ಅ.30 ರಂದು ರೆಡ್ ಕ್ರಾಸ್ ಬೆಳಗಾವಿ ಜಿಲ್ಲಾ ಶಾಖೆ ಚುನಾವಣೆ; ಅನೀಲ್ ಚೌಗುಲೆ
ರೆಡ್ ಕ್ರಾಸ್ ಬೆಳಗಾವಿ ಜಿಲ್ಲಾ ಶಾಖೆ ಚುನಾವಣೆ
ಅಕ್ಟೋಬರ್ 30 ರಂದು ಮತದಾನ
ಅನೀಲ್ ಚೌಗುಲೆ ಮಾಧ್ಯಮಗೋಷ್ಟಿ
“ಮಾನವ ಸೇವೆ” ಎಂಬ ಧ್ಯೇಯದಡಿ ಸೇವೆ
ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಬೆಳಗಾವಿ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿ ಚುನಾವಣೆಯೂ ಇದೇ ಅಕ್ಟೋಬರ್ 30 ನಡೆಯಲಿದೆ ಎಂದು ಅನೀಲ್ ಚೌಗುಲೆ ಹೇಳಿದರು.
ಅವರು ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
30 ಅಕ್ಟೋಬರ್ 2025ರಂದು ಬೆಳಗಾವಿಯ ಬಿಐಎಂಎಸ್ ಸಭಾಂಗಣದಲ್ಲಿ, ಬೆಳಿಗ್ಗೆ 8.00 ರಿಂದ ಸಂಜೆ 4.00 ಗಂಟೆಯವರೆಗೆ ಭಾರತೀಯ ರಡ್ ಕ್ರಾಸ್ ಸೊಸೈಟಿ, ಬೆಳಗಾವಿ ಜಿಲ್ಲಾ ಶಾಖೆಯ ಮುಂದಿನ ಕಾರ್ಯಕಾರಿ ಸಮಿತಿ ಚುನಾವಣೆ ನಡೆಯಲಿದೆ.
“ಮಾನವ ಸೇವೆ” ಎಂಬ ಧ್ಯೇಯದಡಿ ನಾವು ಮಾನವೀಯತೆ, ಸೇವೆ ಮತ್ತು ಏಕತೆಯ ಮೂಲಕ ಉದ್ದೇಶಪೂರ್ಣ ಬದಲಾವಣೆ ತರಲು ಬದ್ಧರಾಗಿದ್ದೇವೆ.ಜಿಲ್ಲೆಯ ಎಲ್ಲಾ ತಾಲೂಕು ಮತ್ತು ಗ್ರಾಮಗಳಲ್ಲಿ ಮಾನವ ನಿರ್ಮಿತ ಹಾಗೂ ಪುಕೃತಿ ವಿಕೋಪಗಳಿಗೆ ತಕ್ಷಣದ ಮತ್ತು ಸುವ್ಯವಸ್ಥಿತ ಪ್ರತಿಕ್ರಿಯೆ ನೀಡಲು ಆದ್ಯತೆ ನೀಡಲಿದೆ. ಹೊಸ ಸಮಿತಿ ತನ್ನ ಅವಧಿಯಲ್ಲಿ 25 “ರೆಡ್ ಕ್ರಾಸ್ ಆಪ್ಟಿಕಲ್ ಕುಟುಂಬ ಕಲ್ಯಾಣ ಕೇಂದ್ರಗಳನ್ನು ಸ್ಥಾಪಿಸಲು ಬದ್ಧವಾಗಿದೆ.
ಪ್ರತಿ ಸಭೆಯ ವರದಿಯನ್ನು ಪಾರದರ್ಶಕವಾಗಿ ಐಆರ್‌ಸಿಎಸ್ ಮಾಧ್ಯಮಗಳ ಮೂಲಕ ಎಲ್ಲ ಸದಸ್ಯರಿಗೂ ಹಂಚಲಾಗುವುದು ಎಂದರು. ಬೈಟ್
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸದಸ್ಯರು ಉಪಸ್ಥಿತರಿದ್ಧರು.
Laxmi News 24×7