದ ಘಟನೆ ನಡೆದಿದೆ. ಗುಂಡಪ್ಪ ಹೋಡಗೆ (85), ಲಕ್ಷ್ಮಿಬಾಯಿ ಹೋಡಗೆ (83) ಸಾವಿನಲ್ಲೂ ಒಂದಾದ ದಂಪತಿ.

ದಂಪತಿಗಳಿಬ್ಬರು ಕೆಲ ತಿಂಗಳಿನಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೊದಲು ಲಕ್ಷ್ಮೀಬಾಯಿ ಹೋಡಗೆ ಅವರು ಶುಕ್ರವಾರ ಸಂಜೆ ನಿಧನ ಹೊಂದಿದರು. ಇವರ ಸಾವಿನ ಸುದ್ದಿ ವಿಷಯ ತಿಳಿದು ಮೂರು ಗಂಟೆ ನಂತರ ಗುಂಡಪ್ಪ ಹೋಡಗೆ ಸಹ ಕೊನೆಯುಸಿರೆಳೆದಿದ್ದಾರೆ.

ಆರೇಳು ದಶಕ ಇಡೀ ಜೀವನವನ್ನು ಒಟ್ಟಿಗೆ ಕಳೆದಿದ್ದ ದಂಪತಿ ಒಂದೇ ದಿನ ಸಾವಿಗೀಡಾದ ಘಟನೆಗೆ ಗ್ರಾಮಸ್ಥರು, ಸಂಬಂಧಿಕರು ಕಣ್ಣೀರು ಹಾಕಿದ್ದಾರೆ. ದಂಪತಿಗೆ ನಾಲ್ವರು ಪುತ್ರಿಯರು, ಮೂವರು ಪುತ್ರರಿದ್ದಾರೆ. ಸ್ವಗ್ರಾಮದ ಹೊಲದಲಿ ದಂಪತಿಗಳಿಬ್ಬರನ್ನು ಅಕ್ಕ ಪಕ್ಕದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ