ಕೊಪ್ಪಳ, (ಅಕ್ಟೋಬರ್ 18): ಸಾರ್ವಜನಿಕ ಸ್ಥಳಗಳಲ್ಲಿ ಆರ್ ಎಸ್ಎಸ್ (RSS) ಕಾರ್ಯಚಟುವಟಿಕೆಗಳಿಗೆ ನಿರ್ಬಂಧಿಸುವ ಬಗ್ಗೆ ಕಾಂಗ್ರೆಸ್, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ನಡುವೆ ಜಟಾಪಟಿ ತೀವ್ರ ಸ್ವರೂಪ ಪಡೆದುಕೊಂಡಿದೆ.
ಅದರಲ್ಲೂ ಬಿಜೆಪಿ ನಾಯಕರು ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಸಮರ ಸಾರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಪ್ರತ್ಯಾರೋಪ ಜೋರಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಸಚಿವ ಶಿವರಾಜ್ ತಂಗಡಗಿ (Shivaraj Tangadagi) RSS ಒಪ್ಪುವವರು ದೇಶಪ್ರೇಮಿಗಳಲ್ಲ, ದೇಶ ವಿರೋಧಿಗಳು ಎಂದು ಹೇಳಿಕೆ ನೀಡಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಇದು ಹಿಂದೂಪರ ಸಂಘಟನೆಗಳ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.ಕೊಪ್ಪಳದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ತಂಗಡಗಿ, ಯಾರೂ ಆರ್ ಎಸ್ ಎಸ್ ಒಪ್ಪಿಕೊಳ್ಳುತ್ತಾರೆ ಅವರು ದೇಶ ವಿರೋಧಿಗಳು . ಆರ್ ಎಸ್ ಎಸ್ ದೇಶಭಕ್ತಿ ಸಂಘಟನೆ ಅಂತಾ ಯಾವ ಮೂಲದಿಂದ ಒಪ್ಕೋತಿರಿ.
ಇವರು ಗಾಂಧಿ, ಬಸವಣ್ಣ, ಬುದ್ದ ಯಾರನ್ನೂ ಒಪ್ಪಲ್ಲ. ಬಸವಣ್ಣರನ್ನ ಎಲ್ಲರೂ ಒಪ್ಕೋತಾರೆ. ಆದ್ರೆ ಆರ್ ಎಸ್ ಎಸ್ ನವರು ಒಪ್ಪಲ್ಲ ಎಂದು ವಾಗ್ದಾಳಿ ನಡೆಸಿದರು.ಇವರು ಅಂಬೇಡ್ಕರ್ ಅವರನ್ನು ಒಪ್ಪಲ್ಲ, ರಾಷ್ಟ್ರ ದ್ವಜ ಒಪ್ಪಲ್ಲ, ರಾಷ್ಟ್ರಗೀತೆ ಒಪ್ಪಲ್ಲ. ಮೋದಿ, ಅಶೋಕ, ಯತ್ನಾಳ ಎಲ್ಲರೂ ಆರ್ ಎಸ್ ಎಸ್ ಅಂತಾರೆ. ಯಾವ ಮೂಲೆಯಿಂದ ನಾವು ರಾಷ್ಟ್ರಭಕ್ತ ಸಂಘಟನೆ ಎಂದು ಹೇಳುತ್ತೀರಿ.
ಬೇರೆ ಯಾರಾದರೂ ಆಯುಧ ಹಿಡಿದುಕೊಂಡು ಓಡಾಡಿದ್ರೆ ಎಫ್ ಐ ಆರ್ ಮಾಡುತ್ತೀರಿ. ಇವರು ಬಡಿಗೆ ದೊಣ್ಣೆ ಹಿಡಿದು ಕೊಂಡು ಓಡಾಡಿದ್ರೆ ಯಾಕೆ ಎಫ್ ಐ ಆರ್ ಮಾಡಬಾರದು ಎಂದು ತಂಗಡಗಿ ಪ್ರಶ್ನಿಸಿದ್ದಾರೆ.
Laxmi News 24×7